Site icon Vistara News

Eid Mubarak: ಸಮಾಜದಲ್ಲಿ ಸೌಹಾರ್ದತೆಯ ಮನೋಭಾವ ಹೆಚ್ಚಲಿ; ಈದ್​ ಉಲ್​ ಫಿತರ್​ ಶುಭಾಶಯ ಕೋರಿದ ಪ್ರಧಾನಿ ಮೋದಿ

Eid ul Fitr 2023

#image_title

ಇಂದು ಭಾರತ ಸೇರಿ ವಿಶ್ವದ ಎಲ್ಲೆಡೆ ಮುಸ್ಲಿಂ ಸಮುದಾಯದವರು ಈದ್​ ಉಲ್ ಫಿತರ್​ ಹಬ್ಬದ (Eid-ul-Fitr 2023) ಸಂಭ್ರಮದಲ್ಲಿ ಇದ್ದಾರೆ. ಪವಿತ್ರ ರಂಜಾನ್ ತಿಂಗಳ ಉಪವಾಸ ಅಂತ್ಯವಾಗುವ ದಿನ ಚಂದ್ರ ಕಾಣಿಸಿದ ಬಳಿಕ ಅವರು ಈದ್​ ಉಲ್ ಫಿತರ್​ ಆಚರಣೆ ಮಾಡುತ್ತಾರೆ. ಇವತ್ತು ಹಬ್ಬದ ಸಂಭ್ರಮದಲ್ಲಿ ಇರುವ ಮುಸ್ಲಿಮರಿಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಯುಎಸ್​ ಅಧ್ಯಕ್ಷ ಜೋ ಬೈಡೆನ್​, ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಮತ್ತಿತರ ಗಣ್ಯರೆಲ್ಲ ಶುಭಕೋರಿದ್ದಾರೆ (Eid Mubarak). ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ‘ಈದ್​ ಉಲ್​ ಫಿತರ್​ ಹಬ್ಬದ ಶುಭಾಶಯಗಳು. ಸಮಾಜದಲ್ಲಿ ಸೌಹಾರ್ದತೆ ಮತ್ತು ಸಹಾನುಭೂತಿಯ ಮನೋಭಾವ ಹೆಚ್ಚಾಗಲಿ. ಎಲ್ಲರ ಆರೋಗ್ಯ ಮತ್ತು ಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ, ಈದ್ ಮುಬಾರಕ್’ ಎಂದು ಹೇಳಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಟ್ವೀಟ್ ಮಾಡಿ ‘ದೇಶದ ಎಲ್ಲ ಜನರಿಗೂ, ಅದರಲ್ಲೂ ವಿಶೇಷವಾಗಿ ಈದ್​ ಉಲ್ ಫಿತರ್​ ಆಚರಿಸುತ್ತಿರುವ ಮುಸ್ಲಿಂ ಸಹೋದರ/ಸಹೋದರಿಯರಿಗೆ ಹಬ್ಬದ ಶುಭಾಶಯಗಳು. ಈದ್​ ಎಂಬುದು ಪ್ರೀತಿ, ಸಹಾಯ ಮತ್ತು ಕರುಣೆಯನ್ನು ಸಾರುವ ಹಬ್ಬ . ನಾವೆಲ್ಲರೂ ಒಟ್ಟಾಗಿ, ಒಗ್ಗಟ್ಟಾಗಿ ಮುನ್ನಡೆಯೋಣ ಎಂಬ ನಿರ್ಣಯವನ್ನು ಅಂಗೀಕರಿಸುವ ಮೂಲಕ ಈದ್​ ಆಚರಿಸೋಣ’ ಎಂದು ಹೇಳಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ ‘ಪ್ರತಿಯೊಬ್ಬರಿಗೂ ಈದ್ ಮುಬಾರಕ್​. ಈ ಹಬ್ಬ ಶಾಂತಿ, ಸಂತೋಷ, ಸಮೃದ್ಧಿಯನ್ನು ಹೊತ್ತುತರಲಿ’ ಎಂದಿದ್ದಾರೆ.

ಇದನ್ನೂ ಓದಿ: Eid ul fitr 2023: ಹೊಸ ಬದುಕು, ಹೊಸ ಸಂಭ್ರಮದ ಆರಂಭವೇ ಈದ್‌ ಮುಬಾರಕ್

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಒಂದು ಚಿಕ್ಕ ವಿಡಿಯೊ ಶೇರ್ ಮಾಡಿಕೊಂಡು ಈದ್​ ಹಬ್ಬದ ಶುಭಕೋರಿದ್ದಾರೆ. ‘ರಂಜಾನ್ ತಿಂಗಳು ಮುಕ್ತಾಯವಾಗುತ್ತಿದೆ. ಯುಎಸ್​ನಲ್ಲಿ ಮುಸ್ಲಿಮರು ಈದ್ ಉಲ್ ಫಿತರ್ ಆಚರಣೆ ಮಾಡುತ್ತಿದ್ದಾರೆ. ಈ ಹೊತ್ತಲ್ಲಿ ಜಿಲ್​ (ಜೋ ಬೈಡೆನ್ ಪತ್ನಿ) ಮತ್ತು ನಾನು ಎಲ್ಲ ಮುಸ್ಲಿಮರಿಗೂ ಹಬ್ಬದ ಶುಭಾಶಯ ಕೋರುತ್ತಿದ್ದೇವೆ’ ಎಂದು ಹೇಳಿದ್ದಾರೆ. ಬ್ರಿಟನ್​ ಪ್ರಧಾನಿ ರಿಷಿ ಸುನಕ್ ಟ್ವೀಟ್ ಮಾಡಿ ‘ವಿಶ್ವದಾದ್ಯಂತ ಈದ್ ಉಲ್ ಫಿತರ್ ಹಬ್ಬ ಆಚರಣೆ ಮಾಡುತ್ತಿರುವ ಎಲ್ಲ ಮುಸ್ಲಿಮರಿಗೆ ಈದ್ ಮುಬಾರಕ್​’ ಎಂದಿದ್ದಾರೆ.

Exit mobile version