Site icon Vistara News

ವೈಷ್ಣವ ಜನತೋ ಹಾಡು ಗಾಂಧೀಜಿಗೆ ಅಚ್ಚುಮೆಚ್ಚು, ಆದರೆ…; ಆಡಿಯೊ ಶೇರ್​ ಮಾಡಿ, ವಿಶೇಷ ವಿಚಾರ ತಿಳಿಸಿದ ಪ್ರಧಾನಿ ಮೋದಿ!

PM Modi Share Vaishnava Jana in Twitter on Mann ki Baat

ಪ್ರಧಾನಿ ನರೇಂದ್ರ ಮೋದಿ ಇಂದು (ನ.27)ಬೆಳಗ್ಗೆ 11ಗಂಟೆಯಿಂದ ತಮ್ಮ ತಿಂಗಳ ರೇಡಿಯೋ ಕಾರ್ಯಕ್ರಮ ಮನ್​ ಕೀ ಬಾತ್​ ನಡೆಸಿದ್ದಾರೆ. ಅದರ ಮಧ್ಯೆಯೇ ಅಂದರೆ 11.15ರ ಹೊತ್ತಿಗೆ ಅವರ ಟ್ವಿಟರ್​ ಅಕೌಂಟ್​​ನಲ್ಲಿ ‘ವೈಷ್ಣವ ಜನತೋ’ ಹಾಡನ್ನು ಶೇರ್​​ ಮಾಡಿಕೊಂಡಿದ್ದು, ‘ಪ್ರತಿಯೊಬ್ಬರೂ ಇದನ್ನು ಕೇಳಿ’ ಎಂದು ಹೇಳಿದ್ದಾರೆ. ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಶೇರ್ ಮಾಡಿಕೊಂಡಿರುವ ‘ವೈಷ್ಣವ ಜನತೋ’ ಹಾಡನ್ನು ಹಾಡಿದ್ದು ಗ್ರೀಕ್​ ಗಾಯಕ ಕಾನ್ಸ್ಟಾಂಟಿನೋಸ್ ಕಲೈಟ್ಜಿಸ್ ಎಂಬುವರು. ಗ್ರೀಕ್​ನ ಸಾಂಪ್ರದಾಯಿಕ ಸಂಗೀತ ವಾದನಗಳಾದ ಕ್ಲಾರಿನೋ ಮತ್ತು ಕ್ರೆಟನ್​ ಲೈರಾ (ಒಂದು ತಂತಿ ವಾದ್ಯ)ಗಳೊಂದಿಗೆ ಗಾಯಕ ಕಲೈಟ್ಜಿಸ್ ಅತ್ಯಂತ ಸುಂದರವಾಗಿ ಈ ಹಾಡನ್ನು ಹಾಡಿದ್ದಾರೆ.

ಗ್ರೀಸ್ ಗಾಯಕ ಹಾಡಿರುವ ಆಡಿಯೊ ಶೇರ್ ಮಾಡಿಕೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ‘ವೈಷ್ಣವ ಜನತೋ ಎಂಬುದು ಮಹಾತ್ಮ ಗಾಂಧಿಯವರ ನೆಚ್ಚಿನ ಹಾಡು. ಒಂದಲ್ಲ ಒಂದು ಸಂದರ್ಭದಲ್ಲಿ ನೀವೆಲ್ಲರೂ ಈ ಭಜನೆಯನ್ನು ಕೇಳಿರುತ್ತೀರಿ. ಆದರೆ ಈಗ ನಾನಿಲ್ಲಿ ಶೇರ್ ಮಾಡಿರುವ ‘ವೈಷ್ಣವ ಜನತೋ’ ಹಾಡನ್ನು ಒಮ್ಮೆ ಪ್ರತಿಯೊಬ್ಬರೂ ಕೇಳಿ. ಯಾಕೆಂದರೆ ನಾನಿಲ್ಲಿ ಶೇರ್​ ಮಾಡಿದ್ದು ಗ್ರೀಸ್​ ಗಾಯಕ ಕಾನ್ಸ್ಟಾಂಟಿನೋಸ್ ಕಲೈಟ್ಜಿಸ್ ಧ್ವನಿಯಲ್ಲಿ ಮೂಡಿಬಂದ ವೈಷ್ಣವ ಜನತೋವನ್ನು. ನೀವಿದನ್ನು ಕೇಳಿದರೆ ಖಂಡಿತ ಖುಷಿಪಡುತ್ತೀರಿ. ಎಲ್ಲರಿಗೂ ಹೆಮ್ಮೆಯೆನಿಸುತ್ತಿದೆ’ ಎಂದು ಹೇಳಿದ್ದಾರೆ.

