Site icon Vistara News

Parkash Singh Badal: ಪ್ರಕಾಶ್ ಸಿಂಗ್ ಬಾದಲ್ ನಿಧನಕ್ಕೆ ದೇಶದಲ್ಲಿ 2ದಿನ ಶೋಕಾಚರಣೆ; ಇಂದು ಅಂತಿಮ ದರ್ಶನ ಪಡೆಯಲಿದ್ದಾರೆ ಪ್ರಧಾನಿ ಮೋದಿ

PM Narendra Modi to pay last respects to Parkash Singh Badal today

#image_title

ನವ ದೆಹಲಿ: ಶಿರೋಮಣಿ ಅಕಾಲಿ ದಳದ ಹಿರಿಯ ನೇತಾರ, ಪಂಜಾಬ್​ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್​ (Parkash Singh Badal) ಅವರ ನಿಧನದ ನಿಮಿತ್ತ ಕೇಂದ್ರ ಸರ್ಕಾರ ಇಂದು ಮತ್ತು ನಾಳೆ (ಏಪ್ರಿಲ್​ 26 ಮತ್ತು 27) ದೇಶಾದ್ಯಂತ ಶೋಕಾಚರಣೆ ಘೋಷಿಸಿದೆ. ಅಂದರೆ, ಇಡೀ ದೇಶದಲ್ಲಿ ಎರಡು ದಿನಗಳ ಕಾಲ ಸರ್ಕಾರದಿಂದ ನಡೆಸುವ ಯಾವುದೇ ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮಗಳು ನಡೆಯುವುದಿಲ್ಲ. ಸರ್ಕಾರಕ್ಕೆ ಸಂಬಂಧಪಟ್ಟ ಕಟ್ಟಡಗಳ ಮೇಲೆ ಹಾರಾಡುತ್ತಿರುವ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಿ, ಹಾರಿಸುವ ಮೂಲಕ ಪ್ರಕಾಶ್ ಸಿಂಗ್ ಬಾದಲ್​​ರಿಗೆ ಗೌರವ ಸೂಚಿಸಲಾಗುತ್ತದೆ.

ಅಗಲಿದ ಶಿರೋಮಣಿ ಅಕಾಲಿ ದಳ ನಾಯಕ ಪ್ರಕಾಶ್ ಸಿಂಗ್ ಬಾದಲ್​ ಅವರಿಗೆ ಇಂದು ಪ್ರಧಾನಿ ನರೇಂದ್ರ ಮೋದಿಯವರು ಅಂತಿಮ ನಮನ ಸಲ್ಲಿಸಲಿದ್ದಾರೆ. ಮಧ್ಯಾಹ್ನ ಅವರು ಚಂಡಿಗಢಕ್ಕೆ ತೆರಳಿ, ಬಾದಲ್​ ಅಂತಿಮ ದರ್ಶನ ಪಡೆಯುವವರು ಎಂಬ ಮಾಹಿತಿ ಲಭ್ಯವಾಗಿದೆ. ಪ್ರಕಾಶ್ ಸಿಂಗ್ ಬಾದಲ್ ನಿಧನದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದ್ದರು. ‘ಪ್ರಕಾಶ್​ ಸಿಂಗ್​ ಬಾದಲ್​ ಜೀ ಅವರ ಸಾವಿನ ಸುದ್ದಿ ಕೇಳಿ ತುಂಬ ನೋವಾಯಿತು. ಅವರು ಭಾರತೀಯ ರಾಜಕಾರಣದಲ್ಲಿ ದೈತ್ಯಶಕ್ತಿಯಾಗಿದ್ದವರು. ಮಹಾನ್​ ರಾಜನೀತಿಜ್ಞನಾಗಿದ್ದ ಅವರು ನಮ್ಮ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಪಂಜಾಬ್​ನ ಬೆಳವಣಿಗೆಗಾಗಿ ಅವರಿತವಾಗಿ ಶ್ರಮಿಸಿದ್ದಾರೆ. ರಾಜ್ಯಕ್ಕೆ ಸಂದಿಗ್ಧತೆ ಎದುರಾದಾಗಲೆಲ್ಲ ಪಾರು ಮಾಡಿದ್ದಾರೆ’ ಎಂದು ಟ್ವೀಟ್ ಮಾಡಿದ್ದರು. ಹಾಗೇ, ಅವರೊಂದಿಗೆ ತಾವಿರುವ ಫೋಟೋ ಒಂದನ್ನು ಶೇರ್ ಮಾಡಿದ್ದರು.

ಇದನ್ನೂ ಓದಿ: Parkash Singh Badal: ಪಂಜಾಬ್‌ನ ಮಾಜಿ ಸಿಎಂ, ಅಕಾಲಿ ದಳದ ವರಿಷ್ಠ ಪ್ರಕಾಶ್ ಸಿಂಗ್ ಬಾದಲ್ ನಿಧನ, ಕಂಬನಿ ಮಿಡಿದ ನಾಯಕರು

95ವರ್ಷದ ಪ್ರಕಾಶ್​ ಸಿಂಗ್ ಬಾದಲ್ ಅವರು ಉಸಿರಾಟದ ಸಮಸ್ಯೆಯಿಂದ ಮೊಹಾಲಿಯಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲಿದ್ದು ಒಂದು ವಾರ ಆಗಿತ್ತು. ಚಿಕಿತ್ಸೆ ಫಲಿಸದೆ ಮಂಗಳವಾರ ಸಂಜೆ 8ಗಂಟೆ ಹೊತ್ತಿಗೆ ಮೃತಪಟ್ಟಿದ್ದಾರೆ. ಬಾದಲ್ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ 1ಗಂಟೆಗೆ, ಅವರ ಹುಟ್ಟೂರಾದ ಲಂಬಿಯಲ್ಲಿ ನಡೆಯಲಿದೆ. ಇವರ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಗೃಹ ಸಚಿವ ಅಮಿತ್​ ಶಾ ಮತ್ತು ಇತರ ಹಲವು ಕ್ಯಾಬಿನೆಟ್​ ಸಚಿವರು ಕಂಬನಿ ಮಿಡಿದಿದ್ದಾರೆ.

Exit mobile version