Site icon Vistara News

Ram Navami 2023: ಶ್ರೀರಾಮ ತಪಸ್ಸು-ಸಂಯಮದ ಸಾಕಾರ; ದೇಶದ ಜನರಿಗೆ ರಾಮ ನವಮಿ ಶುಭ ಕೋರಿದ ಪ್ರಧಾನಿ ಮೋದಿ

PM Narendra Modi Again Emerges As Most Popular Global Leader

#image_title

ಪ್ರಧಾನಿ ನರೇಂದ್ರ ಮೋದಿಯವರು ಇಂದು ದೇಶದ ಜನರಿಗೆ ಶ್ರೀ ರಾಮನವಮಿ ಹಬ್ಬದ (Ram Navami 2023) ಶುಭಾಶಯ ತಿಳಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, ‘ಶ್ರೀರಾಮ ನವಮಿಯ ಈ ಪವಿತ್ರ ಸಂದರ್ಭದಲ್ಲಿ ದೇಶದ ಸಮಸ್ತ ಜನರಿಗೆ ಹೃತ್ಪೂರ್ವಕ ಶುಭಾಶಯಗಳು. ತ್ಯಾಗ, ತಪಸ್ಸು, ಸಂಯಮ ಮತ್ತು ಸಂಕಲ್ಪವನ್ನು ಆಧರಿಸಿದ್ದ ಮರ್ಯಾದಾ ಪುರುಷೋತ್ತಮ, ಪರಮಪುರುಷ ಭಗವಾನ್ ಶ್ರೀರಾಮಚಂದ್ರನ ಜೀವನ, ಪ್ರತಿ ಯುಗದಲ್ಲೂ ಸ್ಫೂರ್ತಿಯಾಗಿಯೇ ಇರುತ್ತದೆ’ ಎಂದು ತಿಳಿಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್ ಮಾಡಿ ‘ಮರ್ಯಾದಾ ಪುರುಷೋತ್ತಮ ಶ್ರೀರಾಮನ ಆದರ್ಶಗಳನ್ನು ನಾವು ಪ್ರತಿಯೊಬ್ಬರೂ ನಮ್ಮದಾಗಿಸಿಕೊಳ್ಳಬೇಕು. ಜೀವನದ ಪ್ರತಿ ಹಂತದಲ್ಲೂ ನಾವು ಅದನ್ನು ಪಾಲಿಸಬೇಕು. ಈ ಮೂಲಕ ಭಾರತ ದೇಶವನ್ನು ವೈಭವಗೊಳಿಸಬೇಕು ಎಂದು ಹೇಳಿದ್ದಾರೆ. ಇನ್ನು ಗೃಹ ಸಚಿವ ಅಮಿತ್ ಶಾ ಅವರು ಟ್ವೀಟ್ ಮಾಡಿ ‘ಪ್ರಭು ಶ್ರೀರಾಮ ಧರ್ಮ ಮತ್ತು ಸತ್ಯದ ಹಾದಿಯಲ್ಲಿ ನಡೆದವನು. ಎಂಥದ್ದೇ ಕಷ್ಟಕರ ಸಂದರ್ಭ ಎದುರಾದರೂ ತಾಳ್ಮೆ ಮತ್ತು ದಯಾಗುಣವನ್ನು ಬಿಡಬಾರದು ಎಂಬುದನ್ನು ತೋರಿಸಿಕೊಟ್ಟವನು. ಶ್ರೀರಾಮ ಎಲ್ಲರನ್ನೂ ಆಶೀರ್ವದಿಸಲಿ’ ಎಂದಿದ್ದಾರೆ.

ಇದನ್ನೂ ಓದಿ: Ram Navami 2023 : ರಘುಕುಲತಿಲಕ ಶ್ರೀರಾಮನ ಪೂಜಿಸುವ ಮಹಾಪರ್ವ ರಾಮನವಮಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಶ್ರೀರಾಮನವಮಿ ಪ್ರಯುಕ್ತ ದೇಶದ ಜನರಿಗೆ ಶುಭಕೋರಿದ್ದಾರೆ. ದೇಶದ ನಾಗರಿಕರಿಗೆ ಶ್ರೀರಾಮನವಮಿ ಹಬ್ಬದ ಶುಭಾಶಯಗಳು. ಈ ಮಂಗಳಕರವಾದ ಹಬ್ಬ ಎಲ್ಲರ ಬದುಕಲ್ಲೂ ಸಮೃದ್ಧಿ ಮತ್ತು ಸಂತೋಷ ತರಲಿ ಎಂದು ಹಾರೈಸಿದ್ದಾರೆ.

ಪ್ರತಿವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ದಿನ ಶ್ರಿರಾಮನ ನವಮಿ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಶ್ರೀರಾಮ ಹುಟ್ಟಿದ ದಿನ ಎಂದು ಭಾವಿಸಿ, ದೇಶಾದ್ಯಂತ ಹಿಂದುಗಳು ಸಂಭ್ರಮದಿಂದ ಹಬ್ಬ ಮಾಡುತ್ತಾರೆ. ಸಾಮಾನ್ಯವಾಗಿ ಪ್ರತವರ್ಷ ಮಾರ್ಚ್​ ಅಥವಾ ಏಪ್ರಿಲ್​ ತಿಂಗಳಲ್ಲಿ ಈ ಶ್ರೀರಾಮನವಿ ಹಬ್ಬ ಇರುತ್ತದೆ. ಶ್ರೀರಾಮನಿಗೆ ವಿಶೇಷ ಪೂಜೆ, ನೈವೇದ್ಯ ಅರ್ಪಣೆ, ರಾಮಾಯಣ ಪಾರಾಯಣಗಳು ನಡೆಯುತ್ತವೆ. ರಾಮನ ಭಕ್ತರಲ್ಲಿ ಕೆಲವರು ಉಪವಾಸವನ್ನೂ ಮಾಡುತ್ತಾರೆ. ಹೊಸ ಕೆಲಸಕ್ಕೆ ಇದು ತುಂಬ ಪ್ರಶಸ್ತವಾದ ದಿನ ಎಂಬ ನಂಬಿಕೆಯೂ ಹಿಂದೂಗಳಲ್ಲಿ ಇದೆ.

Exit mobile version