ಇಂದು 51ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath Birthday) ಅವರಿಗೆ ಪ್ರಧಾನಿ ನರೇಂದ್ರ ಮೋದಿ (PM Modi) ಶುಭ ಕೋರಿದ್ದಾರೆ. ಹಾಗೇ, ಯೋಗಿ ಆದಿತ್ಯನಾಥ್ ಅವರ ಆಡಳಿತವನ್ನು ಶ್ಲಾಘಿಸಿದ್ದಾರೆ. ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ‘ಉತ್ತರ ಪ್ರದೇಶದ ಡೈನಾಮಿಕ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಜನ್ಮದಿನದ ಶುಭಾಶಯಗಳು. ಕಳೆದ ಆರು ವರ್ಷಗಳಲ್ಲಿ ಅವರು ರಾಜ್ಯದಲ್ಲಿ ಅತ್ಯುತ್ತಮವಾಗಿ ಆಡಳಿತ ನಡೆಸಿದ್ದಾರೆ. ಉತ್ತರ ಪ್ರದೇಶವನ್ನು ಎಲ್ಲ ವಿಭಾಗಗಳಲ್ಲೂ ಅಭಿವೃದ್ಧಿ ಪಡಿಸಿದ್ದಾರೆ. ಪ್ರಮುಖ ಪ್ಯಾರಾಮೀಟರ್ಗಳಲ್ಲಿ ಯುಪಿ ಅಭಿವೃದ್ಧಿ ಗಮನಾರ್ಹವಾಗಿ ದಾಖಲಾಗಿದೆ. ಯೋಗಿ ಜೀ ಅವರ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ. ಪ್ರಧಾನಿ ಮೋದಿಯವರು ಸಾಮಾನ್ಯವಾಗಿ ಪ್ರತಿವರ್ಷವೂ ಯೋಗಿ ಆದಿತ್ಯನಾಥ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಾರೆ. ಡೈನಾಮಿಕ್ ಸಿಎಂ ಎಂದೇ ಉಲ್ಲೇಖಿಸುತ್ತಾರೆ.
Birthday greetings to Uttar Pradesh's dynamic CM @myogiadityanath Ji. Over the last 6 years, he has provided great leadership to the state and ensured all-round progress. On key parameters, UP’s development has been remarkable. Praying for his long and healthy life.
— Narendra Modi (@narendramodi) June 5, 2023
ಯೋಗಿ ಆದಿತ್ಯನಾಥ್ ಹುಟ್ಟಿದ್ದು 1972ರಲ್ಲಿ. ಇವರ ಬಾಲ್ಯದ ಹೆಸರು ಅಜಯ್ ಕುಮಾರ್ ಬಿಷ್ಟ್. ಮೂಲತಃ ಉತ್ತರಾಖಂಡ್‌ನ ಪಂಚೂರ್ ಗ್ರಾಮದವರು. ಬಿಎಸ್‌ಸಿ ಪದವೀಧರರೂ ಹೌದು. ಅವರಿಗೆ ಬಾಲ್ಯದಲ್ಲಿ ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ಎಷ್ಟು ಆಸಕ್ತಿಯಿತ್ತೋ ಅಷ್ಟೇ ಅಧ್ಯಾತ್ಮದೆಡೆಗೂ ಮನಸು ಸೆಳೆಯುತ್ತಿತ್ತು. 19ನೇ ವಯಸ್ಸಿಗೆ ಮನೆಬಿಟ್ಟು, ಗೋರಖಪುರದ ಗೋರಖಾನಾಥ ಮಠದ ಮಹಾಂತ ವೈದ್ಯನಾಥರ ಸಂಪರ್ಕಕ್ಕೆ ಬರುತ್ತಾರೆ. ಅವರ ಶಿಷ್ಯರಾಗಿ ಸನ್ಯಾಸತ್ವವನ್ನೂ ಸ್ವೀಕರಿಸಿ ಯೋಗಿ ಆದಿತ್ಯನಾಥ್ ಆಗುತ್ತಾರೆ. 1998ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದಾಗ ಅವರಿಗೆ 24 ವರ್ಷ. ಬಳಿಕ 1999, 2004, 2009 ಮತ್ತು 2014ರ ಚುನಾವಣೆಗಳಲ್ಲೂ ನಿರಂತರವಾಗಿ ಗೆಲ್ಲುತ್ತಲೇ ಬಂದಿದ್ದಾರೆ. ಈ ಮಧ್ಯೆ ಗೋರಖನಾಥ ಮಠದ ಮಹಾಂತ ಅವೈದ್ಯನಾಥ ಅವರು ತೀರಿಕೊಂಡಿದ್ದರಿಂದ 2014ರಲ್ಲಿ ಆ ಮಠದ ಪೀಠಕ್ಕೆ ಏರುತ್ತಾರೆ.
ಇದನ್ನೂ ಓದಿ: ಗ್ಯಾಂಗ್ಸ್ಟರ್ಗಳ ಪ್ಯಾಂಟ್ ಒದ್ದೆಯಾಗುತ್ತಿದೆ, ಜೀವ ಉಳಿಸಿಕೊಳ್ಳಲು ಓಡುತ್ತಿದ್ದಾರೆ: ಸಿಎಂ ಯೋಗಿ ಆದಿತ್ಯನಾಥ್
2017ರಲ್ಲಿ ಮೊದಲ ಬಾರಿಗೆ ಉತ್ತರ ಪ್ರದೇಶದಲ್ಲಿ ಹಲವು ವರ್ಷಗಳ ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಯೋಗಿಯನ್ನು ಮುಖ್ಯಮಂತ್ರಿಯಾಗಿ ಮಾಡಿದಾಗ ಪಕ್ಷದೊಳಗಿನ ಹಲವರೇ ಅಸಮಾಧಾನಗೊಂಡಿದ್ದರು. ಈ ಸನ್ಯಾಸಿ ರಾಜ್ಯಭಾರ ಮಾಡಬಲ್ಲನೇ? ಎಂದು ಪ್ರತಿಪಕ್ಷಗಳು ಕುಹಕವಾಡಿದ್ದೂ ಇದೆ. ಆದರೆ ಎಲ್ಲದಕ್ಕೂ ತಮ್ಮ ಕೆಲಸ, ಆಡಳಿತ ಶೈಲಿಯ ಮೂಲಕವೇ ಯೋಗಿ ಆದಿತ್ಯನಾಥ್ ಉತ್ತರ ಕೊಟ್ಟಿದ್ದಾರೆ. ಅದಕ್ಕೆ ಪ್ರತಿಫಲವಾಗಿ ಈ ಬಾರಿ ನಡೆದ ವಿಧಾನಸಭೆ ಚುನಾವಣೆಯಲ್ಲೂ ಭರ್ಜರಿ ಗೆಲುವಿನೊಂದಿಗೆ ಎರಡನೇ ಅವಧಿಗೆ ಸಿಎಂ ಪಟ್ಟಕ್ಕೇರಿ, ಉತ್ತರ ಪ್ರದೇಶದಲ್ಲೊಂದು ಇತಿಹಾಸ ಬರೆದಿದ್ದಾರೆ. ಉತ್ತರ ಪ್ರದೇಶವನ್ನು ಗ್ಯಾಂಗ್ಸ್ಟರ್ ಮುಕ್ತಗೊಳಿಸುತ್ತಿದ್ದಾರೆ. ಪ್ರವಾಸೋದ್ಯಮ, ಹೂಡಿಕೆಯಲ್ಲಿ ಅಭಿವೃದ್ಧಿಗೊಳಿಸುತ್ತಿದ್ದಾರೆ.