Site icon Vistara News

ರಾಹುಲ್ ಗಾಂಧಿ ಯಾವುದಕ್ಕೂ ಹೆದರುವುದಿಲ್ಲ; ಅಣ್ಣನ ಪರ ವಹಿಸಿದ ಪ್ರಿಯಾಂಕಾ ಗಾಂಧಿ, ಕೋರ್ಟ್​ ತೀರ್ಪಿಗೆ ಒಪ್ಪಿಗೆಯಿಲ್ಲ ಎಂದ ಕೇಜ್ರಿವಾಲ್​

Priyanka Gandhi Supports Her Brother Rahul Gandhi who Convicted in Modi surname case

#image_title

ನವ ದೆಹಲಿ: ಎಲ್ಲ ಕಳ್ಳರಿಗೂ ಮೋದಿ ಎಂಬ ಉಪನಾಮವೇ ಇರುತ್ತದೆ ಎಂದು ರಾಹುಲ್​ ಗಾಂಧಿ 2019ರಲ್ಲಿ ಹೇಳಿಕೆ ನೀಡಿದ್ದ ಕೇಸ್​​ನಲ್ಲಿ ಅವರು ದೋಷಿ ಎಂದು ಸೂರತ್​ ಕೋರ್ಟ್​ ತೀರ್ಪು ನೀಡಿದೆ. ಅಷ್ಟೇ ಅಲ್ಲ, 2 ವರ್ಷ ಜೈಲು ಶಿಕ್ಷೆ, 15 ಸಾವಿರ ದಂಡವನ್ನೂ ವಿಧಿಸಿ ಬಳಿಕ ಜಾಮೀನು ನೀಡಿದೆ. ಹೀಗೆ ಮೋದಿ ಉಪನಾಮದ ವಿಷಯದಲ್ಲಿ ಅವಹೇಳನ ಮಾಡಿದ ರಾಹುಲ್ ಗಾಂಧಿಯವರು ದೋಷಿ ಎಂದು ಕೋರ್ಟ್ ತೀರ್ಪು ನೀಡಿದ್ದನ್ನು ಬಿಜೆಪಿ ನಾಯಕರು ಸ್ವಾಗತಿಸಿದ್ದರೆ, ಅತ್ತ ಕಾಂಗ್ರೆಸ್​​ ಮುಖಂಡರು ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದ್ದಾರೆ.

ರಾಹುಲ್ ಸೋದರಿ, ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಕೂಡ ಟ್ವೀಟ್ ಮಾಡಿದ್ದಾರೆ. ಕೇಂದ್ರ ಮತ್ತು ಅದರ ಮಿಷನರಿಗಳು, ದಂಡ, ಶಿಕ್ಷೆ ಮತ್ತು ತಾರತಮ್ಯದ ಮೂಲಕ ರಾಹುಲ್ ಗಾಂಧಿ ಧ್ವನಿಯನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ. ಆದರೆ ನನ್ನ ಸಹೋದರ ಇಂಥದ್ದಕ್ಕೆಲ್ಲ ಯಾವತ್ತು ಹೆದರುವುದಿಲ್ಲ. ಅವರು ಸತ್ಯವನ್ನು ಮಾತನಾಡುವುದನ್ನು ಮುಂದುವರಿಸುತ್ತಾರೆ. ಸತ್ಯದ ಶಕ್ತಿ ಮತ್ತು ಇಡೀ ದೇಶದ ಜನರ ಪ್ರೀತಿ-ಅಭಿಮಾನ ಅವರೊಂದಿಗೆ ಇದೆ ಎಂದು ಹೇಳಿದ್ದಾರೆ.

ಹಾಗೇ, ದೆಹಲಿ ಮುಖ್ಯಮಂತ್ರಿ, ಆಪ್​ ನಾಯಕ ಅರವಿಂದ್ ಕೇಜ್ರಿವಾಲ್​ ಅವರೂ ರಾಹುಲ್ ಗಾಂಧಿ ಪರ ವಹಿಸಿದ್ದಾರೆ. ಅವರೂ ಕೂಡ ಟ್ವೀಟ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ‘ಬಿಜೆಪಿಯೇತರ ಪಕ್ಷಗಳು ಮತ್ತು ನಾಯಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಷಡ್ಯಂತ್ರ ನಡೆಯುತ್ತಲೇ ಇದೆ. ನಮಗೂ ಕಾಂಗ್ರೆಸ್​​ನೊಂದಿಗೆ ಭಿನ್ನಾಭಿಪ್ರಾಯವಿದೆ. ಆದರೆ ಈ ರೀತಿ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿಯನ್ನು ಸಿಲುಕಿಸಿರುವುದು ಸರಿಯಲ್ಲ. ಪ್ರಶ್ನಿಸುವುದು ಸಾರ್ವಜನಿಕರು ಮತ್ತು ಪ್ರತಿಪಕ್ಷಗಳ ಹಕ್ಕು. ನಾವು ನ್ಯಾಯಾಲಯವನ್ನು ಗೌರವಿಸುತ್ತೇವೆ, ಆದರೆ ಈ ತೀರ್ಪನ್ನು ಒಪ್ಪುವುದಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ. ಗುಜರಾತ್​​ನಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ರಾಹುಲ್ ಗಾಂಧಿಯವರನ್ನು ದೋಷಿ ಎಂದು ಬಿಂಬಿಸುವಲ್ಲಿ ಅದು ಪ್ರಭಾವ ಬೀರಿದೆ ಎಂದು ಅರವಿಂದ್ ಕೇಜ್ರಿವಾಲ್​ ಆರೋಪ ಮಾಡಿದ್ದಾರೆ.

Exit mobile version