ಬೆಂಗಳೂರು: ಖ್ಯಾತ ಚಿತ್ರನಟಿ, 1960ರ ದಶಕದಲ್ಲಿ ಭಾರಿ ಜನಪ್ರಿಯತೆ ಪಡೆದಿದ್ದ ಹಿರಿಯ ಅಭಿನೇತ್ರಿ ಸಾಯಿರಾ ಬಾನು ಅವರು ನವೆಂಬರ್ 10ರಂದು (ಶುಕ್ರವಾರ) ಪ್ರಧಾನಿ ನರೇಂದ್ರ ಮೋದಿ (PM Modi) ಅವರನ್ನು ಭೇಟಿಯಾದರು. ಈ ವೇಳೆ ಇಬ್ಬರೂ ಉಭಯ ಕುಶಲೋಪರಿ ವಿಚಾರಿಸಿಕೊಂಡರು.
ಸಾಯಿರಾ ಬಾನು ಅವರನ್ನು ಭೇಟಿಯಾಗಿದ್ದನ್ನು ತಾವೇ ಸ್ವತಃ ಟ್ವೀಟ್‌ನಲ್ಲಿ ಬರೆದುಕೊಂಡಿರುವ ಪ್ರಧಾನಿ ಮೋದಿ ಅವರು, ʻʻಸಾಯಿರಾ ಬಾನುಜಿ ಅವರನ್ನು ಭೇಟಿಯಾಗಿದ್ದು ನಿಜಕ್ಕೂ ಅದ್ಭುತವಾಗಿತ್ತು. ಸಿನಿಮಾ ಜಗತ್ತಿನಲ್ಲಿ ಅವರು ಮಾಡಿರುವ ಕೆಲಸವು ಸಾರ್ವಕಾಲಿಕವಾಗಿದ್ದು, ಎಲ್ಲ ತಲೆಮಾರುಗಳ ಮೆಚ್ಚುಗೆ ಪಡೆದಿದೆ. ನಾವಿಬ್ಬರೂ ಹಲವು ವಿಷಯಗಳ ಬಗ್ಗೆ ಮಾತನಾಡಿಕೊಂಡೆವು” ಎಂದಿದ್ದಾರೆ.
ನಟಿ ಸಾಯಿರಾ ಬಾನು ದಿವಂಗತ ನಟ ದಿಲೀಪ್ ಕುಮಾರ್ ಅವರ ಪತ್ನಿ. 1960ರ ದಶಕದಲ್ಲಿ ಅತ್ಯಂತ ಯಶಸ್ವಿ ನಟರಲ್ಲಿ ಒಬ್ಬರಾಗಿದ್ದರು. ಸಾಯಿರಾ ಬಾನು ಬಾಲಿವುಡ್ ಇಂಡಸ್ಟ್ರಿಯ ಅಪ್ರತಿಮ ತಾರೆಗಳಲ್ಲಿ ಒಬ್ಬರು. 1961 ರಲ್ಲಿ ಕಲ್ಟ್ ಕ್ಲಾಸಿಕ್ ಜಂಗ್ಲಿಯೊಂದಿಗೆ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. ಸಾಯಿರಾ ಬಾನು ವಿಕ್ಟೋರಿಯಾ ನಂ. 203, ಪಡೋಸನ್ ಮತ್ತು ಇನ್ನೂ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.
2021ರ ಜುಲೈ ಏಳರಂದು ದಿಲೀಪ್ ಕುಮಾರ್ ಅವರು ಮೃತಪಟ್ಟಾಗ ಪ್ರಧಾನಿ ಮೋದಿ ಅವರು ಸಾಯಿರಾ ಬಾನು ಅವರಿಗೆ ಕರೆ ಮಾಡಿ ಸಾಂತ್ವನ ಹೇಳಿದ್ದರು. ಪ್ರಧಾನಿ ಮೋದಿ ಅವರು ಮುಂಜಾನೆಯೇ ಕರೆ ಮಾಡಿ ಸಮಾಧಾನ ಹೇಳಿದ್ದನ್ನು ನೆನಪಿಸಿಕೊಂಡು ಸಾಯಿರಾ ಬಾನು ಧನ್ಯವಾದ ಹೇಳಿದ್ದರು.
ಅದಕ್ಕೂ ಮೊದಲು 2018ರಲ್ಲಿ ದಿಲೀಪ್ ಕುಮಾರ್ ಕುಟುಂಬ ಭೂಮಾಫಿಯಾದಿಂದ ಬೆದರಿಕೆಗೆ ಒಳಗಾದಾಗ ಸಾಯಿರಾ ಬಾನು ಅವರು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಿ ರಕ್ಷಣೆ ಕೊಡಬೇಕು ಎಂದು ಕೋರಿದ್ದರು. ಬಳಿಕ ಮಹಾರಾಷ್ಟ್ರ ಸರ್ಕಾರ ಕ್ರಮ ಕೈಗೊಂಡಿತ್ತು.
