Site icon Vistara News

Narendra Modi : ಮುದ್ದು ಮಕ್ಕಳ ಮುದ್ದಾದ ಅಪ್ಪುಗೆ ಪಡೆದ ಪ್ರಧಾನಿ ಮೋದಿ

Narendra Modi

ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020ರ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ದೆಹಲಿಯ ಭಾರತ್ ಮಂಟಪದಲ್ಲಿ ಆಯೋಜಿಸಲಾಗಿದ್ದ ಅಖಿಲ ಭಾರತೀಯ ಶಿಕ್ಷಾ ಸಮಾಗಮವನ್ನು ಉದ್ಘಾಟಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಶನಿವಾರ ಮಕ್ಕಳೊಂದಿಗೆ ಮಕ್ಕಳಂತೆ ಬೆರೆತು ಸಂಭ್ರಮಿಸಿದರು. ಹಲವಾರು ಅಂಬೆಗಾಲಿಡುವ ಮಕ್ಕಳಿಗೆ ಪ್ರಧಾನಿ ಮೋದಿ ಹಲವಾರು ಪ್ರಶ್ನೆಗಳನ್ನು ಕೇಳಿದರು. ಅಲ್ಲದೆ ಮಕ್ಕಳ ಚಟುವಟಿಕೆಗಳನ್ನು ನೋಡಿ ಅವರನ್ನು ಮುದ್ದಾಡಿದರು.

ಮುಗ್ಧ ಮಕ್ಕಳೊಂದಿಗೆ ಆನಂದದ ಕೆಲವು ಕ್ಷಣಗಳು. ಅವರ ಶಕ್ತಿ ಮತ್ತು ಉತ್ಸಾಹವು ಮನಸ್ಸನ್ನು ಉಲ್ಲಾಸಭರಿತವನ್ನಾಗಿಸುತ್ತದೆ ಎಂದು ಮೋದಿ ಟ್ವಿಟರ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಕೆಂಪು ಶರ್ಟ್ ಧರಿಸಿದ ಬಾಲಕನೊಬ್ಬ ತಮ್ಮನ್ನು ಭೇಟಿಯಾಗಲು ಬಂದಾಗ ಪ್ರಧಾನಿಯನ್ನು ತಬ್ಬಿಕೊಳ್ಳುವುದು ವಿಡಿಯೊದಲ್ಲಿ ಕಾಣುತ್ತಿದೆ. ಬಾಲಕನ ಚಟುವಟಿಕೆಗಳು ಪ್ರಧಾನಿಯವರ ಗಮನವನ್ನು ಸೆಳೆಯಿತು., ಇದಾದ ಕೆಲವೇ ಕ್ಷಣಗಳಲ್ಲಿ ಬಾಲಕ ಮತ್ತೆ ಪ್ರಧಾನಿ ಬಳಿಗೆ ಬಂದ. ಈ ವೇಳೆ ಮೋದಿ ಅವರು “ನಿಮಗೆಲ್ಲರಿಗೂ ಮೋದಿಜಿ ಗೊತ್ತಿದೆಯೇ?” ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಮಕ್ಕಳು ದೂರದರ್ಶನದಲ್ಲಿ ವೀಡಿಯೊಗಳು ಮತ್ತು ಛಾಯಾಚಿತ್ರಗಳಲ್ಲಿ ಅವರನ್ನು ನೋಡಿದ್ದೇವೆ ಎಂದು ಉತ್ತರಿಸಿದರು.

