ಭುವನೇಶ್ವರ: ಒಡಿಶಾದಲ್ಲಿ ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ ಪದ್ಮಶ್ರೀ ಪುರಸ್ಕೃತ ಸಾಧಕಿ ಕಮಲಾ ಪೂಜಾರಿ (Kamala Pujari) ಅವರಿಗೆ ಐಸಿಯುನಲ್ಲಿಯೇ ನೃತ್ಯ ಮಾಡುವಂತೆ ಒತ್ತಾಯಿಸಲಾಗಿದೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಕಮಲಾ ಪೂಜಾರಿ ಅವರು ಒಡಿಶಾದ ಕಟಕ್‌ನಲ್ಲಿರುವ ಆಸ್ಪತ್ರೆಗೆ ತೆರಳಿದ್ದಾರೆ. ಚಿಕಿತ್ಸೆ ಪಡೆದು, ಇನ್ನೇನು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಬೇಕು ಎನ್ನುವಷ್ಟರಲ್ಲಿಯೇ ಪೂಜಾರಿ ಅವರಿಗೆ ನೃತ್ಯ ಮಾಡುವಂತೆ ಒತ್ತಾಯಿಸಲಾಗಿದೆ.
ಸಮಾಜಿಕ ಕಾರ್ಯಕರ್ತೆಯೊಬ್ಬರು ನೃತ್ಯ ಮಾಡುತ್ತಿರುವ ವಿಡಿಯೊ ವೈರಲ್ ಆಗಿದೆ. ಇದರಲ್ಲಿ ಕಮಲಾ ಪೂಜಾರಿ ಅವರೂ ನೃತ್ಯ ಮಾಡುತ್ತಿರುವುದು ದಾಖಲಾಗಿದೆ. ಕಮಲಾ ಪೂಜಾರಿ ಅವರಿಗೆ ನೃತ್ಯ ಮಾಡಲು ಒತ್ತಾಯಿಸಲಾಗಿದೆ ಎಂಬ ವಿಷಯ ಬಹಿರಂಗವಾಗುತ್ತಲೇ ಸಾಮಾಜಿಕ ಕಾರ್ಯಕರ್ತೆ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಲಾಗುತ್ತಿದೆ.
“ನನಗೆ ನೃತ್ಯ ಮಾಡುವ ಯಾವ ಬಯಕೆಯೂ ಇರಲಿಲ್ಲ. ಆದರೆ, ಸಾಮಾಜಿಕ ಕಾರ್ಯಕರ್ತೆಯು ಕುಣಿಯಲು ಒತ್ತಾಯಿಸಿದರು. ಅನಿವಾರ್ಯವಾಗಿ ನಾನು ನೃತ್ಯ ಮಾಡಬೇಕಾಯಿತು. ನನಗೆ ಮೊದಲೇ ಅನಾರೋಗ್ಯದಿಂದ ಬಳಲುತ್ತಿದ್ದೆ, ಕುಣಿದ ಬಳಿಕ ಇನ್ನಷ್ಟು ಸುಸ್ತಾಯಿತು” ಎಂದು ಪೂಜಾರಿ ಬೇಸರ ವ್ಯಕ್ತಪಡಿಸಿದ್ದಾರೆ.
ಮಮತಾ ಪೂಜಾರಿ ಅವರು ಒಡಿಶಾದ ಪಜಾರ ಬುಡಕಟ್ಟು ಸಮುದಾಯಕ್ಕೆ ಸೇರಿದ್ದಾರೆ. ಸಾವಯವ ಕೃಷಿಯಲ್ಲಿ ಇವರು ಮಾಡಿದ ಸಾಧನೆ ಪರಿಗಣಿಸಿ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿದೆ. ಇಂತಹ ಸಾಧಕಿಗೆ ಬಲವಂತವಾಗಿ ನೃತ್ಯ ಮಾಡಿಸಿದ ಕಾರಣ ಪಜಾರ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಲವಂತ ಮಾಡಿದ ಸಾಮಾಜಿಕ ಕಾರ್ಯಕರ್ತೆಯನ್ನು ಮಮತಾ ಬೆರೆರಾ ಎಂದು ಗುರುತಿಸಲಾಗಿದ್ದು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗಿದೆ.
ಇದನ್ನೂ ಓದಿ | 2007ರಲ್ಲಿ ತೀಸ್ತಾ ಸೆಟಲ್ವಾಡ್‌ಗೆ ಪದ್ಮ ಪುರಸ್ಕಾರ ದೊರೆತಿದ್ದು ಹೇಗೆ? ಯಾಕೆ?; ಎಸ್‌ಐಟಿ ವರದಿ ಇದು !