Site icon Vistara News

Lok Sabha : ಉನ್ನತ ಸಮಿತಿಯಿಂದ ಸಂಸತ್​ ಭದ್ರತೆ ಉಲ್ಲಂಘನೆಯ ಪ್ರಕರಣ ತನಿಖೆ

Parliament Security Breach

ನವದೆಹಲಿ: ಸಂಸತ್ತಿನ ಭದ್ರತಾ (Lok Sabha ) ಉಲ್ಲಂಘನೆಯ ಬಗ್ಗೆ ಆಳವಾದ ತನಿಖೆಗಾಗಿ ಉನ್ನತ ಮಟ್ಟದ ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ (Om Birla) ಶನಿವಾರ ಹೇಳಿದ್ದಾರೆ. ಸಮಿತಿಯು ಕೆಲಸ ಮಾಡಲು ಪ್ರಾರಂಭಿಸಿದೆ ಮತ್ತು ಮಾಹಿತಿಯನ್ನು ಶೀಘ್ರದಲ್ಲೇ ಸದನದೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಲೋಕಸಭಾ ಸ್ಪೀಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಸದನದ ಒಳಗೆ ನಡೆದ ಘಟನೆಯ ಬಗ್ಗೆ ಆಳವಾದ ತನಿಖೆಗಾಗಿ ಉನ್ನತ ಮಟ್ಟದ ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ಕೆಲಸ ಮಾಡಲು ಪ್ರಾರಂಭಿಸಿದೆ. ಈ ಸಮಿತಿಯ ವರದಿಯನ್ನು ಶೀಘ್ರದಲ್ಲೇ ಸದನದೊಂದಿಗೆ ಹಂಚಿಕೊಳ್ಳಲಾಗುವುದು” ಎಂದು ಲೋಕಸಭಾ ಸ್ಪೀಕರ್ ತಮ್ಮ ಹೇಳಿಕೆಯಲ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಾನು ಉನ್ನತಾಧಿಕಾರ ಸಮಿತಿಯನ್ನು ಸಹ ರಚಿಸಿದ್ದೇನೆ, ಅದು ಸಂಸತ್ತಿನ ಸಂಕೀರ್ಣದಲ್ಲಿ ಭದ್ರತೆಯ ವಿವಿಧ ಅಂಶಗಳನ್ನು ಪರಿಶೀಲಿಸುತ್ತದೆ. ಅಂತಹ ಘಟನೆಗಳು ಪುನರಾವರ್ತನೆಯಾಗದಂತೆ ಖಚಿತಪಡಿಸಿಕೊಳ್ಳಲು ದೃಢವಾದ ಕ್ರಿಯಾ ಯೋಜನೆಯನ್ನು ರೂಪಿಸುತ್ತದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

6ನೇ ಆರೋಪಿ ಮಹೇಶ್ ಕುಮಾವತ್ ಸೆರೆ

ಲೋಕ ಸಭೆಯಲ್ಲಿ (Lok Sabha) ಭದ್ರತೆಯ ಉಲ್ಲಂಘನೆ ಪ್ರಕರಣದಲ್ಲಿ ದೆಹಲಿ ಪೊಲೀಸರು ಶನಿವಾರ ಆರನೇ ಆರೋಪಿಯನ್ನು ಬಂಧನವನ್ನು ಮಾಡಿದ್ದಾರೆ, ಇಬ್ಬರು ವ್ಯಕ್ತಿಗಳು ಸದನಕ್ಕೆ ಹಾರಿ ಬಣ್ಣದ ಹೊಗೆಯನ್ನು ಸ್ಫೋಟಿಸುವ ಮೂಲಕ ಅಪರಾಧ ಎಸಗಿದ್ದರು. ಈ ಕೃತ್ಯದ ‘ಮಾಸ್ಟರ್ ಮೈಂಡ್’ ಲಲಿತ್ ಝಾಗೆ ದೆಹಲಿಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪದ ಮೇಲೆ ಮಹೇಶ್ ಕುಮಾವತ್ ನನ್ನು ಪೊಲೀಶರು ವಶಕ್ಕೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ : Security Breach In Lok Sabha: ಜೀವಂತ ದಹನ, ರಾಜಕೀಯ ಪಕ್ಷ ಸ್ಥಾಪನೆ; ಆರೋಪಿಗಳ ಯೋಜನೆ!

2001ರ ಸಂಸತ್​ ದಾಳಿಗೆ 10 ವರ್ಷವಾದ ಡಿಸೆಂಬರ್ 13 ರಂದು ನಡೆದ ಆರೋಪಿಗಳು ಲೋಕಸಭೆಗೆ ಮೇಲೆ ದಾಳಿ ನಡೆಸಿ ಭಯ ಸೃಷ್ಟಿಸಿದ್ದರು. ಪಶ್ಚಿಮ ಬಂಗಾಳ ಮೂಲದ ಲಲಿತ್ ಝಾ ಅವರನ್ನು ಕಳೆದ ರಾತ್ರಿ ಬಂಧಿಸಿದ ನಂತರ ಶುಕ್ರವಾರ ಏಳು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಸಂಸತ್ತಿನ ಭದ್ರತೆಯನ್ನು ಉಲ್ಲಂಘಿಸಲು ಪಿತೂರಿ ನಡೆಸಲು ಆರೋಪಿಗಳು ಅನೇಕ ಬಾರಿ ಭೇಟಿಯಾದರು ಎಂದು ಅವರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ಹೇಳಿದ್ದಾರೆ.

