ನವದೆಹಲಿ: ಜೈಲಿನಲ್ಲಿರುವ ಸಿಖ್ಖರ ಬಿಡುಗಡೆಗೆ ಆಗ್ರಹಿಸಿ, ಖವಾಮಿ ಇನ್ಸಾಫ್ ಮೋರ್ಚಾ ತನ್ನ ಪ್ರತಿಭಟನೆಯನ್ನು ಮುಂದುವರಿಸಿದ್ದು, ಪಂಜಾಬ್‌ನ ಚಂಡೀಗಢ-ಮೊಹಾಲಿ ಗಡಿಯಲ್ಲಿ ಭಾರೀ ಬಂದೋಬಸ್ತ್ ಕೈಗೊಳ್ಳಲಾಗಿದೆ. ನಿನ್ನೆ ಪ್ರತಿಭಟನಾಕಾರರು ಮತ್ತು ಪೊಲೀಸ್ ನಡುವೆ ನಡೆದ ಸಂಘರ್ಷದಲ್ಲಿ 7 ಏಳು ಪೊಲೀಸರು ಗಾಯಗೊಂಡಿದ್ದರು(Punjab). ಪ್ರತಿಭಟನಾನಿರತರ ವಿರುದ್ಧ ಎರಡು ಎಫ್ಐಆರ್ ದಾಖಲಾಗಿವೆ.
ಪ್ರತಿಭಟನೆ ವೇಳೆ ನಡೆದ ಸಂಘರ್ಷದಲ್ಲಿ ವಾಹನಗಳನ್ನು ಜಖಂಗೊಳಿಸಲಾಯಿತು. ಖಡ್ಗ ಮತ್ತು ಲಾಠಿಗಳೊಂದಿಗೆ ಪೊಲೀಸರ ಜತೆ ಪ್ರತಿಭಟನಾಕಾರರು ಕಾದಾಟಕ್ಕೆ ಇಳಿದಿದ್ದರು. ಇದರಿಂದಾಗಿ ಏಳು ಪೊಲೀಸರು ಗಾಯಗೊಂಡಿದ್ದರು.
ಆಸ್ತಿಪಾಸ್ತಿ ಹಾನಿ ಮಾಡಿದ, ಹಿಂಸಾಚಾರ ಕೈಗೊಂಡ ಪ್ರತಿಭಟನಾಕಾರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪಂಜಾಬ್ ಎಡಿಜಿಪಿ ಅವರು ತಿಳಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ, ಕೊಲೆಯಾದ ಪಂಜಾಬಿ ಸಿಂಗರ್ ಸಿಧು ಮೂಸೇವಾಲ ಅವರ ತಾಯಿ ಚರನ್ ಕೌರ್ ಅವರು ಭೇಟಿ ನೀಡಿದ್ದರು ಎಂದು ಹೇಳಲಾಗಿದೆ.