Site icon Vistara News

Punjab CM | ದಿನಗೂಲಿ ಹೆಚ್ಚಳಕ್ಕೆ ಆಗ್ರಹಿಸಿ ಪಂಜಾಬ್ ಸಿಎಂ ಭಗವಂತ್ ಮಾನ್‌ ಮನೆಗೆ ದಲಿತ ಕೃಷಿ ಕಾರ್ಮಿಕರ ಮುತ್ತಿಗೆ

ನವದೆಹಲಿ: ದಿನಗೂಲಿ ಹೆಚ್ಚಳ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರೀ ಸಂಖ್ಯೆಯ ದಲಿತ ಕೃಷಿ ಕಾರ್ಮಿಕರು ಪಂಜಾಬ್ ಮುಖ್ಯಮಂತ್ರಿ (Punjab CM) ಭಗವಂತ್ ಮಾನ್ (Bhagwant Mann) ಅವರ ಸಂಗ್ರೂರ್ ನಗರದ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಬುಧವಾರ ನಡೆದಿದೆ. ಈ ವೇಳೆ, ಪೊಲೀಸರು ಲಾಠಿ ಚಾರ್ಜ್ ಮಾಡಿ, ಪ್ರತಿಭಟನಾಕಾರರನ್ನು ಚದುರಿಸಿದರು.

ಮನ್ರೇಗಾ ಯೋಜನೆಯಡಿ ದಿನಗೂಲಿಯನ್ನು 700 ರೂ.ಗೆ ಹೆಚ್ಚಿಸಬೇಕು. ದಲಿತರಿಗೆ ಐದು ಮರ್ಲಾ ಪ್ಲಾಟ್ ಸ್ಕೀಮ್ ಜಾರಿ ಮಾಡಬೇಕು, ಕಾಮನ್ ಪಂಚಾಯತ್‌ನ ಮೂರನೇ ಭಾಗವನ್ನು ಸಮುದಾಯಕ್ಕೆ ಭೋಗ್ಯಕ್ಕೆ ನೀಡುವುದು ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಕೃಷಿ ಕಾರ್ಮಿಕರು ಭಾರೀ ಪ್ರತಿಭಟನೆಯನ್ನು ಕೈಗೊಂಡಿದ್ದರು.

8 ಕಾರ್ಮಿಕ ಸಂಘಟನೆಗಳ ಒಕ್ಕೂಟ ಸಂಝಾ ಮಜ್ದೂರ್ ಮೋರ್ಚಾ ವೇದಿಕೆಯಡಿ ಕೃಷಿ ಕಾರ್ಮಿಕರು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಪಂಜಾಬ್‌ನ ಸಂಗ್ರೂರ್‌ ನಗರದ ಪಟಿಯಾಲಾ-ಭಟಿಂಡಾ ರಸ್ತೆಯಲ್ಲಿ ಜಮಾವಣೆಗೊಂಡ ನೂರಾರು ಕೃಷಿ ಕಾರ್ಮಿಕರು, ಬಳಿಕ ಮುಖ್ಯಮಂತ್ರಿ ಇರುವ ಮನೆಯತ್ತ ಮೆರವಣಿಗೆ ಹೊರಟರು. ಪ್ರತಿಭಟನಾಕಾರರು ಸಿಎಂ ಮನೆಗೆ ಹತ್ತಿರವಾಗುತ್ತಿದ್ದಂತೆ ಪೊಲೀಸರು ಲಾಠಿ ಚಾರ್ಜ್ ಮಾಡಿ, ಚದುರಿಸಿದ ಘಟನೆ ನಡೆಯಿತು.

ಇದನ್ನೂ ಓದಿ | By poll results: ಸಂಗ್ರೂರ್‌ನ ಭಗವಂತ್‌ ಮಾನ್‌ ಕೋಟೆ ಛಿದ್ರವಾಗಿದ್ದೇಕೆ? ಇಲ್ಲಿದೆ 5 ಕಾರಣ

Exit mobile version