Site icon Vistara News

Mann Ki Baat: ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ಮೋದಿಯವರ ಮನ್​ ಕೀ ಬಾತ್​; ವರ್ಷದ ಮೊದಲ ರೇಡಿಯೋ ಕಾರ್ಯಕ್ರಮ

PM Modi Mann Ki Baat Speech Today Morning 11 Am

#image_title

ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Modi)ಯವರ ತಿಂಗಳ ರೇಡಿಯೋ ಕಾರ್ಯಕ್ರಮ ‘ಮನ್​ ಕೀ ಬಾತ್​’ (Mann Ki Baat) ಇಂದು ಬೆಳಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ. ಈ ಬಾರಿ ಪ್ರಧಾನಿ ಮೋದಿ 97ನೇ ಆವೃತ್ತಿಯ ಮನ್​ ಕೀ ಬಾತ್​ನಲ್ಲಿ ಮಾತನಾಡಲಿದ್ದಾರೆ. ವಿಶೇಷವೆಂದರೆ ಇದು 2023ನೇ ಇಸ್ವಿಯ ಮೊದಲ ಮನ್​ ಕೀ ಬಾತ್. 2014ರಲ್ಲಿ ಮೋದಿಯವರು ಪ್ರಧಾನಮಂತ್ರಿ ಆದ ಬಳಿಕ ಈ ಮನ್​ ಕೀ ಬಾತ್​ ರೇಡಿಯೋ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಪ್ರತಿ ತಿಂಗಳೂ ಕೊನೇ ಭಾನುವಾರ ಅವರು ರೇಡಿಯೋ ಮೂಲಕ ಜನರನ್ನು ಉದ್ದೇಶಿಸಿ ಮಾತನಾಡುತ್ತಾರೆ. ಇಲ್ಲಿ ಸಂಪೂರ್ಣವಾಗಿ ರಾಜಕೀಯ ಹೊರತಾದ ವಿಷಯಗಳೇ ಇರುತ್ತವೆ. ಈ 8 ವರ್ಷಗಳಲ್ಲಿ ಪ್ರಧಾನಿ ಮೋದಿ ಒಮ್ಮೆಯೂ ಮನ್​ ಕೀ ಬಾತ್​ ತಪ್ಪಿಸಿಲ್ಲ.

ಪ್ರಧಾನಿ ನರೇಂದ್ರ ಮೋದಿಯವರ ಮನ್​ ಕೀ ಬಾತ್​ನ್ನು ಆಲ್​ ಇಂಡಿಯಾ ರೇಡಿಯೋ ಮತ್ತು ದೂರದರ್ಶನ ನೆಟ್ವರ್ಕ್​​​ನ ಎಲ್ಲ ಚಾನೆಲ್​ಗಳೂ ಪ್ರಸಾರ ಮಾಡುತ್ತವೆ. ಅಷ್ಟೇ ಅಲ್ಲದೆ ಆಲ್​ ಇಂಡಿಯಾ ರೇಡಿಯೋದ ವೆಬ್​ಸೈಟ್​, ನ್ಯೂಸ್​ ಆನ್​ ಏರ್​ ಮೊಬೈಲ್ ಆ್ಯಪ್​ (NewsonAir) ಮೂಲಕವೂ ನೀವು ಮನ್​ ಕೀ ಬಾತ್​ ಆಲಿಸಬಹುದು. ಎಐಆರ್​ ನ್ಯೂಸ್​, ಡಿಡಿ ನ್ಯೂಸ್​, ಪ್ರಧಾನಿ ಕಾರ್ಯಾಲಯ ಮತ್ತು ಪ್ರಸಾರ ಸಚಿವಾಲಯದ ಯೂಟ್ಯೂಬ್​​ಗಳಲ್ಲಿ ಮನ್​ ಕೀ ಬಾತ್​ ಪ್ರಸಾರಗೊಳ್ಳಲಿದೆ. ಪ್ರಧಾನಿ ಮೋದಿಯವರು ಹಿಂದಿಯಲ್ಲಿ ಮಾತನಾಡಿ ಮುಗಿಯುತ್ತಿದ್ದಂತೆ ಆಲ್​ ಇಂಡಿಯಾ ರೇಡಿಯೋದ ಪ್ರಾದೇಶಿಕ ಚಾನೆಲ್​ಗಳು, ಆಯಾ ಭಾಷೆಗಳಲ್ಲೇ ಮನ್​ ಕೀ ಬಾತ್​ ಪ್ರಸಾರ ಮಾಡಲಿವೆ.

ಇದನ್ನೂ ಓದಿ: ವೈಷ್ಣವ ಜನತೋ ಹಾಡು ಗಾಂಧೀಜಿಗೆ ಅಚ್ಚುಮೆಚ್ಚು, ಆದರೆ…; ಆಡಿಯೊ ಶೇರ್​ ಮಾಡಿ, ವಿಶೇಷ ವಿಚಾರ ತಿಳಿಸಿದ ಪ್ರಧಾನಿ ಮೋದಿ!

Exit mobile version