ಭೋಪಾಲ್: 13 ವರ್ಷದ ಬಾಲಕನೊಬ್ಬ ತನ್ನ 9 ವರ್ಷದ ತಂಗಿಯ ಮೇಲೆ ಅತ್ಯಾಚಾರ ಎಸಗಿ (Physical Assault) ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ. ತನಿಖಾಧಿಕಾರಿಗಳು 3 ತಿಂಗಳಲ್ಲಿ ನಡೆಸಿದ 50 ಕ್ಕೂ ಹೆಚ್ಚು ಡಿಎನ್ಎ ಪರೀಕ್ಷೆಗಳ ಬಳಿಕ , ಬಾಲಕಿ ಖಾಸಗಿ ಭಾಗಗಳಲ್ಲಿ ಕಂಡುಬಂದ ವೀರ್ಯ ಆಕೆಯ ಹಿರಿಯ ಸಹೋದರನ ವೀರ್ಯದೊಂದಿಗೆ ಹೊಂದಿಕೆಯಾದ ಬಳಿಕ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ಎಲ್ಲವನ್ನೂ ತಿಳಿದಿದ್ದ ತಾಯಿ ಮತ್ತು ಇಬ್ಬರು ಹಿರಿಯ ಸಹೋದರಿಯರು ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಹೀಗಾಗಿ ಆರೋಪಿಗಳು, ಆತನ ತಾಯಿ ಮತ್ತು ಇಬ್ಬರು ಅಕ್ಕಂದಿರನ್ನು ಬಂಧಿಸಲಾಗಿದೆ.
ವರದಿಯ ಪ್ರಕಾರ, ಮೂರು ತಿಂಗಳ ಹಿಂದೆ ರೇವಾದ ಜಾವಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆರೋಪಿ ರಾತ್ರಿ ತನ್ನ ಮೊಬೈಲ್ ಫೋನ್ ನಲ್ಲಿ ಪೋರ್ನ್ ವಿಡಿಯೊ ನೋಡಿದ್ದಾನೆ. ಬಳಿಕ ತನ್ನ ಪಕ್ಕದಲ್ಲಿ ಮಲಗಿದ್ದ ಸಹೋದರಿಯನ್ನು ಲೈಂಗಿಕವಾಗಿ ಶೋಷಿಸಿದ್ದಾನೆ. ಆಕೆ ತಂದೆಗೆ ಹೇಳುವುದಾಗಿ ಹೇಳಿದಾಗ ಕೊಲೆ ಮಾಡಿದ್ದ.
3 ತಿಂಗಳಲ್ಲಿ 55 ಜನರ ಡಿಎನ್ಎ ಪರೀಕ್ಷೆ
ಪೊಲೀಸರು 55 ಜನರ ಡಿಎನ್ಎ ಪರೀಕ್ಷೆಗಳನ್ನು ನಡೆಸಿದ್ದರು. ಆದರೆ ಬಾಲಕಿಯ ದೇಹದಲ್ಲಿ ಕಂಡುಬಂದ ಮಾದರಿಯು ಯಾವುದಕ್ಕೂ ಹೋಲಿಕೆಯಾಗಿರಲಿಲ್ಲ. ಕಿರಿಯ ಮಗಳನ್ನು ಕಳೆದುಕೊಂಡು ಈಗಾಗಲೇ ಮೂರು ತಿಂಗಳುಗಳು ಕಳೆದರೂ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಕುಟುಂಬ ಆರೋಪಿಸಿದ್ದರು. ಅಂತಿಮವಾಗಿ ಪೊಲೀಸರು ಸಹೋದರನನ್ನು ಪರೀಕ್ಷೆಗೆ ಕರೆದೊಯ್ದ ಆತನ ವೀರ್ಯವು ಮಾದರಿ ಪರಿಶೀಲನೆ ನಡೆಸಿದಾಗ ಹೊಂದಿಕೆಯಾಗಿತ್ತು.
ಇದನ್ನೂ ಓದಿ: Karnataka Rain : ಮಳೆಗೆ ಮನೆ ಮುಳುಗಡೆಯಾದ ಸುದ್ದಿ ಕೇಳಿ ಮನೆ ಯಜಮಾನ ಹೃದಯಾಘಾತದಿಂದ ಸಾವು
ಪೊಲೀಸರು ಪ್ರಶ್ನಿಸಿದ ಬಳಿಕ ಆತ ತನ್ನ ಅಪರಾಧ ಒಪ್ಪಿಕೊಂಡಿದ್ದಾನೆ. ಮೊಬೈಲ್ನಲ್ಲಿ ಅಶ್ಲೀಲ ಚಿತ್ರವನ್ನು ನೋಡಿದ್ದೆ. ತನ್ನ ಕಾಮಕ್ಕೆ ಮಣಿದು ಆಕೆ ಮೇಲೆ ಅತ್ಯಾಚಾರ ಎಸಗಿದೆ ಎಂದು ಹೇಳಿಕೊಂಡಿದ್ದಾನೆ. ಎಲ್ಲವನ್ನೂ ತಂದೆಗೆ ಹೇಳುತ್ತೇನೆ ಎಂದು ಹೇಳಿದಾಗ ಕೊಂದಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
ಆರೋಪಿ ತನ್ನ ತಾಯಿ ಮತ್ತು ಹಿರಿಯ ಸಹೋದರಿಯರಿಗೆ ಎಲ್ಲವನ್ನೂ ಹೇಳಿ. ಅವರು ಸೇರಿಕೊಂಡು ತಂದೆ ಮತ್ತು ಪೊಲೀಸರಿಂದ ರಕ್ಷಿಸಿದ್ದರು.
ಭಾರತೀಯ ದಂಡ ಸಂಹಿತೆಯಡಿ ಅತ್ಯಾಚಾರ, ಕೊಲೆ ಮತ್ತು ಸಾಕ್ಷ್ಯಗಳನ್ನು ಮರೆಮಾಚಿದ್ದಕ್ಕಾಗಿ ಪ್ರಕರಣ ದಾಖಲಾಗಿದ್ದು, ನಾಲ್ವರನ್ನು ಜೈಲಿಗೆ ಕಳುಹಿಸಲಾಗಿದೆ. ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಆರೋಪದ ಮೇಲೆ ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.