ಲಲಿತ್ ಕೃತ್ಯದ ಮಾಸ್ಟರ್​ ಮೈಂಡ್​

ಬುಧವಾರ ಇಬ್ಬರು ಆಗುಂತಕರು ಲೋಕಸಭೆಗೆ ಬಂದು ಬಣ್ಣದ ಸ್ಮೋಕ್ ಬಾಂಬ್ ಸಿಡಿಸಿ (Color Smoke Bomb) ಆತಂಕದ ಪರಿಸ್ಥಿತಿ ಸೃಷ್ಟಿಸಿದ್ದರು. ಈ ಲೋಕಸಭೆ ಭದ್ರತಾ ಲೋಪ ಪ್ರಕರಣಕ್ಕೆ (Security Breach in Lok Sabha) ಸಂಬಂಧಿಸಿದಂತೆ, ಕರ್ನಾಟಕದ ಮನೋರಂಜನ್ ಸೇರಿದಂತೆ ಒಟ್ಟು ಐವರನ್ನು ಬಂಧಿಸಲಾಗಿತ್ತು. ಇಡೀ ಪ್ರಕರಣದ ಮಾಸ್ಟರ್‌ಮೈಂಡ್ ಎನ್ನಲಾಗಿದ್ದ ಲಲಿತ್ ಝಾ(Masterminde Lalit Jha), ದಿಲ್ಲಿಯ ಕರ್ತವ್ಯ ಪಥ ಪೊಲೀಸ್ ಠಾಣೆಗೆ ಹೋಗಿ ಗುರುವಾರ ಶರಣಾಗಿದ್ದಾನೆ(Surrendered to police). ಬಳಿಕ ಆತನನ್ನು ಔಪಚಾರಿಕವಾಗಿ ನವದೆಹಲಿ ಜಿಲ್ಲಾ ಪೊಲೀಸರು (Delhi Police) ಅರೆಸ್ಟ್ ಮಾಡಿ, ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಿದ್ದಾರೆ. ಕೋಲ್ಕೊತಾ ಮೂಲದ ಶಿಕ್ಷಕ ಲಲಿತ್ ಝಾ, ಘಟನೆ ನಡೆದ ಕೂಡಲೇ ಪರಾರಿಯಾಗಿದ್ದ.

ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಶಿಫಾರಸಿನ ಅನ್ವಯ ಪಾಸ್ ‌ಪಡೆದುಕೊಂಡಿದ್ದ ಡಿ. ಮನೋರಂಜನ್ ಮತ್ತು ಉತ್ತರ ಪ್ರದೇಶದ ಸಾಗರ್ ಶರ್ಮಾ ಅವರು ಸಂಸತ್ ಭದ್ರತೆಯನ್ನು ಭೇದಿಸಿದ್ದರು ಮತ್ತು ಲೋಕಸಭೆ ವಿಸಿಟರ್ ಗ್ಯಾಲರಿಗೆ ಆಗಮಿಸಿದ್ದರು. ಕಲಾಪ ನಡೆಯುತ್ತಿದ್ದ ವೇಳೆ, ಮನೋರಂಜನ್ ಮತ್ತು ಸಾಗರ್ ಶರ್ಮಾ ಅವರು ವಿಸಿಟರ್ ಗ್ಯಾಲರಿಯಂದ ಸಂಸದರು ಇರುವಲ್ಲಿಗೆ ಜಂಪ್ ಮಾಡಿ, ಬಣ್ಣದ ಸ್ಮೋಕ್ ಬಾಂಬ್ ಸಿಡಿಸಿದ್ದರು. ಇದು ಭಾರೀ ಆತಂಕಕ್ಕೆ ಕಾರಣವಾಗಿತ್ತು. ಅಲ್ಲದೇ, ಸಂಸತ್ತಿನ ಹೊರಗೆ ನೀಲಂ ಆಜಾದ್ ಮತ್ತು ಅಮೋಲ್ ಶಿಂಧೆ ಅವರು ಬಣ್ಣದ ಸ್ಮೋಕ್ ಬಾಂಬ್ ಸಿಡಿಸಿದ್ದರು. ಬಳಿಕ ಈ ನಾಲ್ವರು ಅಲ್ಲದೇ, ವಿಕ್ಕಿ ಶರ್ಮಾ ಎಂಬಾತನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದರು. ಆದರೆ, ಸಂಸತ್ ಭದ್ರತಾ ಲೋಪ ಪ್ರಕರಣದ ಮುಖ್ಯ ಆರೋಪಿಯಾಗಿದ್ದ ಲಲಿತ್ ಝಾ ಮಾತ್ರ ತಲೆ ಮರೆಸಿಕೊಂಡಿದ್ದ ಮತ್ತು ಆತನನ್ನು ಗುರುವಾರ ಬಂಧಿಸಲಾಗಿದೆ.

Exit mobile version