ನವದೆಹಲಿ: ಲಾಡ್ಜಿಂಗ್ ದೈತ್ಯ ‘ಓಯೋ’ ಕಂಪನಿ (OYO) ಸಂಸ್ಥಾಪಕ, ದೇಶದ ಯುವ ಬಿಲಿಯನೇರ್ ಎನಿಸಿರುವ ರಿತೇಶ್ ಅಗರ್ವಾಲ್ (Ritesh Agarwal) ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ಮದುವೆಗೆ ಆಮಂತ್ರಣ ನೀಡಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಅವರ ಆಶೀರ್ವಾದದೊಂದಿಗೆ ನಾವು ಹೊಸ ಜೀವನಕ್ಕೆ ಕಾಲಿಡುತ್ತಿದ್ದೇವೆ. ಪ್ರಧಾನಿಯವರು ನಮಗೆ ಆತಿಥ್ಯ ನೀಡಿದ್ದನ್ನು ನೋಡಿ ಹೃದಯ ತುಂಬಿ ಬಂದಿದೆ. ಮಹಿಳಾ ಸಬಲೀಕರಣದ ದಿಸೆಯಲ್ಲಿ ಕಾರ್ಯನಿರ್ವಹಿಸಿದ ನನ್ನ ತಾಯಿಗೂ ಮೋದಿ ಅವರನ್ನು ಭೇಟಿಯಾಗಿದ್ದು ಖುಷಿ ತಂದಿದೆ. ನಿಮ್ಮ ಅಮೂಲ್ಯ ಸಮಯ ನೀಡಿಗೆ, ನಮಗೆ ಶುಭ ಹಾರೈಸಿದ್ದಕ್ಕೆ ಧನ್ಯವಾದಗಳು” ಎಂದು ರಿತೇಶ್ ಅಗರ್ವಾಲ್ ಟ್ವೀಟ್ ಮಾಡಿದ್ದಾರೆ. ಹಾಗೆಯೇ, ಮೋದಿ ಜತೆಗಿನ ಫೋಟೊ ಹಂಚಿಕೊಂಡಿದ್ದಾರೆ.
ತಾಯಿ, ಭಾವಿ ಪತ್ನಿ ಜತೆ ಮೋದಿಯನ್ನು ಭೇಟಿಯಾದ ಅಗರ್ವಾಲ್
ಮಾರ್ಚ್ ೫ರಂದು ೨೯ ವರ್ಷದ ರಿತೇಶ್ ಅಗರ್ವಾಲ್ ಅವರು ದೆಹಲಿಯ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ವಿವಾಹವಾಗಲಿದ್ದಾರೆ. ದೇಶದ ಹಲವು ಗಣ್ಯರಿಗೆ ಆಹ್ವಾನಿಸಲಾಗಿದೆ ಎಂದು ತಿಳಿದುಬಂದಿದೆ. ರಿತೇಶ್ ಅಗರ್ವಾಲ್ ಅವರು ತಮ್ಮ ತಾಯಿ, ಭಾವಿ ಪತ್ನಿ ಜತೆಗೆ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಭಾರತ ಸೇರಿ ಜಗತ್ತಿನ ೮೦ ನಗರಗಳಲ್ಲಿ ೮೦೦ಕ್ಕೂ ಹೆಚ್ಚು ಓಯೋ ಹೋಟೆಲ್‌ಗಳಿವೆ.
ಇದನ್ನೂ ಓದಿ: Narendra Modi : ಪ್ರಧಾನಿ ನರೇಂದ್ರ ಮೋದಿಯ ಆತಿಥ್ಯ ಪಡೆದ ಕರ್ನಾಟಕದ ಕ್ರಿಕೆಟಿಗರು ಇವರು