Site icon Vistara News

IndiGo Passenger: ಹಾರುತ್ತಿದ್ದ ವಿಮಾನದಲ್ಲೇ ರಕ್ತ ಕಾರಿದ ಪ್ರಯಾಣಿಕ; ಲ್ಯಾಂಡಿಂಗ್‌ ಬಳಿಕ ಸಾವು

IndiGo Flight

Passenger vomits blood mid-air on Mumbai To Ranchi IndiGo airlines Flight, dies

ಮುಂಬೈ: ಮಹಾರಾಷ್ಟ್ರದ ಮುಂಬೈನಿಂದ ರಾಂಚಿಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರೊಬ್ಬರು (IndiGo Passenger) ರಕ್ತದ ವಾಂತಿ (Blood Vomit) ಮಾಡಿ ಮೃತಪಟ್ಟಿದ್ದಾರೆ. ಹಾರುತ್ತಿದ್ದ ವಿಮಾನದಲ್ಲಿ ಅವರು ರಕ್ತ ಕಾರಿದ ಕಾರಣ ವಿಮಾನವನ್ನು ಕೂಡಲೇ ನಾಗ್ಪುರದಲ್ಲಿರುವ ಬಾಬಾಸಾಹೇಬ್‌ ಅಂಬೇಡ್ಕರ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡ್‌ ಮಾಡಿ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.

ಮುಂಬೈ ವಿಮಾನ ನಿಲ್ದಾಣದಿಂದ ಸೋಮವಾರ (ಆಗಸ್ಟ್‌ 21) ಸಂಜೆ ಮುಂಬೈ ವಿಮಾನ ನಿಲ್ದಾಣದಿಂದ ಇಂಡಿಗೋ ವಿಮಾನ ಹಾರಾಟ ಆರಂಭಿಸಿತು. ಇದಾದ ಕೆಲವೇ ನಿಮಿಷಗಳಲ್ಲಿ ಡಿ ತಿವಾರಿ (62) ಅವರು ರಕ್ತ ಕಾರಿದ್ದಾರೆ. ಮೆಡಿಕಲ್‌ ಎಮರ್ಜೆನ್ಸಿ ಕಾರಣದಿಂದಾಗಿ ನಾಗ್ಪುರದಲ್ಲಿ ವಿಮಾನವನ್ನು ತುರ್ತು ಲ್ಯಾಂಡ್‌ ಮಾಡಲಾಗಿದೆ. ಕೂಡಲೇ ಅವರನ್ನು ಕಿಮ್ಸ್‌ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಅವರು ಅಷ್ಟೊತ್ತಿಗಾಗಲೇ ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

ರಾತ್ರಿ ಎಂಟು ಗಂಟೆ ಸುಮಾರಿಗೆ ಡಿ ತಿವಾರಿ ಅವರು ರಕ್ತ ಕಾರಲು ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ. “ವ್ಯಕ್ತಿಯು ಕ್ಷಯರೋಗದಿಂದ ಬಳಲುತ್ತಿದ್ದರು. ಹಾಗಾಗಿ ಅವರಿಗೆ ರಕ್ತದ ವಾಂತಿಯಾಗಿದೆ. ಅವರನ್ನು ಕಿಮ್ಸ್‌ ಆಸ್ಪತ್ರೆಗೆ ದಾಖಲಿಸುತ್ತಲೇ ಪರಿಶೀಲನೆ ನಡೆಸಲಾಯಿತು. ಆದರೆ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದಾರೆ. ಅವರ ಶವವನ್ನು ಸರ್ಕಾರಿ ಮೆಡಿಕಲ್‌ ಕಾಲೇಜಿಗೆ ಸಾಗಿಸಲಾಗಿದೆ” ಎಂದು ಕಿಮ್ಸ್‌ ಆಸ್ಪತ್ರೆಯ ಸಂವಹನ ವಿಭಾಗದ ಅಧಿಕಾರಿ ಏಜಾಜ್‌ ಶಮಿ ಮಾಹಿತಿ ನೀಡಿದರು.

ಇದನ್ನೂ ಓದಿ: IndiGo: ಏರ್‌ ಇಂಡಿಯಾ ದಾಖಲೆಯನ್ನೇ ಉಡೀಸ್ ಮಾಡಿದ ಇಂಡಿಗೋ! ಏನಿದು ದಾಖಲೆ?

ಸಂತಾಪ ಸೂಚಿಸಿದ ಇಂಡಿಗೋ

ಘಟನೆ ಕುರಿತು ಇಂಡಿಗೋ ಕೂಡ ಪ್ರಕಟಣೆ ತಿಳಿಸಿದೆ. “ಮುಂಬೈನಿಂದ ರಾಂಚಿಗೆ ತೆರಳುತ್ತಿದ್ದ ಇಂಡಿಗೋ 6E 5093 ವಿಮಾನವು ಮೆಡಿಕಲ್‌ ಎಮರ್ಜನ್ಸಿ ಕಾರಣದಿಂದ ನಾಗ್ಪುರದಲ್ಲಿ ತುರ್ತು ಲ್ಯಾಂಡ್‌ ಮಾಡಲಾಯಿತು. ಪ್ರಯಾಣಿಕರೊಬ್ಬರಿಗೆ ಆರೋಗ್ಯ ಸಮಸ್ಯೆಯಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ದುರದೃಷ್ಟವಶಾತ್‌ ಅವರು ಮೃತಪಟ್ಟಿದ್ದಾರೆ. ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂಬದಾಗಿ ಪ್ರಾರ್ಥಿಸುತ್ತೇವೆ” ಎಂದು ತಿಳಿಸಿದೆ.

Exit mobile version