ಆನಂದ್: ಹರ್ಯಾಣ ಆಯ್ತು..ಜಾರ್ಖಂಡ್‌ನಲ್ಲಾಯ್ತು ಈಗ ಗುಜರಾತ್‌ನ ಬೋರ್ಸಾದ್‌ನಲ್ಲಿ ಪೊಲೀಸ್ ಸಿಬ್ಬಂದಿ ಹತ್ಯೆಯಾಗಿದೆ. ಹರ್ಯಾಣ ಡಿಎಸ್‌ಪಿ ಮತ್ತು ಜಾರ್ಖಂಡ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹತ್ಯೆಯಾದ ಮಾದರಿಯಲ್ಲೇ ಈಗ ಬೋರ್ಸಾದ್‌ನಲ್ಲಿ ಪೊಲೀಸ್ ಕಾನ್‌ಸ್ಟೆಬಲ್‌ವೊಬ್ಬರನ್ನು ಕೊಲ್ಲಲಾಗಿದೆ. 24 ಗಂಟೆಯಲ್ಲಿ ಇದು ಮೂರನೇ ಪ್ರಕರಣವಾಗಿದ್ದು, ಈಗ ಹತ್ಯೆಗೀಡಾದ ಕಾನ್‌ಸ್ಟೆಬಲ್ ಹೆಸರು ಕಿರಣ್ ರಾಜ್.
ಕಿರಣ್ ರಾಜ್ ಮಂಗಳವಾರ ರಾತ್ರಿ ಬೋರ್ಸಾದ್‌ನಲ್ಲಿ ವಾಹನ ತಪಾಸಣೆ ಕರ್ತವ್ಯದಲ್ಲಿದ್ದರು. ತಡರಾತ್ರಿ ಹೊತ್ತಿಗೆ, ರಾಜಸ್ಥಾನದ ನೋಂದಣಿ ಸಂಖ್ಯೆ ಹೊಂದಿರುವ ಟ್ರಕ್‌ವೊಂದು ಅದೇ ಮಾರ್ಗದಲ್ಲಿ ಬಂತು. ಇದರಲ್ಲಿ ಚಾಲಕ ಮತ್ತು ಇನ್ನೊಬ್ಬಾತ ಕೂಡ ಇದ್ದ. ಅನುಮಾನಾಸ್ಪದವಾಗಿದ್ದ ಕಾರಣ ಟ್ರಕ್ ನಿಲ್ಲಿಸುವಂತೆ ಕಿರಣ್ ರಾಜ್ ಚಾಲಕನಿಗೆ ಹೇಳಿದರು. ಆದರೆ ಆ ಚಾಲಕ ನಿಲ್ಲಿಸುವ ಬದಲು ಕಿರಣ್ ರಾಜ್‌ಗೆ ಡಿಕ್ಕಿ ಹೊಡೆದು, ಇನ್ನಷ್ಟು ರಭಸವಾಗಿ ಚಲಾಯಿಸಿದ್ದಾನೆ. ಕಿರಣ್ ರಾಜ್ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬ ಪೊಲೀಸ್ ಗಾಯಗೊಂಡಿದ್ದಾರೆ. ಡ್ರೈವರ್ ಯಾರೆಂದು ಗೊತ್ತಾಗಿದೆ. ಆತನಿಗಾಗಿ ಹುಡುಕಲಾಗುತ್ತಿದೆ. ಜತೆಗಿದ್ದವನನ್ನೂ ಬಂಧಿಸಲಾಗುವುದು. ಟ್ರಕ್‌ನ್ನು ಜಪ್ತಿ ಮಾಡಲಾಗಿದೆ ಎಂದು ಆನಂದ್ ಜಿಲ್ಲೆಯ ಡಿಎಸ್‌ಪಿ ಅಜಿತ್ ಆರ್ ತಿಳಿಸಿದ್ದಾರೆ.
ಜಾರ್ಖಂಡ್‌ನಲ್ಲಿ ಮಹಿಳಾ ಪೊಲೀಸ್ ಹತ್ಯೆ
ಮಂಗಳವಾರ ತಡರಾತ್ರಿ ತುಪುಡಾನಾ ಒಪಿ ಎಂಬಲ್ಲಿ ವಾಹನ ತಪಾಸಣೆ ಡ್ಯೂಟಿಯಲ್ಲಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಂಧ್ಯಾ ಟೋಪ್ನೋ ಅವರನ್ನು ಪಿಕಪ್ ವಾಹನದ ಚಾಲಕನೊಬ್ಬ ಹತ್ಯೆ ಮಾಡಿದ್ದಾನೆ. ಅನುಮಾನಾಸ್ಪದ ಸಾಮಗ್ರಿ ಸಾಗಿಸುತ್ತಿದ್ದ ಪಿಕಪ್ ವಾಹನವನ್ನು ತಡೆಯಲು ಹೋದ ಸಂಧ್ಯಾರಿಗೆ ಡಿಕ್ಕಿ ಹೊಡೆಸಿ ಪರಾರಿಯಾಗಿದ್ದವನನ್ನು ನಂತರ ರಾಂಚಿ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ವಾಹನ ತಪಾಸಣೆ ಮಾಡುತ್ತಿದ್ದ ಮಹಿಳಾ ಪೊಲೀಸ್ ಅಧಿಕಾರಿ ಹತ್ಯೆ; ಪಿಕಪ್ ವಾಹನ ಚಾಲಕನ ಕ್ರೂರ ಕೃತ್ಯ
ಗಣಿ ಮಾಫಿಯಾಕ್ಕೆ ಡಿಎಸ್‌ಪಿ ಬಲಿ
ಹರ್ಯಾಣದ ತಾವುರು ಡಿಎಸ್‌ಪಿ ಸುರೇಂದ್ರ ಸಿಂಗ್ ಬಿಷ್ಣೋಯ್ ಅವರು ಅಕ್ರಮ ಗಣಿಗಾರಿಕೆ ತಡೆಯಲು ಹೋಗಿದ್ದಾಗ, ಡಂಪರ್ ಟ್ರಕ್‌ನ ಚಾಲಕ ಅವರ ಮೇಲೆಯೇ ವಾಹನ ಹಾಯಿಸಿದ್ದಾನೆ. ಇದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜುಲೈ 18 ರ ರಾತ್ರಿಯಿಂದ 19ರ ತಡರಾತ್ರಿವರೆಗೆ ಒಟ್ಟು ಮೂರು ಆ್ಯಂಡ್ ರನ್ ಪ್ರಕರಣಗಳು ನಡೆದಿವೆ.
ಇದನ್ನೂ ಓದಿ: ಗಣಿ ಮಾಫಿಯಾಕ್ಕೆ ಪೊಲೀಸ್ ಅಧಿಕಾರಿ ಬಲಿ; ಗುಡ್ಡ ಹತ್ತಿದ ಡಿಎಸ್‌ಪಿ ಮೇಲೆ ಟ್ರಕ್ ಹಾಯಿಸಿದ ಚಾಲಕ