Site icon Vistara News

Air India Pee Case | ಏರ್​ ಇಂಡಿಯಾ ವಿಮಾನದ ಪೈಲೆಟ್​, ನಾಲ್ವರು ಸಿಬ್ಬಂದಿ ಅಮಾನತು; ಕ್ಷಮೆ ಯಾಚಿಸಿದ ಸಿಇಒ

Indian-origin man booked for smoking onboard London-Mumbai Air India flight

ಏರ್‌ ಇಂಡಿಯಾ

ನವ ದೆಹಲಿ: ನ್ಯೂಯಾರ್ಕ್​​ನಿಂದ ದೆಹಲಿಗೆ ಬರುತ್ತಿದ್ದ ಏರ್​ ಇಂಡಿಯಾ ವಿಮಾನದಲ್ಲಿ 34 ವರ್ಷದ ಶಂಕರ್​ ಶರ್ಮಾ ಮದ್ಯಪಾನ ಮಾಡಿ, 72 ವರ್ಷದ ಮಹಿಳೆ ಮೇಲೆ ಮೂತ್ರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ವಿಮಾನದ ಪೈಲೆಟ್​ ಮತ್ತು ಇತರ ನಾಲ್ವರು ಸಿಬ್ಬಂದಿಯನ್ನು ಏರ್​ ಇಂಡಿಯಾ ಅಮಾನತು ಮಾಡಿದೆ ಮತ್ತು ಅವರಿಗೆ ಶೋಕಾಸ್​ ನೋಟಿಸ್​ ನೀಡಿದೆ.

‘ಕುಡಿದ ಮತ್ತಿನಲ್ಲಿದ್ದ ಪ್ರಯಾಣಿಕ ತನ್ನ ಸಹ ಪ್ರಯಾಣಿಕಳ ಮೇಲೆ ಮೂತ್ರ ವಿಸರ್ಜನೆ ಮಾಡಿದಾಗಿನ ಸಂದರ್ಭವನ್ನು ಅಂದು ವಿಮಾನದಲ್ಲಿದ್ದ ಪೈಲೆಟ್​ ಮತ್ತು ಸಿಬ್ಬಂದಿ ಇನ್ನಷ್ಟು ಸೂಕ್ಷ್ಮವಾಗಿ, ಅತ್ಯುತ್ತಮವಾಗಿ ನಿಭಾಯಿಸಬಹುದಿತ್ತು. ಆತ ರಾತ್ರಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದಾಗ ಮತ್ತು ವಿಮಾನ ದೆಹಲಿಯಲ್ಲಿ ಲ್ಯಾಂಡ್ ಆದಾಗ ವಿಮಾನ ಸಿಬ್ಬಂದಿ ಆ ಸಮಯದಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬಹುದಿತ್ತು ಎಂಬುದನ್ನು ಏರ್​ ಇಂಡಿಯಾ ಒಪ್ಪಿಕೊಳ್ಳುತ್ತದೆ. ಅಂದು ಮಹಿಳೆಗೆ ಆದ ಕೆಟ್ಟ ಅನುಭವದ ಬಗ್ಗೆ ನಮಗೆ ವಿಷಾದವಿದೆ. ಈ ಬಗ್ಗೆ ಕೂಲಂಕಷ ತನಿಖೆ ನಡೆಸುತ್ತಿದ್ದೇವೆ. ಇದೊಂದೇ ಅಲ್ಲ, ನಮ್ಮ ಏರ್​ ಇಂಡಿಯಾ ವಿಮಾನದಲ್ಲಿ ಸಹ ಪ್ರಯಾಣಿಕರ ಅಸಹ್ಯಕರ ವರ್ತನೆಯಿಂದ ತೊಂದರೆಗೀಡಾದ ಎಲ್ಲ ಪ್ರಯಾಣಿಕರಲ್ಲೂ ಕ್ಷಮೆ ಯಾಚಿಸುತ್ತೇವೆ’ ಎಂದು ಏರ್​ ಇಂಡಿಯಾ ಸಿಇಒ ಕ್ಯಾಂಪ್​​ಬೆಲ್ ವಿಲ್ಸನ್​ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಾಗೇ ಏರ್​ ಇಂಡಿಯಾ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಅಲ್ಕೋಹಾಲ್​ ಸರ್ವೀಸ್​ (ಮದ್ಯ ಪೂರೈಕೆ)ಗೆ ಸಂಬಂಧಪಟ್ಟ ನೀತಿಯನ್ನು ಮರುಪರಿಶೀಲನೆ ಮಾಡುವುದಾಗಿಯೂ ಕ್ಯಾಂಪ್​ಬೆಲ್​ ಮಾಹಿತಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ಆಗದಂತೆ ತಡೆಯಲು, ಒಂದೊಮ್ಮೆ ಘಟಿಸಿದರೆ ಅದನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ವಿಮಾನ ಸಿಬ್ಬಂದಿಗೆ ತಿಳಿವಳಿಕೆ ನೀಡಲು, ಅಗತ್ಯ ಕಾರ್ಯಕ್ರಮಗಳನ್ನು-ತರಬೇತಿಗಳನ್ನು ಹಮ್ಮಿಕೊಳ್ಳಲಾಗುವುದು ಎಂದೂ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಏರ್​ ಇಂಡಿಯಾ ವಿಮಾನದಲ್ಲಿ ಕಂಬಳಿ ಹೊದ್ದು ಕುಳಿತಿದ್ದವಳ ಮೇಲೆ ಮೂತ್ರ ವಿಸರ್ಜಿಸಿದ ಕುಡುಕ ಪ್ರಯಾಣಿಕ; ಇದು ಮತ್ತೊಂದು ಪ್ರಕರಣ!

Exit mobile version