ನಂತರ ಪಿಎಂ ಮೋದಿ ಅವರು ಮಕ್ಕಳ ಬಳಿ, ಯಾವ ರೀತಿಯ ಆಟಗಳನ್ನು ಆಡುತ್ತೀರಿ ಮತ್ತು ಅವುಗಳನ್ನು ತೋರಿಸಿಕೊಡಿ ಹೇಳಿದರು. ಮಕ್ಕಳು ಅದೇ ರೀತಿ ಮಾಡಿದರು. ಆ ಬಳಿಕ ಮಕ್ಕಳು ಚಿತ್ರ ಬಿಡಿಸುವಲ್ಲಿಗೆ ಹೋಗಿ ಅದನ್ನು ಸಮೀಪದಿಂದ ನೋಡಿದರು ಮೋದಿ. ಅಲ್ಲದೆ ಮಕ್ಕಳ ಕೋರಿಕೆ ಮೇರೆಗೆ ಅವರ ಜತೆ ಫೋಟೋ ತೆಗಿಸಿಕೊಂಡರು. ಅಲ್ಲದೆ ಅವರೆಲ್ಲರಿಗೂ ಉತ್ತಮ ಆಹಾರ ಹಾಗೂ ಅಧ್ಯಯನದ ಪಾಠ ಹೇಳಿದರು.

ಸಮಾರಂಭ ಉದ್ಘಾಟನೆ

ಎರಡು ದಿನಗಳ ಕಾರ್ಯಕ್ರಮದ ಉದ್ಘಾಟನಾ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಜಗತ್ತು ಭಾರತವನ್ನು “ಹೊಸ ಸಾಧ್ಯತೆಗಳ ನರ್ಸರಿ” ಯನ್ನಾಗಿ ನೋಡುತ್ತಿದೆ. ಅನೇಕ ದೇಶಗಳು ಐಐಟಿ ಕ್ಯಾಂಪಸ್​ಗಳನ್ನು ತೆರೆಯಲು ಭಾರತಕ್ಕೆ ಆಹ್ವಾನ ನೀಡಿವೆ ಎಂದು ಹೇಳಿದರು.

ಇದನ್ನೂ ಓದಿ : ಮೋದಿಗೆ ಪ್ರಶಸ್ತಿ ನೀಡುವ ಕಾರ್ಯಕ್ರಮಕ್ಕೆ ಶರದ್‌ ಪವಾರ್‌ ಮುಖ್ಯ ಅತಿಥಿ; ‘ಇಂಡಿಯಾ’ದಲ್ಲಿ ಭುಗಿಲೆದ್ದ ಅಸಮಾಧಾನ

ಎನ್ಇಪಿ 2020ರ ಅಡಿಯಲ್ಲಿ ಶಿಕ್ಷಣದಲ್ಲಿ ಮಾತೃಭಾಷೆಯ ಬಳಕೆಯು ಭಾರತದ ವಿದ್ಯಾರ್ಥಿಗಳಿಗೆ “ಹೊಸ ರೀತಿಯ ನ್ಯಾಯವನ್ನು” ನೀಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ಇದು ಸಾಮಾಜಿಕ ನ್ಯಾಯದ ಕಡೆಗೆ “ಬಹಳ ಮಹತ್ವದ ಹೆಜ್ಜೆ” ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ 12 ಭಾರತೀಯ ಭಾಷೆಗಳಿಗೆ ಭಾಷಾಂತರಿಸಲಾದ ಶಿಕ್ಷಣ ಮತ್ತು ಕೌಶಲ ಪಠ್ಯಕ್ರಮ ಪುಸ್ತಕಗಳನ್ನು ಪ್ರಧಾನಿ ಬಿಡುಗಡೆ ಮಾಡಿದರು. ಪ್ರಧಾನ ಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ (ಪಿಎಂ-ಎಸ್ಆರ್​​ಐ) ಅಡಿಯಲ್ಲಿ ಅಸ್ತಿತ್ವದಲ್ಲಿರುವ 6,207 ಶಾಲೆಗಳನ್ನು ಮೇಲ್ದರ್ಜೆಗೇರಿಸಲು 630 ಕೋಟಿ ರೂ.ಗಳ ಮೊದಲ ಕಂತಿಗೆ ಅವರು ಚಾಲನೆ ನೀಡಿದರು.

Exit mobile version