ಮುಂಬೈ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಜಾಗತಿಕವಾಗಿ ಹೆಸರು ಮಾಡಿರುವ ವ್ಯಕ್ತಿ. ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಮೋದಿ ಭಕ್ತರು ಇದ್ದಾರೆ. ವಿಶೇಷವೆಂದರೆ ಯುರೋಪ್‌ನ ರಾಷ್ಟ್ರವಾದ ಲಕ್ಸೆಂಬರ್ಗ್‌ನ ಪ್ರಧಾನಿ ಕ್ಸೇವಿಯರ್ ಬೆಟೆಲ್ ಅವರೂ ಮೋದಿ ಭಕ್ತರಂತೆ. ಈ ವಿಚಾರವನ್ನು ಸ್ವತಃ ಅವರೇ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಬಳಿ ಅವರು ಹೇಳಿದ್ದಾರಂತೆ.
ಇದನ್ನೂ ಓದಿ: Maharashtra Cabinet Expansion | ಏಕನಾಥ ಶಿಂಧೆ ಸಂಪುಟ ಸೇರಿದ 18 ಸಚಿವರು; 9+9 ಸೂತ್ರ
ಏಕನಾಥ ಶಿಂಧೆ ಅವರು ಇತ್ತೀಚೆಗೆ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಸಭೆಯಲ್ಲಿ ಭಾಗವಹಿಸಿ ಬಂದಿದ್ದಾರೆ. ಈ ಸಭೆಯಲ್ಲಿ ಅವರು ಅನೇಕ ಜಾಗತಿಕ ನಾಯಕರನ್ನು ಭೇಟಿ ಮಾಡಿದ್ದಾರೆ. ಸಭೆಯಲ್ಲಿ ಪಾಲ್ಗೊಂಡ ಅನುಭವವನ್ನು ಹಂಚಿಕೊಂಡಿರುವ ಅವರು, “ಕ್ಸೇವಿಯರ್ ಅವರು ನನ್ನ ಬಳಿ ಬಂದು ಮಾತನಾಡಿಸಿದರು. ನಾನು ಮೋದಿ ಭಕ್ತ ಎಂದು ಹೇಳಿದರು. ನನ್ನ ಜತೆ ಫೋಟೋವನ್ನೂ ತೆಗೆಸಿಕೊಂಡು, ಅದನ್ನು ಪ್ರಧಾನಿ ಮೋದಿ ಅವರಿಗೆ ತೋರಿಸಲು ಕೇಳಿಕೊಂಡರು” ಎಂದು ಹೇಳಿದ್ದಾರೆ.
ಇದನ್ನೂ ಓದಿ: Urfi Javed | ಉರ್ಫಿ ಜಾವೇದ್ ಕುರಿತು ಮುಂಬೈ ಪೊಲೀಸ್ ಕಮಿಷನರ್‌ಗೆ ಪತ್ರ ಬರೆದ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗ
“ಹಾಗೆಯೇ ಜರ್ಮನಿ ಮತ್ತು ಸೌದಿ ಅರೇಬಿಯಾದಿಂದ ಬಂದಿದ್ದ ಗಣ್ಯರೂ ಬಂದು ಮಾತನಾಡಿಸಿ, ನೀವು ಮೋದಿ ಕಡೆಯವರಾ? ಎಂದು ಪ್ರಶ್ನಿಸಿದರು. ಅದಕ್ಕೆ ನಾನು ಹೆಮ್ಮೆಯಿಂದ ʼಹೌದು, ನಾನು ಅವರ ಪ್ರತಿನಿಧಿʼ ಎಂದು ಹೇಳಿದೆ” ಎಂದೂ ಅವರು ಹೇಳಿದ್ದಾರೆ. ಪ್ರಧಾನಿ ಮೋದಿ ಅವರ ಹೆಸರು ವಿದೇಶಗಳಲ್ಲೂ ಮಿಂಚುತ್ತಿರುವುದು ಸಂತಸ ತರುತ್ತದೆ. ನಮ್ಮ ಪ್ರಧಾನಿಗೆ ವಿದೇಶಗಳಲ್ಲೂ ಹೆಚ್ಚಿನ ಅಭಿಮಾನಿಗಳಿದ್ದಾರೆ” ಎಂದಿದ್ದಾರೆ ಏಕನಾಥ ಶಿಂಧೆ.