Site icon Vistara News

ದೇವರ ಸೇಡು ಕ್ರೂರವಾಗಿರುತ್ತದೆ, ರಾಜೀವ್​ ಗಾಂಧಿಯ ಛಿದ್ರವಾದ ದೇಹದ ಒಂದು ತುಂಡೂ ಸಿಗಲಿಲ್ಲ: ಆಜಂ ಖಾನ್ ವಿವಾದ

azam khan

#image_title

ನವ ದೆಹಲಿ: ರಾಜಕೀಯ ನಿಂತ ನೀರಲ್ಲ. ಇಲ್ಲಿನ ಸನ್ನಿವೇಶ ಪ್ರತಿದಿನ ಬದಲಾಗುತ್ತಿರುತ್ತದೆ ಎಂಬ ಬಗ್ಗೆ ಮಾತನಾಡುವ ಭರದಲ್ಲಿ ಸಮಾಜವಾದಿ ನಾಯಕ ಆಜಂ ಖಾನ್ (Azam Khan) ಅವರು ವಿವಾದವೊಂದನ್ನು ಸೃಷ್ಟಿಸಿದ್ದಾರೆ. ಆ ದೇವರು ತೀರಿಸಿಕೊಳ್ಳುವ ಪ್ರತೀಕಾರ ಯಾವಾಗಲೂ ಅತ್ಯಂತ ಕ್ರೂರವಾಗಿರುತ್ತದೆ. ರಾಜೀವ್ ಗಾಂಧಿಯವರನ್ನೇ ನೋಡಿ, ಅವರ ಜತೆ ಅದೆಷ್ಟೆಲ್ಲ ಸಂಖ್ಯೆಯ ಸಂಸದರು ಇದ್ದರು. ಆದರೆ ಅವರು ಮೃತಪಟ್ಟ ವೇಳೆ ಛಿದ್ರವಾದ ದೇಹದ ಒಂದು ತುಂಡೂ ಸಿಗಲಿಲ್ಲ’ ಎಂದು ಹೇಳಿದ್ದು ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ.

ಉತ್ತರ ಪ್ರದೇಶದ ರಾಂಪುರ ಮುನ್ಸಿಪಲ್ಟಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಸಮಾಜವಾದಿ ಪಕ್ಷದ ಅಭ್ಯರ್ಥಿ ಫಾತಿಮಾ ಜಾಬಿ ಪರ ಪ್ರಚಾರ ನಡೆಸಿದ ಆಜಂ ಖಾನ್ ‘ನಾನು ಇಂದಿರಾಗಾಂಧಿ ಆಡಳಿತವನ್ನು ನೋಡಿದ್ದೇನೆ. ಅವರಿಗೆ ಏನಾಯಿತು. ರಾಜೀವ್ ಗಾಂಧಿಗೆ ಏನಾಯಿತು. ಅಷ್ಟೆಲ್ಲ ಸಂಸದರಿದ್ದರೂ ಕೊನೇ ಕ್ಷಣದಲ್ಲಿ ಅವರ ದೇಹದ ಒಂದು ತುಂಡು ಕೂಡ ಸಿಗಲಿಲ್ಲ. ಸಂಜಯ್​ ಗಾಂಧಿಯವರಂತವರೂ ಆಕಾಶದಲ್ಲಿ ಹಾರಾಡುತ್ತಾರೆ, ಪೀಸ್​ಪೀಸ್ ಆಗಿ ಪತ್ತೆಯಾಗುತ್ತಾರೆ’ ಎಂದು ಹೇಳಿದ್ದಾರೆ.

ತಮ್ಮ 40 ವರ್ಷದ ರಾಜಕೀಯ ಅನುಭವವನ್ನು ಹಂಚಿಕೊಂಡ ಆಜಂ ಖಾನ್​ ‘ಕಾವಲಿಯಿಂದ ರೊಟ್ಟಿ ಯಾವಾಗ ಮಗುಚಿ ಬೀಳುತ್ತದೆ ಎಂಬುದು ಗೊತ್ತಾಗುವುದಿಲ್ಲ. ಒಮ್ಮೆ ಸರ್ಕಾರ ಬದಲಾಗುತ್ತಿದ್ದಂತೆ ಎಲ್ಲವೂ ಬದಲಾಗುತ್ತದೆ. ಆಡಳಿತ, ಪೊಲೀಸರು ಎಲ್ಲರೂ ಬದಲಾಗುತ್ತಾರೆ. ಯಾವುದೋ ಸರ್ಕಾರವಿದ್ದಾಗ ನಮ್ಮ ಮನೆಯ ಬಾಗಿಲು, ಗೋಡೆ ಮುರಿದ ಪೊಲೀಸರು, ನಾವು ಸರ್ಕಾರ ರಚನೆ ಮಾಡಿದಾಗ ನಮ್ಮೆದುರು ನಿಂತು ಸೆಲ್ಯೂಟ್ ಹೊಡೆಯುತ್ತಾರೆ. ಈ ಬದಲಾವಣೆ ಪ್ರಕ್ರಿಯೆ ನಿರಂತರ’ ಎಂದು ಹೇಳಿದರು. ಈ ಮೂಲಕ ಆಜಂ ಖಾನ್​ ಬಿಜೆಪಿ ಸರ್ಕಾರವನ್ನೂ ವ್ಯಂಗ್ಯ ಮಾಡಿದರು.

ಇದನ್ನೂ ಓದಿ: Karnataka Election: ಉತ್ತರ ಪ್ರದೇಶ ಮಾದರಿ ಎಂದ ಯೋಗಿಗೆ ಸಿದ್ದರಾಮಯ್ಯ 10 ಸವಾಲು; ಇದೇನಾ ಮಾದರಿ?

ಆಜಂ ಖಾನ್​
ಆಜಂ ಖಾನ್​ ಅವರು ರಾಂಪುರದ ಮಾಜಿ ಶಾಸಕ. 2017ರಲ್ಲಿ ಯೋಗಿ ಆದಿತ್ಯನಾಥ್​ ಅವರ ನೇತೃತ್ವದ ಸರ್ಕಾರ ಬಂದಾಗಿನಿಂದ ಇವರ ವಿರುದ್ಧ 90ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್​ಗಳು ದಾಖಲಾಗಿವೆ. ದ್ವೇಷ ಭಾಷಣ ಕೇಸ್​​ನಲ್ಲಿ ಮೂರು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ, ತಮ್ಮ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. 2020ರಲ್ಲಿ ಅಲಹಾಬಾದ್​ ಕೋರ್ಟ್​ನಿಂದ ಜಾಮೀನು ಪಡೆದು, ಸದ್ಯ ಹೊರಗೆ ಇದ್ದಾರೆ.

Exit mobile version