Site icon Vistara News

Monsoon Session 2023: ಸಂಸತ್​ ಮುಂಗಾರು ಅಧಿವೇಶನ ಜು.20ರಿಂದ; ಪ್ರಲ್ಹಾದ್​ ಜೋಶಿ ಟ್ವೀಟ್​

new Parliament building

ಈ ಬಾರಿಯ ಸಂಸತ್ ಮುಂಗಾರು ಅಧಿವೇಶನ (Monsoon session 2023) ಜುಲೈ 20ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್​ 11ಕ್ಕೆ ಮುಕ್ತಾಯಗೊಳ್ಳುತ್ತದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Minister Pralhad Joshi) ಇಂದು ಟ್ವೀಟ್ ಮಾಡಿ ತಿಳಿಸಿದ್ದಾರೆ. 2023ನೇ ಸಾಲಿನ ಮುಂಗಾರು ಅಧಿವೇಶನ (Parliament Monsoon session) ಜುಲೈ 20ರಿಂದ ಪ್ರಾರಂಭವಾಗಲಿದೆ. ಈ ಅವಧಿಯಲ್ಲಿ ಎಲ್ಲ ಪಕ್ಷಗಳೂ ಉಪಯೋಗಕರವಾದ ಚರ್ಚೆ ನಡೆಸಬೇಕು. ಶಾಸಕಾಂಗಕ್ಕೆ ಸಂಬಂಧಪಟ್ಟ ಮತ್ತು ಇತರ ವಿಷಯಗಳ ಕುರಿತು, ದೇಶದ ಜನರಿಗೆ ಅನುಕೂಲವಾಗುವಂತೆ ಚರ್ಚೆ ನಡೆಸಬೇಕು’ ಎಂದು ಸಚಿವರು ಹೇಳಿದ್ದಾರೆ.

ಹಾಗೇ, ಇನ್ನೊಂದು ಟ್ವೀಟ್ ಮಾಡಿದ ಪ್ರಹ್ಲಾದ್​ ಜೋಶಿ, ‘ಈ ಸಲ 23 ದಿನ ಅಧಿವೇಶನ ನಡೆಯಲಿದೆ. ಆದರೆ ಬೈಠೆಕ್​ಗೆ ಅಂದರೆ ಚರ್ಚೆಗೆ ಸಿಗುವುದು 17ದಿನಗಳು. ಅವಧಿಯನ್ನು ಎಲ್ಲ ಪಕ್ಷಗಳೂ ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಹೇಳಿದ್ದಾರೆ. ಈ ಸಲ ಮುಂಗಾರು ಅಧಿವೇಶನ ನೂತನ ಸಂಸತ್ ಭವನದಲ್ಲಿ ನಡೆಯುವುದು ವಿಶೇಷವಾಗಿದೆ. ಅಂದರೆ ಜುಲೈ 20ರಂದು ಸಂಸತ್​ ಮುಂಗಾರು ಅಧಿವೇಶನ ಹಳೇ ಕಟ್ಟಡದಲ್ಲಿಯೇ ಪ್ರಾರಂಭವಾಗಿ, ಬಳಿಕ ಹೊಸ ಕಟ್ಟಡಕ್ಕೆ ವರ್ಗಾವಣೆಗೊಳ್ಳಲಿದೆ ಎಂದೂ ಹೇಳಲಾಗಿದೆ. ಲೋಕಸಭೆ ಚುನಾವಣೆಗೆ ಇನ್ನೊಂದೇ ವರ್ಷ ಬಾಕಿ ಇರುವುದರಿಂದ ಈ ಸಲದ ಮುಂಗಾರು ಅಧಿವೇಶನದಲ್ಲಿ ಪ್ರತಿಪಕ್ಷಗಳು ಹಲವು ಮಹತ್ವದ ವಿಷಯಗಳನ್ನು ಇಟ್ಟುಕೊಂಡು ಕೇಂದ್ರ ಸರ್ಕಾರವನ್ನು ಪ್ರಶ್ನಿಸಲು ಸಜ್ಜಾಗುತ್ತಿವೆ.

ಇದನ್ನೂ ಓದಿ: ಅಮೆರಿಕ ಸಂಸತ್ತಲ್ಲಿ ಮೋದಿ ವೈಭವ; ಸೆಲ್ಫಿ, ಆಟೋಗ್ರಾಫ್​ಗೆ ಮುಗಿಬಿದ್ದ ಯುಎಸ್​ ಸಂಸದರು, ಭಾರತಾಂಬೆಗೆ ಜೈಕಾರ

Exit mobile version