Site icon Vistara News

Mann Ki Baat: ಮನ್​ ಕೀ ಬಾತ್​​ನಲ್ಲಿ ಕ್ರೀಡಾಪಟುಗಳನ್ನು ಹೊಗಳಿದ ಪ್ರಧಾನಿ ಮೋದಿ; ಕುಸ್ತಿಪಟುಗಳಿಗೆ ಸಂದೇಶ?

PM Narendra Modi

PM Narendra Modi says Deepfake a big concern, asked ChatGPT to give deepfake warning in content

ಪ್ರಧಾನಿ ನರೇಂದ್ರ ಮೋದಿಯವರು (PM Modi) ತಮ್ಮ ರೇಡಿಯೊ ಕಾರ್ಯಕ್ರಮ ಮನ್​ ಕೀ ಬಾತ್​​ (Mann Ki Baat)ನಲ್ಲಿ ಇಂದು ಹಲವು ವಿಷಯಗಳನ್ನು ಮಾತನಾಡಿದರು. ಮುಖ್ಯವಾಗಿ ಅಂತಾರಾಷ್ಟ್ರಿಯ ಯೋಗ ದಿನಾಚರಣೆ (International Yoga Day 2023) ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ‘ಎಲ್ಲರೂ ಯೋಗ ಮಾಡಿ’ ಎಂದು ಕರೆ ಕೊಟ್ಟರು. ಅಷ್ಟೇ ಅಲ್ಲ, ಈ ಸಲದ ಯೋಗ ದಿನಾಚರಣೆಯನ್ನು ‘ವಸುಧೈವ ಕುಟುಂಬಕಂ’ ಥೀಮ್​ನೊಟ್ಟಿಗೆ ಆಚರಿಸಲಾಗುತ್ತಿದೆ ಎಂದೂ ಹೇಳಿದರು. ‘ವಸುಧೈವ ಕುಟುಂಬಕ್ಕಾಗಿ ಯೋಗ ಎಂಬ ಥೀಮ್​​ ಮೂಲಕ ವಿಶ್ವದಾದ್ಯಂತ ಎಲ್ಲರನ್ನೂ ಪರಸ್ಪರ ಸಂಪರ್ಕಿಸುವ ಆಶಯ ಹೊಂದಲಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಹಾಗೇ ಪ್ರಧಾನಿ ನರೇಂದ್ರ ಮೋದಿ ಇವತ್ತು ಭಾರತದ ಮಹಿಳಾ ಜ್ಯೂನಿಯರ್​ ಹಾಕಿ ತಂಡವನ್ನು ಮತ್ತು ಪುರುಷರ ಜ್ಯೂನಿಯರ್​ ಹಾಕಿ ತಂಡವನ್ನು ಅಭಿನಂದಿಸಿದ್ದಾರೆ. ಇತ್ತೀಚೆಗೆ ಜಪಾನಿನ ಕಾಕಾಮಿಗಾರಾದಲ್ಲಿ ಮಹಿಳೆಯರ ಜ್ಯೂನಿಯರ್​ ಏಷ್ಯಾ ಕಪ್​ ಹಾಕಿ ಪಂದ್ಯಾವಳಿ ನಡೆದಿತ್ತು. ಅದರ ಫೈನಲ್​ ಪಂದ್ಯದಲ್ಲಿ ಭಾರತದ ಮಹಿಳಾ ಜ್ಯೂನಿಯರ್ ವಿಭಾಗದ ಆಟಗಾರ್ತಿಯರು, ದಕ್ಷಿಣ ಕೊರಿಯಾ ತಂಡವನ್ನು ಮಣಿಸಿದ್ದರು. ಈ ಮೂಲಕ ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡಿದ್ದರು. ಅಂದೂ ಸಹ ಪ್ರಧಾನಿ ಮೋದಿ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದರು. ಹಾಗೇ, ಒಮನ್​ನಲ್ಲಿ ನಡೆದಿದ್ದ ಪುರುಷರ ಜ್ಯೂನಿಯರ್ ವಿಭಾಗದ ಏಷ್ಯಾ ಕಪ್​​ ಟೂರ್ನಿಯಲ್ಲಿ ಭಾರತದ ತಂಡ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿ, ಗೆದ್ದುಕೊಂಡಿತ್ತು.

ಇದನ್ನೂ ಓದಿ: Mann Ki Baat; ಮನ್​ ಕೀ ಬಾತ್​​ನಲ್ಲಿ ’ತುರ್ತು ಪರಿಸ್ಥಿತಿ’ ನೆನಪು; ಒಂದು ವಾರ ಮೊದಲು ಪ್ರಸಾರಕ್ಕೆ ಕಾರಣ ಏನು?

ಇಂದಿನ ಮನ್​ ಕೀ ಬಾತ್​ನಲ್ಲಿ ಪ್ರಧಾನಿ ಮೋದಿ, ಮಹಿಳೆ ಮತ್ತು ಪುರುಷರ ಜ್ಯೂನಿಯರ್ ವಿಭಾಗದ ಹಾಕಿ ತಂಡದ ಆಟಗಾರರ ಸಾಧನೆಯನ್ನು ಶ್ಲಾಘಿಸಿದರು. ಜೂನ್​ ತಿಂಗಳಲ್ಲಿ ಕ್ರೀಡಾ ಕ್ಷೇತ್ರದಿಂದ ಎರಡು ಮಹತ್ವದ ಸುದ್ದಿಯನ್ನು ಕೇಳಿದ್ದೇವೆ. ಎಂದು ಹೇಳಿದರು. ಇತ್ತೀಚೆಗೆ ಕುಸ್ತಿಪಟುಗಳು ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್​ ವಿರುದ್ಧ ನಡೆಸುತ್ತಿರುವ ಪ್ರತಿಭಟನೆ, ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿ, ರಾಜೀನಾಮೆಗೆ ಪಟ್ಟು ಹಿಡಿದಿರುವ ಕಾರಣಕ್ಕೆ ಅನೇಕರು ಕೇಂದ್ರ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಕ್ರೀಡಾಪಟುಗಳಿಗೆ ಮೋದಿ ಸರ್ಕಾರ ನ್ಯಾಯ ಒದಗಿಸುತ್ತಿಲ್ಲ, ಅವರಿಗೆ ರಕ್ಷಣೆಯೇ ಇಲ್ಲ ಎನ್ನುತ್ತಿದ್ದಾರೆ. ಇದೆಲ್ಲದರ ಮಧ್ಯೆ ಪ್ರಧಾನಿ ಮೋದಿ ಈಗ ಕ್ರೀಡಾಪಟುಗಳ ಸಾಧನೆಯನ್ನು ಹೊಗಳಿದ್ದು ಮಹತ್ವ ಪಡೆದಿದೆ. ಸಾಧಕರ ಜತೆ ಕೇಂದ್ರ ಸರ್ಕಾರ ಯಾವತ್ತೂ ಇರುತ್ತದೆ ಎಂಬ ಸಂದೇಶವನ್ನು ಅವರು ಕುಸ್ತಿಪಟುಗಳಿಗೂ, ಕೇಂದ್ರವನ್ನು ಟೀಕಿಸುತ್ತಿರುವವರಿಗೂ ಕೊಟ್ಟಂತಾಗಿದೆ ಎಂದು ಹೇಳಲಾಗುತ್ತಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Exit mobile version