ಚಂಡೀಗಢ ವಿಶ್ವ ವಿದ್ಯಾಲಯದ ಹುಡುಗಿಯೊಬ್ಬಳ ಅಶ್ಲೀಲ ವಿಡಿಯೋ ಲೀಕ್ ಕೇಸ್ನಲ್ಲಿ ಶಿಮ್ಲಾದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಯೂನಿವರ್ಸಿಟಿ ಹಾಸ್ಟೆಲ್ನಲ್ಲಿದ್ದ ವಿದ್ಯಾರ್ಥಿನಿಯೊಬ್ಬಳು ತನ್ನೊಂದಿಗೆ ಇದ್ದ ಸುಮಾರು 60 ಹುಡುಗಿಯರು ಸ್ನಾನ ಮಾಡುತ್ತಿದ್ದಾಗಿನ ವಿಡಿಯೊ ರೆಕಾರ್ಡ್ ಮಾಡಿ, ಅದನ್ನು ಎಂಎಂಎಸ್ ಮೂಲಕ ಬಾಯ್ಫ್ರೆಂಡ್ಗೆ ಕಳಿಸಿದ್ದಳು. ಆತ ಅವನ್ನೆಲ್ಲ ವೈರಲ್ ಮಾಡಿದ್ದ ಎಂಬ ಸುದ್ದಿ ಇಂದು ಬೆಳಗ್ಗೆ ಹರಡಿತ್ತು. ಇದೇ ವಿಷಯ ಯೂನಿವರ್ಸಿಟಿ ಕ್ಯಾಂಪಸ್ನಲ್ಲಿನ ದೊಡ್ಡ ಪ್ರತಿಭಟನೆಗೂ ಕಾರಣವಾಗಿತ್ತು. ಅದರ ಬೆನ್ನಲ್ಲೇ ಆ ಯುವತಿಯನ್ನು ಪೊಲೀಸರು ಬಂಧಿಸಿದ್ದರು.
ಆದರೆ ವಾಸ್ತವದಲ್ಲಿ ಹೀಗೆ 60 ಹುಡುಗಿಯರ ಸ್ನಾನದ ವಿಡಿಯೋ ವೈರಲ್ ಆಗಿಲ್ಲ. ಬಂಧಿತಳಾದ ಹುಡುಗಿ ತನ್ನ ಅಶ್ಲೀಲ ವಿಡಿಯೋವನ್ನು ಮಾತ್ರ ಗೆಳೆಯನಿಗೆ ಕಳಿಸಿದ್ದಳು. ಆತ ಅದನ್ನು ಅಡಲ್ಟ್ ವೆಬ್ಸೈಟ್ಗೆ ಹಾಕಿ ವೈರಲ್ ಮಾಡಿದ್ದ ಎಂಬುದು ಸ್ಪಷ್ಟವಾಗಿತ್ತು. ಬೆಳಗ್ಗೆಯಿಂದ ಈ ಹುಡುಗಿಯನ್ನು ತೀವ್ರ ವಿಚಾರಣೆ ನಡೆಸಿದ ಪೊಲೀಸರು, ಆಕೆ ನೀಡಿದ ಮಾಹಿತಿ ಅನ್ವಯ ಇದೀಗ ಶಿಮ್ಲಾದ ರೊಹ್ರು ನಿವಾಸಿ ಸನ್ನಿ ಮೆಹ್ತಾ (23) ಎಂಬಾತನನ್ನು ಬಂಧಿಸಿದ್ದಾರೆ. ಅಂದಹಾಗೇ, ಆ ವಿದ್ಯಾರ್ಥಿನಿಯೂ ಇದೇ ರೊಹ್ರು ಊರಿನವಳೇ ಆಗಿದ್ದಾಳೆ.
ಆದರೆ 60 ವಿದ್ಯಾರ್ಥಿನಿಯರ ಖಾಸಗಿ ಕ್ಷಣದ ವಿಡಿಯೋ ವೈರಲ್ ಆಗಿದೆ ಎಂಬ ಸುದ್ದಿಯ ಬೆನ್ನಲ್ಲೇ ಯೂನಿವರ್ಸಿಟಿ ಕ್ಯಾಂಪಸ್ನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿತ್ತು. ವಿದ್ಯಾರ್ಥಿನಿಯರು ಗಲಾಟೆ ಸೃಷ್ಟಿಸಿದ್ದರು. ಯೂನಿವರ್ಸಿಟಿ ಗೇಟ್ ಬಾಗಿಲು ಹಾಕಿದ್ದರೂ, ಅದರ ಮೇಲೆಲ್ಲ ಹತ್ತಿ, ಕೆಳಗೆ ಹಾರಿ ಅವಾಂತರ ಸೃಷ್ಟಿ ಮಾಡಿದ್ದರು. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದ್ದರು.
ಇದನ್ನೂ ಓದಿ: Punjab MMS Scandal | ತನ್ನದೇ ಅಶ್ಲೀಲ ವಿಡಿಯೊ ರೆಕಾರ್ಡ್ ಮಾಡಿ ಬಾಯ್ಫ್ರೆಂಡ್ಗೆ ಕಳಿಸಿದ್ದಳು ವಿದ್ಯಾರ್ಥಿನಿ