Site icon Vistara News

Har Ghar Tiranga | ಮೋದಿ ಕರೆಗೆ ಭಾರಿ ಬೆಂಬಲ, ತಿರಂಗಾ ಜತೆಗಿರುವ 5 ಕೋಟಿ ಸೆಲ್ಫಿ ಅಪ್‌ಲೋಡ್‌!

Har Ghar Tiranga

ನವದೆಹಲಿ: ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಕರೆ ನೀಡಿದರು, ಯಾವುದಾದರೂ ಅಭಿಯಾನಕ್ಕೆ ಬೆಂಬಲ ಕೋರಿದರು ಎಂದರೆ ಅಷ್ಟೇ ಸಾಕು. ಆ ಕರೆಗೆ, ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು ಅಂತಲೇ ಅರ್ಥ. ಕೊರೊನಾ ಸಂದರ್ಭದಲ್ಲಿ ವೈದ್ಯರು, ಆರೋಗ್ಯ ಸಿಬ್ಬಂದಿಗೆ ಗೌರವ ಸೂಚಿಸುವುದು, ದೀಪ ಬೆಳಗುವುದು ಸೇರಿ ಹಲವು ಅಭಿಯಾನಗಳಿಗೆ ವ್ಯಕ್ತವಾದ ಬೆಂಬಲವೇ ಇದಕ್ಕೆ ಸಾಕ್ಷಿ. ಇದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದ್ದು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಮೋದಿ ನೀಡಿದ ಹರ್‌ ಘರ್‌ ತಿರಂಗಾ (Har Ghar Tiranga) ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.

ಹರ್‌ ಘರ್‌ ತಿರಂಗಾ ಅಭಿಯಾನದ ಕುರಿತು ಜುಲೈ ೨೨ರಂದು ಮಾತನಾಡಿದ್ದ ಮೋದಿ, ಇದೇ ಹೆಸರಿನ ವೆಬ್‌ಸೈಟ್‌ಗೆ ತಿರಂಗಾ ಜತೆಗಿರುವ ಸೆಲ್ಫಿ ಅಪ್‌ಲೋಡ್‌ ಮಾಡುವಂತೆ ಕರೆ ನೀಡಿದ್ದರು. ಅದರಂತೆ, ಹರ್‌ ಘರ್‌ ತಿರಂಗಾ ವೆಬ್‌ಸೈಟ್‌ಗೆ ಇದುವರೆಗೆ ಐದು ಕೋಟಿ ಸೆಲ್ಫಿಗಳು ಅಪ್‌ಲೋಡ್‌ ಆಗಿವೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ತಿಳಿಸಿದೆ.

“ಆಗಸ್ಟ್‌ ೧೫ರ ಸಂಜೆ ನಾಲ್ಕು ಗಂಟೆ ವೇಳೆಗೆ ಐದು ಕೋಟಿಗೂ ಅಧಿಕ ಸೆಲ್ಫಿಗಳು ಅಪ್‌ಲೋಡ್‌ ಆಗಿವೆ. ಇದು ಅಭಿಯಾನಕ್ಕೆ ಸಿಕ್ಕ ಅಭೂತಪೂರ್ವ ಬೆಂಬಲಕ್ಕೆ ಸಾಕ್ಷಿಯಾಗಿದೆ,ʼʼ ಎಂದು ಸಚಿವಾಲಯ ಹೇಳಿದೆ. ಸೆಲ್ಫಿ ಅಪ್‌ಲೋಡ್‌ ಮಾಡಿದವರಿಗೆ ಕೇಂದ್ರ ಸರಕಾರದಿಂದ ಒಂದು ಪ್ರಮಾಣಪತ್ರವೂ ಸಿಗಲಿದೆ. ಇದೇ ಅಭಿಯಾನಕ್ಕೆ ಬೆಂಬಲವಾಗಿ ಕೋಟ್ಯಂತರ ಜನ ಮನೆ ಮೇಲೆ ಧ್ವಜಾರೋಹಣ ಮಾಡಿ ದೇಶಾಭಿಮಾನ ಮೆರೆದಿದ್ದಾರೆ.

ಇದನ್ನೂ ಓದಿ | Independence Day | ಹೊಸಪೇಟೆಯಲ್ಲಿ 405 ಅಡಿ ಎತ್ತರದ ಬೃಹತ್ ಧ್ವಜ ಸ್ತಂಭದ ಮೇಲೆ ಹಾರಾಡಿದ ತಿರಂಗಾ!

Exit mobile version