Site icon Vistara News

PM Modi: ಇಂದು ಪ್ರಧಾನಿ ಮೋದಿಯವರು ಸಂಸತ್ತಿಗೆ ಧರಿಸಿ ಬಂದ ನೀಲಿ ಜಾಕೆಟ್​​ ವಿಶೇಷತೆಯೇನು?

Some people unhappy with India hosting G20, PM Modi Parliament Speech

ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Modi)ಯವರು ಇಂದು ಸಂಸತ್ತಿಗೆ ವಿಶೇಷವಾದ ನೀಲಿ ಜಾಕೆಟ್​ ಹಾಕಿಕೊಂಡು ಬಂದಿದ್ದಾರೆ. ಈ ಜಾಕೆಟ್​ನ ವಿಶೇಷತೆ ಏನೆಂದರೆ, ಇದು ಪ್ಲಾಸ್ಟಿಕ್​ ಬಾಟಲಿಗಳನ್ನು (Polyethylene Terephthalate-PET) ಸಂಸ್ಕರಿಸಿ ಮಾಡಲಾದ ನೀಲಿ ಜಾಕೆಟ್​. ಫೆಬ್ರವರಿ 6ರಂದು ಬೆಂಗಳೂರಿನಲ್ಲಿ ನಡೆದ ಭಾರತ ಇಂಧನ ಸಪ್ತಾಹ 2023 ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದರು. ಈ ವೇಳೆ ಭಾರತೀಯ ತೈಲ ನಿಗಮ (Indian Oil Corporation)ವು ನರೇಂದ್ರ ಮೋದಿಯವರಿಗೆ ಈ ಜಾಕೆಟ್​ನ್ನು ಉಡುಗೊರೆಯನ್ನಾಗಿ ನೀಡಿತ್ತು. ಅದೇ ಜಾಕೆಟ್​ ಧರಿಸಿ ಇಂದು ಪ್ರಧಾನಿಯವರು ಸಂಸತ್ತಿಗೆ ಬಂದಿದ್ದಾರೆ.

ಬಜೆಟ್​ ಅಧಿವೇಶನ ಜನವರಿ 31ರಿಂದ ಪ್ರಾರಂಭವಾಗಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಿದ್ದರು. ಫೆ.1ರಂದು ಕೇಂದ್ರ ಸರ್ಕಾರ ಬಜೆಟ್​ ಮಂಡನೆ ಮಾಡಿದೆ. ಆದರೆ ಮರುದಿನದಿಂದಲೂ ಬಜೆಟ್​ ಅಧಿವೇಶನದಲ್ಲಿ ಕೇವಲ ಅದಾನಿ ಸಮೂಹದ ಷೇರು ಕುಸಿತದ ಬಗ್ಗೆಯೇ ಪ್ರತಿಪಕ್ಷಗಳು ಗಲಾಟೆ ಮಾಡುತ್ತಿರುವ ಕಾರಣ ಉಳಿದ ಯಾವ ವಿಷಯಗಳ ಬಗ್ಗೆಯೂ ಚರ್ಚೆಯಾಗುತ್ತಿಲ್ಲ. ಅದರ ಮಧ್ಯೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರ ರೂಪವಾಗಿ ಸಂಸತ್ತಿನಲ್ಲಿ ಮಾತನಾಡಲಿದ್ದಾರೆ.

ಇದನ್ನೂ ಓದಿ: India energy week 2023: ಪರಿಸರಕ್ಕೆ ಹಾನಿ ಮಾಡುವ ಪ್ಲಾಸ್ಟಿಕ್ ಬಾಟಲಿಗಳಿಂದ ಬಟ್ಟೆ! ಹೇಗೆ ತಯಾರಿಸುತ್ತಾರೆ?

ಪ್ರಧಾನಿ ನರೇಂದ್ರ ಮೋದಿಯವರು ಫೆ.6ರಂದು ಬೆಂಗಳೂರಿಗೆ ಬಂದಾಗ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಂಪನಿಯ ‘ಅನ್‌ಬಾಟಲ್ಡ್’ ಉಪಕ್ರಮಕ್ಕೆ ಚಾಲನೆ ನೀಡಿದ್ದಾರೆ. ಏಕ-ಬಳಕೆಯ ಪ್ಲಾಸ್ಟಿಕ್ ಬಳಕೆ ಕೈಬಿಡುವ ನಿಟ್ಟಿನಲ್ಲಿ, ಇಂಡಿಯನ್ ಆಯಿಲ್, ಮರುಬಳಕೆಯ ಪಾಲಿಯೆಸ್ಟರ್ (recycling polyethylene terephthalate – rPET) ಮತ್ತು ಹತ್ತಿಯಿಂದ ಮಾಡಿದ ಚಿಲ್ಲರೆ ಗ್ರಾಹಕ ಸಹಾಯಕರು ಮತ್ತು ಎಲ್‌ಪಿಜಿ ವಿತರಣಾ ಸಿಬ್ಬಂದಿಗೆ ಸಮವಸ್ತ್ರಗಳನ್ನು ಒದಗಿಸಿದೆ. ಅದೇ ಸಮವಸ್ತ್ರದ ಜಾಕೆಟ್​​ನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಉಡುಗೊರೆಯನ್ನಾಗಿ ನೀಡಿತ್ತು.

Exit mobile version