Site icon Vistara News

Vande Bharat Express: ಕೇರಳದಲ್ಲಿ ಇಂದು ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ; ದೇಶದ 11ನೇ ಟ್ರೇನ್​ ಇದು

PM Modi flags off Vande Bharat Express Train In Kerala

#image_title

ತಿರುವನಂತಪುರಂ: ಕೇರಳ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ (PM Modi) ಇಂದು ಆ ರಾಜ್ಯದ ಮೊದಲ ವಂದೇ ಭಾರತ್​ ಎಕ್ಸ್​ಪ್ರೆಸ್​​ ರೈಲಿ (Vande Bharat Express)ಗೆ ತಿರುವನಂತಪುರಂನಲ್ಲಿ ಚಾಲನೆ ನೀಡಿದರು. ಅಷ್ಟೇ ಅಲ್ಲ, ದೇಶದ ಮೊದಲ ವಾಟರ್​ ಮೆಟ್ರೋಕ್ಕೆ ಕೊಚ್ಚಿಯಲ್ಲಿ ಅವರು ಹಸಿರು ನಿಶಾನೆ ತೋರಿಸಿದ್ದಾರೆ. ಕೇರಳದಲ್ಲಿ ಇಂದು ಉದ್ಘಾಟನೆಗೊಂಡ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು, ತಿರುವನಂತಪುರಂ-ಕಾಸರಗೋಡು ಮಧ್ಯೆ ಸಂಚಾರ ಮಾಡಲಿದೆ. ತಿರುವನಂತಪುರಂನಿಂದ ಕಾಸರಗೋಡಿಗೆ ಸಾಗುವ ಮಾರ್ಗದಲ್ಲಿ ಕೊಲ್ಲಂ, ಕೊಟ್ಟಾಯಂ, ಎರ್ನಾಕುಲಂ, ತ್ರಿಶೂರ್​, ಪಲಕ್ಕಾಡ್​, ಪತನಂಥಿಟ್ಟ, ಮಲಪ್ಪುರಂ, ಕೊಯಿಕ್ಕೋಡ್​, ಕಣ್ಣೂರ್​ ಸೇರಿ 11 ಜಿಲ್ಲೆಗಳ ವಿವಿಧ ನಗರಗಳನ್ನು ಈ ರೈಲು ಹಾದುಹೋಗಲಿದ್ದು, 556 ಕಿಮೀ ದೂರವನ್ನು 8ತಾಸುಗಳಲ್ಲಿ ತಲುಪಲಿದೆ. ಅಂದಹಾಗೇ, ಇದು ದೇಶದ 16ನೇ ವಂದೇ ಭಾರತ್​ ಎಕ್ಸ್​ಪ್ರೆಸ್ ರೈಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಬಿಳಿ ಬಣ್ಣದ ಲುಂಗಿಯುಟ್ಟು, ಅದೇ ಬಣ್ಣದ ಶರ್ಟ್ ತೊಟ್ಟು, ಶಲ್ಯ ಹೊದ್ದು ಬೆಳಗ್ಗೆ 10.30ರ ಹೊತ್ತಿಗೆ ತಿರುವನಂತಪುರಂ ರೈಲ್ವೆ ಸ್ಟೇಶನ್​ಗೆ ಆಗಮಿಸಿದ್ದರು. ಕೇರಳ ರಾಜ್ಯಪಾಲ ಅರೀಫ್​ ಮೊಹಮ್ಮದ್ ಖಾನ್​, ಮುಖ್ಯಮಂತ್ರಿ ಪಿಣರಾಯಿ ವಿಜಯನ್​, ಕಾಂಗ್ರೆಸ್ ಸಂಸದ ಶಶಿ ತರೂರ್ ಉಪಸ್ಥಿತರಿದ್ದರು. ವಂದೇ ಭಾರತ್​ ರೈಲು ಮತ್ತು ವಾಟರ್ ಮೆಟ್ರೋ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ‘ಇಂದು ಕೇರಳಕ್ಕೆ ಮೊದಲ ವಂದೇ ಭಾರತ್ ಎಕ್ಸ್​​ಪ್ರೆಸ್​ ರೈಲು ಲಭ್ಯವಾಗಿದೆ. ಇನ್ನೊಂದೆಡೆ ವಾಟರ್ ಮೆಟ್ರೋಕ್ಕೆ ಕೂಡ ಚಾಲನೆ ಸಿಕ್ಕಿದೆ. ಇನ್ನೂ ಹಲವು ಅಭಿವೃದ್ಧಿ ಯೋಜನೆಗಳು ಮತ್ತು ಸಂಪರ್ಕ ಯೋಜನೆಗಳಿಗೆ ಇಂದು ಚಾಲನೆ ಸಿಕ್ಕಿದೆ. ಇಲ್ಲಿನ ಜನರಿಗೆ ಅಭಿನಂದನೆಗಳು’ ಎಂದು ಹೇಳಿದರು.

ತಿರುವನಂತಪುರಂನಿಂದ ಕೊಚ್ಚಿಗೆ ತೆರಳಿದ ಪ್ರಧಾನಿ ಮೋದಿ, ಅಲ್ಲಿ ವಾಟರ್​ಮೆಟ್ರೋಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ. ಇದು ದೇಶದ ಮೊದಲ ವಾಟರ್ ಮೆಟ್ರೋ ಆಗಿದ್ದು, 10 ದ್ವೀಪಗಳನ್ನು ಸಂಪರ್ಕಿಸುತ್ತದೆ. ಕೇರಳ ಸರ್ಕಾರ ಮತ್ತು ಜರ್ಮನಿಯ ಕೆಎಫ್​ಡಬ್ಲ್ಯೂ ಕೂಡ ಈ ಯೋಜನೆಗೆ ಹಣ ನೀಡಿವೆ. ಇದು ರಾಜ್ಯದ ಪಾಲಿಗೆ ಗೇಮ್​ ಚೇಂಜರ್​ ಆಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಕೇರಳ ವಾಟರ್​ ಮೆಟ್ರೋ ಬಗ್ಗೆ ಸಮಗ್ರ ಮಾಹಿತಿಗೆ ಇಲ್ಲಿ ಕ್ಲಿಕ್​ ಮಾಡಿ: Water Metro: ಕೊಚ್ಚಿಯಲ್ಲಿ ದೇಶದ ಮೊದಲ ವಾಟರ್ ಮೆಟ್ರೋಗೆ ಚಾಲನೆ, ಟಿಕೆಟ್‌ ದರ ಎಷ್ಟು?

Exit mobile version