Site icon Vistara News

PM Modi: ದೆಹಲಿ ಯೂನಿವರ್ಸಿಟಿಗೆ ಪ್ರಧಾನಿ ಮೋದಿ ಭೇಟಿ; ವಿದ್ಯಾರ್ಥಿಗಳಿಗೆ ಗೈಡ್​ಲೈನ್ಸ್​​​ ಗೊಂದಲ!

PM Modi

ದೆಹಲಿ ವಿಶ್ವವಿದ್ಯಾಲಯದ (Delhi University) ಶತಮಾನೋತ್ಸವ ಸಮಾರಂಭಗಳ ಸಮಾರೋಪ ಕಾರ್ಯಕ್ರಮ ಇಂದು (ಜನವರಿ 30) ನಡೆಯಲಿದೆ. ಈ ಸಮಾರೋಪದಲ್ಲಿ ಪ್ರಧಾನಿ ಮೋದಿ (PM Modi) ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಯೂನಿವರ್ಸಿಟಿಗೆ ಪ್ರಧಾನಿ ಮೋದಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಯೂನಿವರ್ಸಿಟಿ ವಿದ್ಯಾರ್ಥಿಗಳು ಮತ್ತು ದೆಹಲಿ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೆಲವು ಮಾರ್ಗಸೂಚಿ ಹೊರಡಿಸಿದ್ದು, ಕಟ್ಟುನಿಟ್ಟಾಗಿ ಪಾಲಿಸುವಂತೆ ಯೂನಿವರ್ಸಿಟಿ ಸೂಚನೆ ನೀಡಿದೆ ಎಂದು ಹೇಳಲಾಗಿದೆ. ಆದರೆ ಈ ಗೈಡ್ ಲೈನ್ಸ್ ವಿಚಾರದಲ್ಲಿ ಗೊಂದಲವಾಗಿದೆ..

ಯೂನಿವರ್ಸಿಟಿ ಅಡಿಯಲ್ಲಿ ಬರುವ ಹಿಂದು ಕಾಲೇಜ್, ಡಾ.ಭೀಮ್ ರಾವ್ ಅಂಬೇಡ್ಕರ್ ಕಾಲೇಜ್, ಜಾಕಿರ್ ಹುಸೇನ್ ಕಾಲೇಜ್ ಗಳ ವಿದ್ಯಾರ್ಥಿಗಳು ಜೂನ್ 30 ರಂದು ಬೆಳಗ್ಗೆ 10-12ಗಂಟೆವರೆಗೆ ಕಡ್ಡಾಯವಾಗಿ ಕಾಲೇಜಲ್ಲಿ ಹಾಜರಿರಬೇಕು. ದೆಹಲಿ ಯೂನಿವರ್ಸಿಟಿಯಲ್ಲಿ ಪ್ರಧಾನಿ ಮೋದಿ ಭಾಗವಹಿಸುವ ಕಾರ್ಯಕ್ರಮವನ್ನು ನೇರ ಪ್ರಸಾರದಲ್ಲಿ ವೀಕ್ಷಿಸುವ ವ್ಯವಸ್ಥೆಯನ್ನು ಕಾಲೇಜಿನಲ್ಲಿ ಮಾಡಲಾಗಿದೆ. ಎಲ್ಲ ವಿದ್ಯಾರ್ಥಿಗಳು ಕಡ್ಡಾಯವಾಗಿ ಈ ಸಮಾರಂಭ ವೀಕ್ಷಿಸಬೇಕು. ಯಾರೂ ಕಪ್ಪು ಬಣ್ಣದ ಬಟ್ಟೆ ಧರಿಸಿ ಬರುವಂತಿಲ್ಲ. ಐಡಿ ಕಾರ್ಡ್ ತರಲೇಬೇಕು. ಅಷ್ಟೇ ಅ ಲ್ಲ ಈ ಲೈವ್ ಸ್ಟ್ರೀಮ್ ನಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಐದು ಹಾಜರಾತಿ ಕೊಡಲಾಗುವುದು ಎಂಬಿತ್ಯಾದಿ ಸೂಚನೆಗಳನ್ನು ಈ ಗೈಡ್ ಲೈನ್ ಒಳಗೊಂಡಿದೆ.

