Site icon Vistara News

ಹೊಸ ಸಂಸತ್​ ಭವನ ಉದ್ಘಾಟನೆ; ಈ ಕಟ್ಟಡ ಸಬಲೀಕರಣಕ್ಕೆ ತೊಟ್ಟಿಲಾಗಲಿ ಎಂದ ಪ್ರಧಾನಿ ಮೋದಿ

PM Modi Tweet After inaugurates new Parliament building

#image_title

ಪ್ರಧಾನಿ ನರೇಂದ್ರ ಮೋದಿ(PM Modi)ಯವರು ಇಂದು ಬೆಳಗ್ಗೆ ನೂತನ ಸಂಸತ್ ಭವನ (New Parliament Building)ವನ್ನು ಉದ್ಘಾಟನೆ ಮಾಡಿದರು. ಮುಂಜಾನೆ ಗಣಪತಿ ಹೋಮ ಶುರುವಾಗಿ, ಬಳಿಕ ಸ್ಪೀಕರ್​ ಕುರ್ಚಿಯ ಬಲಭಾಗದಲ್ಲಿ ರಾಜದಂಡ ಪ್ರತಿಷ್ಠಾಪನೆ ಮಾಡಿದರು. ಅದಾದ ಮೇಲೆ ಫಲಕ ಅನಾವರಣಗೊಳಿಸುವ ಮೂಲಕ ಸಂಸತ್ ಭವನವನ್ನು ಲೋಕಾರ್ಪಣೆಗೊಳಿಸಿದರು. ಈ ವೇಳೆ ಧಾರ್ಮಿಕ ಮಂತ್ರಘೋಷಗಳು ಪಠಿಸಲ್ಪಟ್ಟವು. ಬಳಿಕ ಸರ್ವಧರ್ಮ ಪ್ರಾರ್ಥನೆ ನಡೆಯಿತು. ಹೋಮಕ್ಕೆ ಪೂರ್ಣಾಹುತಿ ಹಾಕಿದ ಬಳಿಕ ಪ್ರಧಾನಿ ಮೋದಿ, ನೇರವಾಗಿ ರಾಜದಂಡ (ಸೆಂಗೋಲ್​) ಇದ್ದಲ್ಲಿಗೆ ಬಂದು, ಅದಕ್ಕೆ ದೀರ್ಘದಂಡ ನಮಸ್ಕಾರ ಹಾಕಿದ್ದು ವಿಶೇಷವಾಗಿತ್ತು.

ನೂತನ ಸಂಸತ್ ಭವನ ಉದ್ಘಾಟನೆ ಬಳಿಕ ಪ್ರಧಾನಿ ಮೋದಿ ಸಾರ್ಥಕ ಭಾವದಿಂದ ಟ್ವೀಟ್​ವೊಂದನ್ನು ಮಾಡಿದ್ದಾರೆ. ನಾಲ್ಕು ಫೋಟೋಗಳನ್ನು ಹಂಚಿಕೊಂಡ ಅವರು ‘ಭಾರತದ ಹೊಸ ಸಂಸತ್ ಭವನ ಉದ್ಘಾಟನೆಗೊಂಡಿತು. ನಮ್ಮೆಲ್ಲರ ಮನಸು-ಹೃದಯದಲ್ಲಿ ಹೆಮ್ಮೆ, ಆಶಯ, ಭರವಸೆಗಳು ತುಂಬಿ ಬಂದವು. ನಮ್ಮ ಸಬಲೀಕರಣಕ್ಕೆ ಈ ಐಕಾನಿಕ್​ ಕಟ್ಟಡ ತೊಟ್ಟಿಲಾಗಲಿ. ನಮ್ಮೊಳಗೆ ಕನಸು ಹೊತ್ತಿಸಿ, ಅವುಗಳನ್ನು ಸಾಕಾರಗೊಳಿಸಿಕೊಳ್ಳಲು ನೂತನ ಸಂಸತ್​ ಭವನ ಸ್ಫೂರ್ತಿಯಾಗಲಿ. ನಮ್ಮ ಮಹಾನ್ ರಾಷ್ಟ್ರವನ್ನು ಅಭಿವೃದ್ಧಿಯ ಉನ್ನತಿಗೆ ಕರೆದೊಯ್ಯಲಿ’ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ತಮಿಳು ಸಂಸ್ಕೃತಿಯಲ್ಲಿ ಮಹತ್ವ ಪಡೆದ ಸೆಂಗೋಲ್​ (ರಾಜದಂಡ)ನ್ನು ಪ್ರಧಾನಿ ಮೋದಿ ಇಂದು ಲೋಕಸಭೆಯಲ್ಲಿ ಪ್ರತಿಷ್ಠಾಪಿಸಿದ್ದು ಒಂದು ಐತಿಹಾಸಿಕ ಕ್ಷಣ ಎನ್ನಿಸಿಕೊಂಡಿದೆ. ಇದು ಬ್ರಿಟಿಷರು ಭಾರತಕ್ಕೆ ಅಧಿಕಾರ ಹಸ್ತಾಂತರ ಮಾಡಿದ್ದರ ಸಂಕೇತ ಎಂದು ಹೇಳಲಾಗಿದೆ. ತಮಿಳುನಾಡಿನ ಅಧೀನಂ ಮಠದ ಪುರೋಹಿತರು ಈ ಸೆಂಗೋಲ್​ನ್ನು ಪ್ರಧಾನಿ ಮೋದಿಯವರಿಗೆ ಹಸ್ತಾಂತರ ಮಾಡಿದ್ದರು. ಇಂದು ರಾಜದಂಡ ಪ್ರತಿಷ್ಠಾಪನೆ ವೇಳೆ ತಮಿಳುನಾಡಿನ ವಿವಿಧ ಅಧೀನಂ ಮಠಗಳ ಬಹುತೇಕ ಸಾಧು-ಸಂತರು ಪಾಲ್ಗೊಂಡಿದ್ದರು. ಪ್ರಧಾನಿ ಮೋದಿಯವರು ಅವರೆಲ್ಲರ ಆಶೀರ್ವಾದ ಪಡೆದಿದ್ದಾರೆ.

ಇದನ್ನೂ ಓದಿ: ಹೊಸ ಸಂಸತ್ ಭವನದಲ್ಲಿ ಸೆಂಗೋಲ್​ ಪ್ರತಿಷ್ಠಾಪನೆ; ಕೈಮುಗಿದುಕೊಂಡು ರಾಜದಂಡ ಹಿಡಿದು ಬಂದ ಪ್ರಧಾನಿ ಮೋದಿ

Exit mobile version