ಬೆಂಗಳೂರು: ಖ್ಯಾತ ಬಾಲಿವುಡ್ ಗಾಯಕಿ ಅನುರಾಧಾ ಪೌಡ್ವಾಲ್ (Anuradha Paudwal) ಶನಿವಾರ (ಮಾರ್ಚ್ 16) ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರ್ಪಡೆಗೊಂಡಿದ್ದಾರೆ. ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಮುಖಂಡರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪೌಡ್ವಾಲ್, ಪ್ರಧಾನಿ ನರೇಂದ್ರ ಮೋದಿ ಅವರನ್ನು (Anuradha Paudwal joins BJP) ಹಾಡಿ ಹೊಗಳಿದರು. ʻʻಮೋದಿ ನೇತೃತ್ವದಲ್ಲಿ ಪಕ್ಷಕ್ಕೆ ಸೇರಲು ನನಗೆ ಸಂತೋಷವಾಗಿದೆ’’ ಎಂದರು.
ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಮತ್ತು ಮುಖ್ಯ ವಕ್ತಾರ ಅನಿಲ್ ಬಲುನಿ ಸೇರಿದಂತೆ ಹಿರಿಯ ನಾಯಕರ ಸಮ್ಮುಖದಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಗಾಯಕಿ ಅನುರಾಧಾ ಪೌಡ್ವಾಲ್ ಬಿಜೆಪಿಗೆ ಸೇರ್ಪಡೆಯಾದರು.
ಇದನ್ನೂ ಓದಿ: IPL 2024 : ಲೋಕಸಭಾ ಚುನಾವಣೆ ಹಿನ್ನೆಲೆ; ಐಪಿಎಲ್ ಎರಡನೇ ಹಂತ ದುಬೈಗೆ ಶಿಫ್ಟ್
#WATCH | Famous singer Anuradha Paudwal joins the Bharatiya Janata Party in Delhi pic.twitter.com/SBFSVLjVU8
— ANI (@ANI) March 16, 2024
ಬಾಲಿವುಡ್ ಪ್ರವೇಶಿಸುವ ಮುನ್ನ ರೇಡಿಯೊ ಕಾರ್ಯಕ್ರಮವೊಂದರಲ್ಲಿ ಹಾಡಿದ್ದರು. ಅನುರಾಧಾ ಪೌಡ್ವಾಲ್. 1973ರಲ್ಲಿ `ಅಭಿಮಾನ್’ ಚಲನಚಿತ್ರದಿಂದ ತಮ್ಮ ಸಂಗೀತ ಪ್ರಯಾಣವನ್ನು ಪ್ರಾರಂಭಿಸಿದರು. ಕಿಶೋರ್ ಕುಮಾರ್, ಮೊಹಮ್ಮದ್ ರಫಿ, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಯೇಸುದಾಸ್, ಮನ್ನಾ ಡೇ, ಮೊಹಮ್ಮದ್ ಅಜೀಜ್, ಕುಮಾರ್ ಸಾನು, ಉದಿತ್ ನಾರಾಯಣ್, ಸೋನು ನಿಗಮ್, ಮುಖೇಶ್, ಪಂಕಜ್ ಉದಾಸ್, ಮನ್ಹರ್ ಉದಾಸ್, ಸುರೇಶ್ ವಾಡ್ಕರ್, ನಿತಿನ್ ಮುಖೇಶ್, ಅಭಿಜೀತ್ ಭಟ್ಟಾಚಾರ್ಯ ಮತ್ತು ಇತರ ಗಾಯಕರ ಜತೆ ಹಾಡಿದ್ದಾರೆ. ʻಜಾನೆ ಹೋಗಾ ಕ್ಯಾʼ ಚಿತ್ರದ ‘ಪಾಲ್ಕೇನ್ ಉತಕೆ ದೇಖಿಯೇ ಅನುರಾಧಾ ಪೌಡ್ವಾಲ್ ಅವರ ಕೊನೆಯ ಹಾಡು. ಮತ್ತೆ ಸಿನಿಮಾಗಾಗಿ ಹಾಡನ್ನು ಹಾಡಲೇ ಇಲ್ಲ ಅನುರಾಧಾ ಪೌಡ್ವಾಲ್. ದಿಲ್ ಸೇರಿದಂತೆ ಹಲವಾರು ಸೂಪರ್ ಹಿಟ್ ಸಿನಿಮಾಗಳ ಹಾಡುಗಳು ಇವರ ಕಂಠದಲ್ಲಿ ಮೂಡಿ ಬಂದಿದೆ.
ಅಯೋಧ್ಯೆಯ ರಾಮಮಂದಿರ ಪ್ರಾಣ ಪ್ರತಿಷ್ಠಾಪನಾ ಸಮಾರಂಭದಲ್ಲಿ ರಾಮ ಭಜನೆಯ ಕಾರ್ಯಕ್ರಮವನ್ನು ಅನುರಾಧಾ ಪೌಡ್ವಾಲ್ ನೀಡಿದ್ದರು.