ತ್ರಿಪುರ: ಪ್ರಧಾನಿ ನರೇಂದ್ರ ಮೋದಿಯವರು ತ್ರಿಪುರದ ಧಲೈ ಜಿಲ್ಲೆಯಲ್ಲಿರುವ ಅಂಬಾಸ್ಸಾದಲ್ಲಿ ಚುನಾವಣಾ ರ್ಯಾಲಿ (PM Modi Tripura Campaign) ನಡೆಸಿ ಮಾತನಾಡಿ, ‘ತ್ರಿಪುರ ರಾಜ್ಯವನ್ನು ಬಿಜೆಪಿ ಭಯ ಮತ್ತು ಹಿಂಸಾಚಾರ ಮುಕ್ತಗೊಳಿಸಿದೆ’ ಎಂದು ಹೇಳಿದರು. ದಶಕಗಳಿಂದಲೂ ಇಲ್ಲಿ ಆಳಿದ್ದ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ಗಳು ತ್ರಿಪುರ ರಾಜ್ಯದ ಅಭಿವೃದ್ಧಿಗೆ ಅಡ್ಡಿಯಾಗಿದ್ದರು. ಅಷ್ಟೇ ಅಲ್ಲ, ಪೊಲೀಸ್ ಠಾಣೆಗಳೂ ಸಿಪಿಎಂನ ಕೇಡರ್ಗಳಾಗಿದ್ದವು. ಆದರೆ ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ಇಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಮಾಡುತ್ತಿದೆ. ಪೊಲೀಸ್ ಸ್ಟೇಶನ್ಗಳೆಂದರೆ ಕಾನೂನು ಪರಿಪಾಲಕ ಸ್ಥಳಗಳಾಗಿ ಬದಲಾಗಿವೆ. ಹಿಂಸಾಚಾರವೂ ಗಮನಾರ್ಹವಾಗಿ ಕಡಿಮೆಯಾಗಿದೆ’ ಎಂದು ಹೇಳಿದರು.
ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ‘ಇಂದು ರಾಜ್ಯದಲ್ಲಿ ಮಹಿಳಾ ಸಬಲೀಕರಣ ಇದೆ. ಅವರ ಬದುಕು ಸುಲಭವಾಗಿದೆ’ ಎಂದು ಹೇಳಿದರು. ಹಾಗೇ, ‘ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ಮೇಲೆ 5000 ಕಿಮೀ ದೂರದ ರಸ್ತೆ ನಿರ್ಮಾಣವಾಗಿದೆ. ಈ ರಸ್ತೆಗಳು ಹಳ್ಳಿಗಳನ್ನು ಸಂಪರ್ಕಿಸುತ್ತಿವೆ. ಅಗರ್ತಲಾದಲ್ಲಿ ಹೊಸ ಏರ್ಪೋರ್ಟ್ ನಿರ್ಮಾಣವಾಗಿದೆ. ಎಲ್ಲ ಹಳ್ಳಿಗಳಿಗೂ ಆಪ್ಟಿಕಲ್ ಫೈಬರ್ ಮತ್ತು 4ಜಿ ಸಂಪರ್ಕ ಕಲ್ಪಿಸಲಾಗುತ್ತಿದೆ. ತ್ರಿಪುರ ಕೂಡ ಜಾಗತಿಕತೆಗೆ ತೆರೆದುಕೊಳ್ಳುತ್ತಿದೆ. ಬಂದರುಗಳೊಂದಿಗೆ ತ್ರಿಪುತ ಮತ್ತು ಈಶಾನ್ಯ ಭಾಗವನ್ನು ಸಂಪರ್ಕಿಸಲು ನಾವು ಜಲಮಾರ್ಗವನ್ನು ನಿರ್ಮಿಸುತ್ತಿದ್ದೇವೆ’ ಎಂದು ಹೇಳಿದರು.
‘ತ್ರಿಪುರ ಜನರ ಆದಾಯ ಹೆಚ್ಚಿಸುವತ್ತ ನಮ್ಮ ಬಿಜೆಪಿ ಸರ್ಕಾರ ಗಮನಹರಿಸುತ್ತಿದೆ. ಪಿಎಂ ಕಿಸಾನ್ ಯೋಜನೆಯಡಿ ಇಲ್ಲಿನ ರೈತರ ಖಾತೆಗಳಿಗೆ ಹಣ ಹಾಕಲಾಗುತ್ತಿದೆ. ಮುಂದಿನ ಬಾರಿಯೂ ಬಿಜೆಪಿ ಸರ್ಕಾರ ಇಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ. ಬಳಿಕ ಈ ಹಣದ ಮೊತ್ತವನ್ನು ಇನ್ನಷ್ಟು ಹೆಚ್ಚಿಸಲಾಗುವುದು’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಇದನ್ನೂ ಓದಿ: PM Modi: ಉಕ್ರೇನ್ ವಿರುದ್ಧದ ಯುದ್ಧ ಕೊನೆಗಾಣಿಸುವಂತೆ ಪುಟಿನ್ ಮನವೊಲಿಸಲು ಪ್ರಧಾನಿ ಮೋದಿಗೆ ಸಾಧ್ಯ ಎಂದ ಅಮೆರಿಕ