Site icon Vistara News

ಕನ್ನಡದಲ್ಲೇ ಟ್ವೀಟ್​ ಮಾಡಿ ಮಕರ ಸಂಕ್ರಾಂತಿ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ; ಪೊಂಗಲ್​, ಮಾಗ್​ ಬಿಹು ಹಬ್ಬಗಳಿಗೂ ವಿಶ್​

PM Modi Goa

ಕರ್ನಾಟಕ ಸೇರಿ ದೇಶದ ವಿವಿಧ ಭಾಗಗಳಲ್ಲಿ ಮಕರ ಸಂಕ್ರಮಣ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಹಬ್ಬವನ್ನು ತಮಿಳುನಾಡಿನಲ್ಲಿ ಪೊಂಗಲ್​ ಹಬ್ಬವೆಂದೂ, ಆಂಧ್ರಪ್ರದೇಶ, ಕರ್ನಾಟಕ ಸೇರಿ ಬಹುತೇಕ ರಾಜ್ಯಗಳಲ್ಲಿ ಮಕರ ಸಂಕ್ರಾಂತಿ ಮತ್ತು ಅಸ್ಸಾಂನಲ್ಲಿ ಮಾಗ್​ ಬಿಹು ಎಂದೂ ಕರೆದು, ಆಯಾ ಪ್ರಾದೇಶಿಕ ಸಂಪ್ರದಾಯದಂತೆ ಹಬ್ಬ ಆಚರಣೆ ಮಾಡಲಾಗುತ್ತದೆ. ಇಂದು ಪ್ರಧಾನಿ ನರೇಂದ್ರ ಮೋದಿಯವರು ಸಂಕ್ರಾಂತಿ/ಪೊಂಗಲ್​ ಹಬ್ಬದ ಶುಭಾಶಯವನ್ನು ಕೋರಿದ್ದಾರೆ.

ವಿಶೇಷವೆಂದರೆ, ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಜನತೆಗೆ ಕನ್ನಡದಲ್ಲಿ, ಆಂಧ್ರಪ್ರದೇಶದ ಜನರಿಗೆ ತೆಲುಗು ಭಾಷೆಯಲ್ಲಿ, ತಮಿಳುನಾಡಿನ ಜನತೆಗೆ ತಮಿಳಿನಲ್ಲಿ ಮತ್ತು ಅಸ್ಸಾಮಿಗರಿಗೆ ಅಸ್ಸಾಮಿ ಭಾಷೆಯಲ್ಲೇ ಹಬ್ಬದ ಶುಭ ಕೋರಿದ್ದಾರೆ. ‘ಮಕರ ಸಂಕ್ರಾಂತಿಯ ವಿಶೇಷ ಸಂದರ್ಭದಲ್ಲಿ ಶುಭಾಶಯಗಳು. ಇದೊಂದು ವಿಶೇಷ ಹಬ್ಬ. ಇದು ಪ್ರತಿಯೊಬ್ಬರ ಜೀವನದಲ್ಲಿ ಉತ್ತಮ ಆರೋಗ್ಯ ಮತ್ತು ಆನಂದ ತರಲಿ ಎಂದು ನಾನು ಆಶಿಸುತ್ತೇನೆ’ ಎಂಬ ಕನ್ನಡದ ಸಾಲುಗಳನ್ನು ಬರೆಯಲಾದ ಗ್ರೀಟಿಂಗ್ ಕಾರ್ಡ್​ವೊಂದನ್ನು ಪ್ರಧಾನಿ ಮೋದಿ ಟ್ವೀಟ್​ ಮಾಡಿದ್ದಾರೆ. ಹಾಗೇ ಆಂಧ್ರಪ್ರದೇಶದ ಜನರಿಗೆ ಮಕರ ಸಂಕ್ರಾಂತಿ, ತಮಿಳಿಗರಿಗೆ ಪೊಂಗಲ್​, ಅಸ್ಸಾಂ ಜನರಿಗೆ ಮಗ್​ ಬಿಹು ಶುಭಾಶಯಗಳು ಎಂದೂ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Bejjavalli Fair | ಅಯ್ಯಪ್ಪ ಸ್ವಾಮಿ ಸನ್ನಿಧಾನ ಬೆಜ್ಜವಳ್ಳಿ ಜಾತ್ರೆ ಜೋರು; ಮಕರ ಸಂಕ್ರಾಂತಿ ದಿನ ದರ್ಶನ ನೀಡುವ ಗರುಡ

Exit mobile version