ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ (Mann Ki Baat) ರೇಡಿಯೊ ಕಾರ್ಯಕ್ರಮದ 100ನೇ ಆವೃತ್ತಿ (Mann Ki Baat 100)ಇಂದು ಬೆಳಗ್ಗೆ 11ಗಂಟೆಗೆ ಪ್ರಸಾರಗೊಂಡಿದೆ. 2014ರಿಂದಲೂ ಪ್ರಧಾನಿ ಮೋದಿಯವರು ತಪ್ಪದೆ ನಡೆಸಿಕೊಂಡು ಬರುತ್ತಿರುವ ಮನ್ ಕೀ ಬಾತ್ ಇಂದಿನ ಸಂಚಿಕೆ ಶತಕ ಪೂರೈಸಿದೆ. ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಡೆಸಿಕೊಟ್ಟ ಮನ್ ಕೀ ಬಾತ್ನ ವಿಶೇಷ ಸಂಚಿಕೆಯಲ್ಲಿ ಏನೆಲ್ಲ ವಿಷಯಗಳನ್ನು ಮಾತನಾಡಿದ್ದಾರೆ ಎಂಬ ಬಗ್ಗೆ ಸಮಗ್ರ ಮಾಹಿತಿ (Mann Ki Baat Live Updates) ಇಲ್ಲಿದೆ.
ಮನ್ ಕೀ ಬಾತ್ ದೇಶದಲ್ಲಿ ಹೊಸ ಪರಂಪರೆಗೆ ನಾಂದಿ ಹಾಡಿದೆ. ನಾನು ಆಕಾಶವಾಣಿ ಸಿಬ್ಬಂದಿಗೆ ಧನ್ಯವಾದ ತಿಳಿಸುತ್ತೇನೆ. ಆಕಾಶವಾಣಿಯ ಸಿಬ್ಬಂದಿ ತ್ವರಿತವಾಗಿ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ವ್ಯವಸ್ಥೆಗೊಳಿಸಿದ್ದಾರೆ. ನಾನಾ ಭಾಷೆಗೆ ಅನುವಾದಿಸಿದ್ದಾರೆ.
ಮನ್ ಕಿ ಬಾತ್ ಮೂಲಕ ದೇಶದ ಶಿಕ್ಷಣ ಮತ್ತು ಸಂಸ್ಕೃತಿ, ಸಮಾಜ ಸುಧಾರಣೆಗೆ ಜಾಗೃತಿ ಮೂಡಿಸಲು ಸಾಧ್ಯವಾಗಿರುವುದು ಗಮನಾರ್ಹ ಎಂದ ಯುನೆಸ್ಕೊದ ಪ್ರಧಾನ ನಿರ್ದೇಶಕಿ ಆಡ್ರೆ ಅಜೌಲಿ
ಮನ್ ಕಿ ಬಾತ್ 100 ನೇ ಸಂಚಿಕೆಗೆ ಯುನೆಸ್ಕೊ ಶ್ಲಾಘನೆ.
ದೇಶದಲ್ಲಿ ಪ್ರವಾಸೋದ್ಯಮ ಜನಪ್ರಿಯವಾಗಿದೆ. ಪ್ರವಾಸೋದ್ಯಮದ ಜತೆಗೆ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ನಾವು ವಿದೇಶಕ್ಕೆ ಹೋಗುವುದಕ್ಕೆ ಮುನ್ನ ಭಾರತೀಯರು ಕಡಿಮೆ ಎಂದರೂ ನೂರು ಸ್ವದೇಶಿ ತಾಣಗಳಿಗೆ ಭೇಟಿ ನೀಡುವುದು ಸೂಕ್ತ.
ಮನ್ ಕೀ ಬಾತ್‌ನಲ್ಲಿ ಈ ಹಿಂದೆ ಬೆಳಕಿಗೆ ಬಂದಿದ್ದ ನಾನಾ ಸಾಧಕರ ಜತೆಗೆ ಪ್ರಧಾನಿ ಮೋದಿ ಕುಶಲೋಪರಿ, ಮನ್ ಕಿ ಬಾತ್ ಮೂಲಕ ಪರಿಚಯಿಸಿದ್ದಕ್ಕೆ ಸಾಧಕರ ಸಂಭ್ರಮ, ಧನ್ಯವಾದ ಸಲ್ಲಿಕೆ