ಮನ್​ ಕೀ ಬಾತ್​​ನಲ್ಲಿ ಮಾತನಾಡುವಾಗಲೂ ಪ್ರಧಾನಿ ಮೋದಿ ಕಾನ್ಸ್ಟಾಂಟಿನೋಸ್ ಕಲೈಟ್ಜಿಸ್ ಅವರ ಬಗ್ಗೆ ಉಲ್ಲೇಖ ಮಾಡಿದ್ದಾರೆ. ‘ಮಹಾತ್ಮ ಗಾಂಧೀಜಿಯವರ 150ನೇ ಜನ್ಮಜಯಂತಿ ಸಂದರ್ಭದಲ್ಲಿ ಗ್ರೀಕ್​ ಗಾಯಕ ಕಾನ್ಸ್ಟಾಂಟಿನೋಸ್ ಕಲೈಟ್ಜಿಸ್ ಅವರು ವೈಷ್ಣವ ಜನತೋ ಹಾಡನ್ನು ಹಾಡಿದ್ದಾರೆ. ಕಾನ್ಸ್ಟಾಂಟಿನೋಸ್ ಕಲೈಟ್ಜಿಸ್ ಅವರಿಗೆ ಭಾರತ ಮತ್ತು ಭಾರತದ ಸಂಗೀತದ ಬಗ್ಗೆ ಅಪಾರ ಆಸಕ್ತಿಯಿದೆ. ಭಾರತದ ವಿವಿಧ ಸಂಗೀತ ಪ್ರಕಾರಗಳು, ರಾಗ-ತಾಳಗಳು ಮತ್ತು ಘರಾನಾಗಳನ್ನು ಅವರು ಅಧ್ಯಯನ ಮಾಡಿದ್ದಾರೆ.

ಅವರು ಭಾರತೀಯ ಸಂಗೀತದ ಮೂಲ, ವಿವಿಧ ಭಾರತೀಯ ಸಂಗೀತ ವ್ಯವಸ್ಥೆಗಳು, ವಿವಿಧ ರೀತಿಯ ರಾಗಗಳು, ತಾಳಗಳು ಮತ್ತು ರಸಗಳು ಮತ್ತು ವಿವಿಧ ಘರಾನಾಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ. ಭಾರತೀಯ ಸಂಗೀತ ಕ್ಷೇತ್ರದ ಅನೇಕ ದಿಗ್ಗಜರ ಬಗ್ಗೆ ತಿಳಿದುಕೊಂಡಿದ್ದಾರೆ. ಅಷ್ಟಲ್ಲದೇ, ಭಾರತದ ಕ್ಲಾಸಿಕಲ್​ ನೃತ್ಯಗಳ ಬಗ್ಗೆಯೂ ಅವರಿಗೆ ಗೊತ್ತಿದೆ. ಭಾರತಕ್ಕೆ ಸಂಬಂಧಪಟ್ಟ ಸುಂದರವಾದ ವಿಚಾರಗಳನ್ನೆಲ್ಲ ಸೇರಿಸಿ ಒಂದು ಪುಸ್ತಕವನ್ನು ಬರೆದಿದ್ದಾರೆ. ಈ ವಿಶೇಷ ಕಾರಣಕ್ಕೆ ಅವರನ್ನು ಇಲ್ಲಿ ಸ್ಮರಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral Video| ಡ್ರೈವರ್​ ಸೀಟ್​​ನಲ್ಲಿ ಕುಳಿತುಕೊಳ್ಳದೆ, 18 ಚಕ್ರದ ಬೃಹತ್​ ಟ್ರಕ್​​ನ್ನು ಪಾರ್ಕ್​ ಮಾಡಿದ ಚಾಲಕ!

Exit mobile version