ರಾಜಸ್ಥಾನದ ಭರತ್ಪುರ ಎಂಬಲ್ಲಿ ಚಾರ್ಟರ್ಡ್ ವಿಮಾನವೊಂದು ಪತನ (Plane Crashes)ವಾಗಿದೆ. ಈ ವಿಮಾನ ಹಾರಾಟ ನಡೆಸುತ್ತಿದ್ದಾಗಲೇ ಬೆಂಕಿ ಕಾಣಿಸಿಕೊಂಡಿತ್ತು, ಬಳಿಕ ಕೆಳಗೆ ಬಿದ್ದಿದೆ ಎಂದು ಸ್ಥಳೀಯರು ಹೇಳಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಹಾಗೇ, ಅಲ್ಲಿನ ಜಿಲ್ಲಾಧಿಕಾರಿ, ಇನ್ನಿತರ ಅಧಿಕಾರಿಗಳು ಘಟನೆ ನಡೆದ ಸ್ಥಳದಲ್ಲೇ ಇದ್ದಾರೆ. ವಿಮಾನದ ಪೈಲೆಟ್ ಕೂಡ ಎಲ್ಲಿಯೂ ಕಾಣಿಸುತ್ತಿಲ್ಲ. ಉಳಿದಂತೆ ಅದರಲ್ಲಿ ಯಾರಿದ್ದರು ಎಂಬ ಮಾಹಿತಿಯೂ ಸ್ಪಷ್ಟವಾಗಿ ಲಭ್ಯವಾಗಿಲ್ಲ.
ವಿಮಾನ ಪತನದ ಬಗ್ಗೆ ಮಾಹಿತಿ ನೀಡಿದ ಭರತ್ಪುರ ಎಸ್ಪಿ ಶ್ಯಾಮ್ಸಿಂಗ್ ‘ಈ ವಿಮಾನ ಹಾರಾಡುವ ವೇಳೆ ಆಕಾಶ ಮಾರ್ಗದಲ್ಲಿಯೇ ಬೆಂಕಿ ಕಾಣಿಸಿಕೊಂಡು ಕೆಳಗೆ ಬಿದ್ದಿದೆ. ಗಾಳಿಯ ತೀವ್ರತೆಗೆ ಇಡೀ ವಿಮಾನ ಬೆಂಕಿಯಲ್ಲಿ ಉರಿದುಹೋಗಿದೆ. ಹೀಗಾಗಿ ಇದು ಯಾವ ಸ್ವರೂಪದ ವಿಮಾನವಾಗಿತ್ತು, ಅಂದರೆ ಭಾರತೀಯ ವಾಯುಪಡೆಗೆ ಸೇರಿದ್ದೋ, ಇನ್ಯಾವುದೇ ಸಾಮಾನ್ಯ ವಿಮಾನವಾಗಿತ್ತೋ ಎಂಬುದನ್ನು ಈಗಲೇ ಹೇಳುವುದು ಕಷ್ಟ’ ಎಂದು ತಿಳಿಸಿದ್ದಾರೆ. ‘ಅಷ್ಟೇ ಅಲ್ಲ, ವಾಯುಪಡೆ ಘಟಕದ ಸಿಬ್ಬಂದಿಯೂ ಸ್ಥಳಕ್ಕೆ ಆಗಮಿಸಿದ್ದು, ಪೈಲೆಟ್ನನ್ನು ಪತ್ತೆ ಮಾಡುವ ಕಾರ್ಯಾಚರಣೆ ನಡೆಯುತ್ತಿದೆ’ ಶೀಘ್ರವೇ ಹೆಚ್ಚಿನ ಮಾಹಿತಿ ನೀಡುತ್ತೇವೆ ಎಂದು ಹೇಳಿದ್ದಾರೆ.
ಮಧ್ಯಪ್ರದೇಶದ ಮೊರೆನಾದಲ್ಲಿ ವಾಯುಪಡೆಯ ಎರಡು ಫೈಟರ್ ಜೆಟ್ಗಳು ಇಂದು ಪತನಗೊಂಡಿವೆ. ಈ ಸ್ಥಳದಿಂದ 100 ಕಿಮೀ ದೂರದಲ್ಲಿರುವ ಭರತ್ಪುರದಲ್ಲಿ ಇನ್ನೊಂದು ವಿಮಾನ ಪತನವಾಗಿದೆ. ಇವೆರಡೂ ಕೇಸ್ನ ಬಗ್ಗೆ ತನಿಖೆ ಪ್ರಾರಂಭವಾಗಿದೆ.
ಇದನ್ನೂ ಓದಿ: IAF Fighter Jets Crash: ಭಾರತೀಯ ವಾಯುಪಡೆಯ 2 ಯುದ್ಧ ವಿಮಾನಗಳು ಮಧ್ಯಪ್ರದೇಶದಲ್ಲಿ ಪತನ; ಪೈಲೆಟ್ಗಳು ಆಸ್ಪತ್ರೆಗೆ ದಾಖಲು