It was wonderful to meet Saira Banu Ji. Her pioneering work in the world of cinema is admired across generations. We had a great conversation on a wide range of subjects. pic.twitter.com/rbfGd0qmH5
— Narendra Modi (@narendramodi) November 10, 2023
ಮೋದಿ ಇರುವ ಸಿರಿಧಾನ್ಯಗಳ ಹಾಡು ಗ್ರ್ಯಾಮಿ ಅವಾರ್ಡ್‌ಗೆ ನಾಮಿನೇಟ್!
ಪ್ರಧಾನಿ ನರೇಂದ್ರ ಮೋದಿಯವರನ್ನೂ (PM Narendra Modi) ಒಳಗೊಂಡಿರುವ ‘ಅಬಂಡನ್ಸ್ ಇನ್ ಮಿಲೆಟ್ಸ್’ (Abundance in Millets) ಹಾಡನ್ನು ಈ ವರ್ಷದ ಗ್ರ್ಯಾಮಿಗೆ (Grammy award 2024) ನಾಮನಿರ್ದೇಶನ ಮಾಡಲಾಗಿದೆ. ಈ ಹಾಡಿಗೆ ಸಂಗೀತ ನೀಡಿರುವ ಫಲ್ಗುಣಿ ಶಾ ಮತ್ತು ಗೌರವ್ ಶಾ ಹಾಡಿದ್ದಾರೆ. ಕೀನ್ಯಾ ಆಟಿ, ಗ್ರೆಗ್ ಗೊನ್ಜಾಲೆಜ್ ಮತ್ತು ಸೌಮ್ಯ ಚಟರ್ಜಿ ಜೊತೆಗೆ ಇಬ್ಬರೂ ಗಾಯಕರು ಬರೆದಿದ್ದಾರೆ.
ಇದನ್ನೂ ಓದಿ: AR Rahman: ರೆಹಮಾನ್ ತಮ್ಮ ಪತ್ನಿಗೆ ಹಿಂದಿಯಲ್ಲಿ ಮಾತನಾಡಬೇಡ ಅಂದಿದ್ಯಾಕೆ?
ಆಟಿ ಮ್ಯೂಸಿಕ್ ವಿಡಿಯೋ ಕೂಡ ಹಾಡನ್ನು ನಿರ್ಮಾಣ ಮಾಡಿದೆ(Millets Song).ಸಿರಿಧಾನ್ಯಗಳ ಮಹತ್ವವನ್ನು ಸಾರುವುದಕ್ಕಾಗಿ ಈ ಹಾಡನ್ನು ಲಾಂಚ್ ಮಾಡಲಾಗಿತ್ತು. ಇಡೀ ಜಗತ್ತು, 2023ರ ವಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವನ್ನಾಗಿ ಆಚರಿಸುತ್ತಿದೆ. ಸಿರಿಧಾನ್ಯಗಳನ್ನು ಉತ್ತೇಜಿಸುವುದಕ್ಕಾಗಿ ಸೃಷ್ಟಿಸಲಾದ ಈ ಹಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಣಿಸಿಕೊಂಡಿದ್ದಾರೆ.
ರಾಗಿಯನ್ನು ಜೀವನಶೈಲಿಯ ಭಾಗವಾಗಿ ಅಳವಡಿಸಿಕೊಳ್ಳುವ ಮಹತ್ವದ ಕುರಿತು ಪ್ರಧಾನಿ ನರೇಂದ್ರ ಮಾತನಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಜತೆಗೆ ಇದರಿಂದ ದೇಶದ ರೈತರಿಗೆ ಅನುಕೂಲವಾಗಲಿದೆ ಎನ್ನುವುದನ್ನು ಕೇಳಿಸಿಕೊಳ್ಳಬಹುದು.ಭಾರತದಲ್ಲಿ ನಾವು ಸಿರಿಧಾನ್ಯಗಳಿಗೆ ಅನ್ನದ ಗುರುತನ್ನು ನೀಡಿದ್ದೇವೆ. ಭಾರತದ ಉಪಕ್ರಮದಿಂದ, ಇಂದು ಮತ್ತೊಮ್ಮೆ ವಿಶ್ವದಲ್ಲಿ ಸಿರಿಧಾನ್ಯಗಳ ಬಗ್ಗೆ ಜಾಗೃತಿ ಅಭಿಯಾನ ಪ್ರಾರಂಭವಾಗಿದೆ.
ಅಂತಾರಾಷ್ಟ್ರೀಯ ಯೋಗ ದಿನವು ಯೋಗವನ್ನು ಮೂಲೆ ಮೂಲೆಗೆ ಕೊಂಡೊಯ್ದಿದೆ ಎಂದು ನಾನು ನಂಬುತ್ತೇನೆ. ಈಗ ಸಿರಿಧಾನ್ಯಗಳು ಕೂಡ ಪ್ರಪಂಚದ ಮೂಲೆ ಮೂಲೆಯನ್ನು ತಲುಪಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು.