ನವ ದೆಹಲಿ: ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ 87 ನಿಮಿಷಗಳ ಬಜೆಟ್ ಮಂಡನೆ (Union Budget 2023) ಮಾಡಿದ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡಿದರು. ಹಾಗೇ, ಪ್ರಸಕ್ತ ಸಾಲಿನ ಬಜೆಟ್ನ್ನು ಹೊಗಳಿದರು. ಇದೊಂದು ಐತಿಹಾಸಿಕ ಬಜೆಟ್ ಎಂದು ಹೇಳಿದರು.
‘ಸ್ವಾತಂತ್ರ್ಯೋತ್ಸವದ ಅಮೃತ ಕಾಲದ ಮೊದಲ ಬಜೆಟ್ ಮಂಡನೆಯಾಗಿದೆ. ಇದು ಭಾರತದ ಅಭಿವೃದ್ಧಿಗೆ ಭದ್ರವಾದ ಬುನಾದಿ ಹಾಕಿಕೊಟ್ಟಿದೆ. ದೇಶದ ಅಭಿವೃದ್ಧಿ ಪಥಕ್ಕೆ ಹೊಸ ಶಕ್ತಿ ತುಂಬುವಂತಿದೆ. ಈ ಸಮಾಜದ ಬಡಜನರು, ಮಧ್ಯಮ ವರ್ಗದ್ದು ಮತ್ತು ಕೃಷಿಕರ ಸೇರಿ ಎಲ್ಲ ವರ್ಗದವರ ಕನಸುಗಳನ್ನೂ ನನಸು ಮಾಡುವಂತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ದೇಶದಲ್ಲಿ ಪಾರಂಪರಿಕವಾಗಿ ದುಡಿಯುತ್ತಿರುವ ವಿಶ್ವಕರ್ಮ ಸಮುದಾಯಕ್ಕೆ ಇದೇ ಮೊದಲ ಬಾರಿಗೆ ಬಜೆಟ್ನಲ್ಲಿ ತರಬೇತಿ ಮತ್ತು ನೆರವಿನ ಘೋಷಣೆ ಮಾಡಲಾಗಿದೆ. ವಿಶ್ವಕರ್ಮ ಎಂಬುವನು ಕರ್ತೃ. ಅವನ ಸಮುದಾಯದಕ್ಕೆ ನಮ್ಮ ಸರ್ಕಾರದ ಬಜೆಟ್ನಲ್ಲಿ ಅನುದಾನ ಘೋಷಣೆ ಮಾಡಲಾಗಿದೆ ಎಂದು ಪ್ರಧಾನಿ ತಿಳಿಸಿದರು. ಹಾಗೇ, ನಗರ ಮತ್ತು ಗ್ರಾಮೀಣ ವಿಭಾಗದಲ್ಲಿ ವಾಸಿಸುವ ಎಲ್ಲ ವರ್ಗದ ಮಹಿಳೆಯರಿಗಾಗಿ ನಮ್ಮ ಕೇಂದ್ರ ಸರ್ಕಾರ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಈ ಸಲದ ಬಜೆಟ್ನಲ್ಲಿ ಕೂಡ ಮಹಿಳೆಯರಿಗಾಗಿ ಉಳಿತಾಯ ಯೋಜನೆ ಘೋಷಿಸಲಾಗಿದೆ. ಸ್ತ್ರೀ ಸಬಲೀಕರಣಕ್ಕೆ ನಮ್ಮ ಸರ್ಕಾರ ಸದಾ ಬದ್ಧವಾಗಿರುತ್ತದೆ ಎಂದು ಹೇಳಿದರು.
ಇದನ್ನೂ ಓದಿ: Union Budget 2023: ರೈಲ್ವೆ ವಲಯಕ್ಕೆ ಬಜೆಟ್ನಲ್ಲಿ ಬಂಪರ್; 2013-14ನೇ ಸಾಲಿಗಿಂತ 9 ಪಟ್ಟು ಹೆಚ್ಚು ಅನುದಾನ ಬಿಡುಗಡೆ