Site icon Vistara News

Loot Case : ಲೂಟಿಗೂ ಮೊದಲೇ ಸಕತ್‌ ಸ್ಕೆಚ್‌ ಹಾಕಿದ್ದರು ಖದೀಮರು! 50 ಲಕ್ಷ ರೂ. ಬ್ಯಾಗ್ ಎಗರಿಸಿ ಪರಾರಿಯಾಗಿದ್ದರು

Pragati Maidan tunnel Loot Case

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ಪ್ರಗತಿ ಮೈದಾನ ಸುರಂಗದಲ್ಲಿ ಹಾಡ ಹಗಲಿನಲ್ಲೇ ದರೋಡೆಕೋರರು 50 ಲಕ್ಷ ರೂ. ಲೂಟಿ ಮಾಡಿರುವ ಪ್ರಕರಣಕ್ಕೆ (Pragati Maidan tunnel Loot Case) ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪ್ರಕರಣದಲ್ಲಿ ಏಳು ಆರೋಪಿಗಳನ್ನು ಬಂಧಿಸಲಾಗಿದೆ.

ದೆಹಲಿಯ ಪ್ರಸಿದ್ಧ ಚಾಂದಿನಿ ಚೌಕ್‌ನಲ್ಲಿ ಒಮಿಯಾ ಎಂಟರ್‌ಪ್ರೈಸೆಸ್‌ ಹೆಸರಿನ ಸಂಸ್ಥೆಯಲ್ಲಿ ಡೆಲಿವರಿ ಏಜೆಂಟ್‌ ಆಗಿ ಕೆಲಸ ಮಾಡುವ ಪಟೇಲ್‌ ಸಜನ್‌ ಕುಮಾರ್‌ ಹೆಸರಿನ ವ್ಯಕ್ತಿ ಗುರುಗ್ರಾಮದಲ್ಲಿ ಬೇರೊಬ್ಬರಿಗೆ ತಲುಪಿಸಲು ಹಣ ತೆಗೆದುಕೊಂಡು ಹೋಗುವ ಸಮಯದಲ್ಲಿ ಸುರಂಗದೊಳಗೆ ಅವರನ್ನು ಅಟ್ಯಾಕ್‌ ಮಾಡಿದ್ದ ದರೋಡೆಕೋರರು ಅವರ ಬಳಿ ಇದ್ದ 50 ಲಕ್ಷ ರೂ. ಹಣವನ್ನು ಲೂಟಿ ಮಾಡಿದ್ದರು.

ಇದನ್ನೂ ಓದಿ: Viral News : 20 ವರ್ಷಗಳಿಂದ ಕೆಲಸ ಮಾಡದಿದ್ದರೂ ಸಂಬಳ ಪಡೆಯುತ್ತಿದ್ದ ಶಿಕ್ಷಕಿ!
ಈ ರೀತಿ ದರೋಡೆ ಮಾಡುವುದಕ್ಕೂ ಕೆಲ ದಿನಗಳ ಮೊದಲೇ ದರೋಡೆಕೋರರು ಪಟೇಲ್‌ ಸಜನ್‌ ಅವರನ್ನು ಹಿಂಬಾಲಿಸುತ್ತಿದ್ದರು. ಪಟೇಲ್‌ ಅವರು ಚಾಂದಿನಿ ಚೌಕ್‌ನ ಕಚೇರಿಯಿಂದ ಹಣವನ್ನು ಓಲಾ ಕ್ಯಾಬ್‌ನ ಬಳಿ ತೆಗೆದುಕೊಂಡು ಬರುವಾಗ ಅವರ ಹಿಂದೆಯೇ ಆರೋಪಿ ಉಸ್ಮಾನ್‌ ನಡೆದುಬಂದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಒಟ್ಟು ನಾಲ್ಕು ಗುಂಪುಗಳು ಒಟ್ಟಾಗಿ ಸೇರಿಕೊಂಡು ಈ ದರೋಡೆ ಮಾಡಿವೆ. ದರೋಡೆ ಮಾಡಿರುವವರು ದರೋಡೆ ಆದ ತಕ್ಷಣ ದೆಹಲಿಯಿಂದ ಕಾಲ್ಕಿತ್ತಿದ್ದಾರೆ. ದೆಹಲಿ, ಹರ್ಯಾಣ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದಲ್ಲಿ ತನಿಖೆ ನಡೆಸಿರುವ ಪೊಲೀಸರು ಸುಮಾರು 1,600 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅವರ ಹೇಳಿಕೆಯ ಆಧಾರದ ಮೇಲೆ ಮತ್ತು ಬೇರೆ ಬೇರೆ ಸಾಕ್ಷ್ಯಾಧಾರಗಳ ಮೇಲೆ ಒಟ್ಟು ಏಳು ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಗತಿ ಮೈದಾನ ಸುರಂಗವು ಒಂದೂವರೆ ಕಿಲೋ ಮೀಟರ್‌ನಷ್ಟು ಉದ್ದವಿದೆ. ಅದರಲ್ಲಿ ಎಲ್ಲೆಡೆ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ರಕ್ಷಣಾ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ದರೋಡೆ ನಡೆಯುವ ಸಮಯದಲ್ಲಿ ಸುರಂಗದ ಎರಡು ಬದಿಗಳಲ್ಲಿ ಒಟ್ಟು 16 ರಕ್ಷಣಾ ಸಿಬ್ಬಂದಿಗಳಿದ್ದರು ಎಂದು ವರದಿಯಿದೆ.

Exit mobile version