Site icon Vistara News

Plane Crash | ತರಬೇತಿ ವಿಮಾನ ಪತನ, ಹಿರಿಯ ಪೈಲಟ್ ಸಾವು, ಮತ್ತೊಬ್ಬರಿಗೆ ತೀವ್ರ ಗಾಯ

Plane Crash @ Madhya Pradesh, Rewa

ನವದೆಹಲಿ: ಮಧ್ಯಪ್ರದೇಶದಲ್ಲಿ ಸಂಭವಿಸಿದ ಟ್ರೈನೀ ವಿಮಾನ ಅಪಘಾತದಲ್ಲಿ (Plane Crash) ಸೀನಿಯರ್ ಪೈಲಟ್ ಮೃತಪಟ್ಟಿದ್ದು, ತರಬೇತಿ ಪಡೆಯುತ್ತಿದ್ದ ಟ್ರೈನೀ ಪೈಲಟ್ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ದುರ್ಘಟನೆಯು ಮಧ್ಯಪ್ರದೇಶದ ರೇವಾ ಎಂಬಲ್ಲಿ ಸಂಭವಿಸಿದೆ.

ಪತನವಾದ ವಿಮಾನವು ಖಾಸಗಿ ವಿಮಾನಯಾನ ತರಬೇತಿ ಅಕಾಡೆಮಿಗೆ ಸೇರಿದ ವಿಮಾನವಾಗಿದೆ. ಮಂಜು ತುಂಬಿದ ರಾತ್ರಿ ವೇಳೆ, ವಿಮಾನವನ್ನು ಇಳಿಸುವಾಗ ದೇವಸ್ಥಾನದ ಗೋಪುರಕ್ಕೆ ತಾಗಿದೆ ಮತ್ತು ವಿಮಾನವು ಪತನವಾಗಿದೆ ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ ಮಿಶ್ರಾ ಅವರು ತಿಳಿಸಿದ್ದಾರೆ.

ಪಟನಾ ಮೂಲದ, 50 ವರ್ಷದ ಕ್ಯಾಪ್ಟನ್ ವಿಮಲ್ ಕುಮಾರ್ ಅವರು ಮೃತಪಟ್ಟ ಪೈಲಟ್ ಆಗಿದ್ದಾರೆ. ಟ್ರೈನೀ ಪೈಲಟ್ ಸೋನು ಯಾದವ್(23) ಅವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಸಂಜಯ್ ಗಾಂಧಿ ಮೆಡಿಕಲ್ ಕಾಲೇಜ್ ಹಾಸ್ಪಿಟಲ್‌ಗೆ ದಾಖಲಿಸಲಾಗಿದೆ. ಸೋನು ಯಾದವ್ ಅವರು ಜೈಪುರ ಮೂಲದವರಾಗಿದ್ದಾರೆ. ಈ ವಿಮಾನ ಪತನದ ಕುರಿತು ತನಿಖೆಗೆ ಆದೇಶಿಸಲಾಗಿದೆ.

ಇದನ್ನೂ ಓದಿ | IAF Mig 21 Crash | ಮಿಗ್‌-21 ಯುದ್ಧ ವಿಮಾನ ಪತನ; ಇಬ್ಬರು ಪೈಲಟ್‌ಗಳ ದುರಂತ ಸಾವು

Exit mobile version