ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Modi)ಅವರು ಯುಗಾದಿ ಹಬ್ಬಕ್ಕೆ (Yugadi 2023) ಕರ್ನಾಟಕ ಜನರಿಗೆ ಕನ್ನಡದಲ್ಲೇ ಶುಭಾಶಯ ಕೋರಿದ್ದಾರೆ. ಭರವಸೆ ಮತ್ತು ಹೊಸ ಆರಂಭಗಳನ್ನು ಒಳಗೊಂಡ ಈ ಹಬ್ಬವು ಮುಂಬರುವ ವರ್ಷದಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ಅಪಾರ ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ತರಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಹಾಗೇ, ಎಲ್ಲರಿಗೂ ಸಂತಸದ ಯುಗಾದಿಯ ಶುಭಾಶಯಗಳು ಎಂದಿದ್ದಾರೆ. ಕಲಶ-ಬಾಳೆಲೆಯ ಫೋಟೋ ಇರುವ ಫೋಟೋದ ಪೋಸ್ಟ್ ಹಾಕಿದ್ದಾರೆ. ಅದರಲ್ಲಿ ನರೇಂದ್ರ ಮೋದಿಯವರ ಸಹಿ ಇದೆ.
ಒಟ್ಟಾರೆ ದೇಶದ ಜನರಿಗೆ ಇಂಗ್ಲಿಷ್ನಲ್ಲಿ ಯುಗಾದಿ ಶುಭಾಶಯ ಕೋರಿರುವ ಪ್ರಧಾನಿ ನರೇಂದ್ರ ಮೋದಿ, ತೆಲುಗು ಭಾಷಿಕರಿಗಾಗಿ ಅದೇ ಭಾಷೆಯಲ್ಲಿ ಯುಗಾದಿ ಹಬ್ಬದ ವಿಶ್ ಮಾಡಿದ್ದಾರೆ. ಹಾಗೇ, ಕಾಶ್ಮೀರಿಗಳ ಹೊಸ ಹಬ್ಬ ನವ್ರೇಹ್ಗಾಗಿ ಪ್ರಧಾನಿ ಮೋದಿ ಟ್ವೀಟ್ ಮಾಡಿ ವಿಶ್ ಮಾಡಿದ್ದಾರೆ. ಇದೇ ದಿನ ಮರಾಠಿಗರು ಗುಡಿ ಪಾಡ್ವಾ ಆಚರಣೆ ಮಾಡುತ್ತಾರೆ. ಅದಕ್ಕೂ ಸಹ ಮೋದಿಯವರು ಶುಭ ಕೋರಿದ್ದು, ‘ಗುಡಿ ಪಾಡ್ವಾ ಆಚರಿಸುತ್ತಿರುವ ಎಲ್ಲರಿಗೂ ಶುಭ ಹಾರೈಕೆಗಳು. ಮುಂಬರುವ ವರ್ಷಗಳಲ್ಲಿ ನಿಮ್ಮೆಲ್ಲ ನಿರೀಕ್ಷೆಗಳು ಈಡೇರಲಿ. ಜೀವನದಲ್ಲಿ ಸಂಪತ್ತು-ಸಮೃದ್ಧಿ ತುಂಬಲಿ’ ಎಂದು ಹಾರೈಸಿದ್ದಾರೆ. ಈ ಗುಡಿ ಪಾಡ್ವಾ ಹಬ್ಬವನ್ನು ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಆಚರಿಸಲಾಗುತ್ತದೆ. ಇಂದು ಅವರು ಬ್ರಹ್ಮದೇವನನ್ನು ಪೂಜಿಸುತ್ತಾರೆ.