Site icon Vistara News

Mann Ki Baat Live Updates: ಮನ್‌ ಕೀ ಬಾತ್‌ ಎಂದರೆ ನನಗೆ ವ್ರತ, ಈಶ್ವರ ರೂಪಿ ಜನರ ಸೇವೆ ಎಂದ ಪ್ರಧಾನಿ ಮೋದಿ

Mann ki Baat 101 episode

#image_title

ಪ್ರಧಾನಿ ನರೇಂದ್ರ ಮೋದಿಯವರ ಮನ್​ ಕೀ ಬಾತ್ (Mann Ki Baat)​ ರೇಡಿಯೊ ಕಾರ್ಯಕ್ರಮದ 100ನೇ ಆವೃತ್ತಿ (Mann Ki Baat 100)ಇಂದು ಬೆಳಗ್ಗೆ 11ಗಂಟೆಗೆ ಪ್ರಸಾರಗೊಂಡಿದೆ. 2014ರಿಂದಲೂ ಪ್ರಧಾನಿ ಮೋದಿಯವರು ತಪ್ಪದೆ ನಡೆಸಿಕೊಂಡು ಬರುತ್ತಿರುವ ಮನ್​ ಕೀ ಬಾತ್​ ಇಂದಿನ ಸಂಚಿಕೆ ಶತಕ ಪೂರೈಸಿದೆ. ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಡೆಸಿಕೊಟ್ಟ ಮನ್​​ ಕೀ ಬಾತ್​ನ ವಿಶೇಷ ಸಂಚಿಕೆಯಲ್ಲಿ ಏನೆಲ್ಲ ವಿಷಯಗಳನ್ನು ಮಾತನಾಡಿದ್ದಾರೆ ಎಂಬ ಬಗ್ಗೆ ಸಮಗ್ರ ಮಾಹಿತಿ (Mann Ki Baat Live Updates) ಇಲ್ಲಿದೆ.

Keshava prasad B

ಮನ್‌ ಕೀ ಬಾತ್‌ ದೇಶದಲ್ಲಿ ಹೊಸ ಪರಂಪರೆಗೆ ನಾಂದಿ ಹಾಡಿದೆ. ನಾನು ಆಕಾಶವಾಣಿ ಸಿಬ್ಬಂದಿಗೆ ಧನ್ಯವಾದ ತಿಳಿಸುತ್ತೇನೆ. ಆಕಾಶವಾಣಿಯ ಸಿಬ್ಬಂದಿ ತ್ವರಿತವಾಗಿ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ವ್ಯವಸ್ಥೆಗೊಳಿಸಿದ್ದಾರೆ. ನಾನಾ ಭಾಷೆಗೆ ಅನುವಾದಿಸಿದ್ದಾರೆ.

Keshava prasad B

ಮನ್‌ ಕಿ ಬಾತ್‌ ಮೂಲಕ ದೇಶದ ಶಿಕ್ಷಣ ಮತ್ತು ಸಂಸ್ಕೃತಿ, ಸಮಾಜ ಸುಧಾರಣೆಗೆ ಜಾಗೃತಿ ಮೂಡಿಸಲು ಸಾಧ್ಯವಾಗಿರುವುದು ಗಮನಾರ್ಹ ಎಂದ ಯುನೆಸ್ಕೊದ ಪ್ರಧಾನ ನಿರ್ದೇಶಕಿ ಆಡ್ರೆ ಅಜೌಲಿ

Keshava prasad B

ಮನ್‌ ಕಿ ಬಾತ್‌ 100 ನೇ ಸಂಚಿಕೆಗೆ ಯುನೆಸ್ಕೊ ಶ್ಲಾಘನೆ.

Keshava prasad B

ದೇಶದಲ್ಲಿ ಪ್ರವಾಸೋದ್ಯಮ ಜನಪ್ರಿಯವಾಗಿದೆ. ಪ್ರವಾಸೋದ್ಯಮದ ಜತೆಗೆ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ನಾವು ವಿದೇಶಕ್ಕೆ ಹೋಗುವುದಕ್ಕೆ ಮುನ್ನ ಭಾರತೀಯರು ಕಡಿಮೆ ಎಂದರೂ ನೂರು ಸ್ವದೇಶಿ ತಾಣಗಳಿಗೆ ಭೇಟಿ ನೀಡುವುದು ಸೂಕ್ತ.

Keshava prasad B

ಮನ್‌ ಕೀ ಬಾತ್‌ನಲ್ಲಿ ಈ ಹಿಂದೆ ಬೆಳಕಿಗೆ ಬಂದಿದ್ದ ನಾನಾ ಸಾಧಕರ ಜತೆಗೆ ಪ್ರಧಾನಿ ಮೋದಿ ಕುಶಲೋಪರಿ, ಮನ್‌ ಕಿ ಬಾತ್‌ ಮೂಲಕ ಪರಿಚಯಿಸಿದ್ದಕ್ಕೆ ಸಾಧಕರ ಸಂಭ್ರಮ, ಧನ್ಯವಾದ ಸಲ್ಲಿಕೆ

Exit mobile version