ಆದರೆ ಬರೀ ಗೊಂದಲ
ಪ್ರಧಾನಿ ಮೋದಿ ಭೇಟಿ ನಿಮಿತ್ತ ಯೂನಿವರ್ಸಿಟಿ ಹೀಗೆ ಮಾರ್ಗಸೂಚಿ ಹೊರಡಿಸಿದೆಯಾ ಎಂಬುದರ ಬಗ್ಗೆಯೇ ಗೊಂದಲ ಏರ್ಪಟ್ಟಿದೆ. ಹಿಂದು ಕಾಲೇಜಿನ ಅಧ್ಯಾಪಕ ವೃಂದದ ಉಸ್ತುವಾರಿ ಮೀನು ಶ್ರೀವಾಸ್ತವ್​​ ಅವರು ಯೂನಿವರ್ಸಿಟಿಯಿಂದ ಬುಧವಾರ ಗೈಡ್​ಲೈನ್ಸ್​ ​ ಬಂದಿದೆ. ಅದರಲ್ಲಿ ಏಳು ಅಂಶದ ಮಾರ್ಗಸೂಚಿ ಉಲ್ಲೇಖಿಸಲಾಗಿದೆ. ಹಾಜರಾತಿ ಕಡ್ಡಾಯ, ಕಪ್ಪು ಅಂಗಿ ಧರಿಸಿ ಬರಬೇಡಿ ಎನ್ನುವುದನ್ನೆಲ್ಲ ಗೈಡ್​ಲೈನ್ಸ್​ ಒಳಗೊಂಡಿದೆ. ಹೀಗಾಗಿ ನಾವು ನಮ್ಮ ಕಾಲೇಜಿನಿಂದಲೂ ವಿದ್ಯಾರ್ಥಿಗಳಿಗೆ ನೋಟಿಸ್ ನೀಡಿದ್ದೇವೆ ಎಂದು ಹೇಳಿದ್ದಾರೆ. ಆದರೆ ಇದೇ ಕಾಲೇಜಿನ ಪ್ರಿನ್ಸಿಪಾಲ್ ಅಂಜು ಶ್ರೀವಾಸ್ತವ್​ ಅವರು ಅಂಥ ನೋಟಿಸ್ ಏನೂ ಬಂದಿಲ್ಲ. ಇಲ್ಲೇನೋ ತಪ್ಪಾಗಿದೆ. ಅಂಥ ನೋಟಿಸ್​ ನಾವು ಕಾಲೇಜಿಂದ ಕೊಟ್ಟಿಲ್ಲ ಎಂದಿದ್ದಾರೆ. ಆದರೆ ಅಧ್ಯಾಪಕರು, ವಿದ್ಯಾರ್ಥಿಗಳು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸುವಂತೆ ನಾವು ಮೌಖಿಕವಾಗಿ ಹೇಳಿದ್ದೇವೆ ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ: Tripura Rath Yatra: ಜಗನ್ನಾಥ ರಥಯಾತ್ರೆ ದುರಂತ; ಪ್ರಧಾನಿ ಮೋದಿಯಿಂದ 2 ಲಕ್ಷ ರೂ.ಪರಿಹಾರ

ಇನ್ನು ಡಾ. ಭೀಮ್ ರಾವ್ ಅಂಬೇಡ್ಕರ್ ಕಾಲೇಜು ತನ್ನ ವಿದ್ಯಾರ್ಥಿಗಳಿಗೆ, ಅಧ್ಯಾಪಕರು, ಕಾಲೇಜಿನ ಬೋಧಕೇತರ ಸಿಬ್ಬಂದಿಗೆ ನೋಟಿಸ್​ ಹೊರಡಿಸಿದ್ದು, ಎಲ್ಲರೂ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಹಾಜರು ಇರಲು ಸೂಚಿಸಿದೆ. ಜಾಕೀರ್​ ಹುಸೇನ್​ ಕಾಲೇಜು ಕೂಡ ಇದೇ ಸೂಚನೆಯನ್ನು ವಿದ್ಯಾರ್ಥಿಗಳು, ಬೋಧಕ/ಬೋಧಕೇತರ ಸಿಬ್ಬಂದಿಗೆ ನೀಡಿದೆ. ಹಾಗೇ, ಈ ಹಾಜರಾತಿ ವಿಷಯದ ಬಗ್ಗೆ ದೆಹಲಿ ಯೂನಿವರ್ಸಿಟಿ ಸ್ಪಷ್ಟನೆ ನೀಡಿದ್ದು ‘ನಾವು ವಿದ್ಯಾರ್ಥಿಗಳು, ಶಿಕ್ಷಕರಿಗೆ ಹಾಜರಾತಿ ಕಡ್ಡಾಯ ಎಂದು ಹೇಳಿಲ್ಲ’ ಎಂದು ತಿಳಿಸಿದೆ. ಆದರೆ ಉಳಿದ ಗೈಡ್​ಲೈನ್ಸ್​ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಒಟ್ಟಿನಲ್ಲಿ ಪ್ರಧಾನಿ ಮೋದಿ ದೆಹಲಿ ಯೂನಿವರ್ಸಿಟಿ ಭೇಟಿಗೆ ಸಂಬಂಧಪಟ್ಟ ಗೈಡ್​ಲೈನ್ಸ್​ ಗೊಂದಲದ ಗೂಡಾಗಿದೆ.

Exit mobile version