Site icon Vistara News

Radhika Merchant: ವಿವಾಹಪೂರ್ವ ಸಂಭ್ರಮದಲ್ಲಿ ಕ್ಯೂಟ್‌ ಆಗಿ ಕಂಡ ರಾಧಿಕಾ ಮರ್ಚಂಟ್‌- ಅನಂತ್‌ ಅಂಬಾನಿ!

Radhika Merchant Anant Ambani Looks Dapper In Tuxedo At Pre-Wedding Bash

ಬೆಂಗಳೂರು: ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ, ವಿಶ್ವದ ಶ್ರೀಮಂತರಲ್ಲಿ ಒಬ್ಬರಾದ ಉದ್ಯಮಿ ಮುಕೇಶ್‌ (Mukesh Ambani) ಅಂಬಾನಿ ಪುತ್ರ ಅನಂತ್‌ ಅಂಬಾನಿ (Anant Ambani) ಹಾಗೂ ಉದ್ಯಮಿ ವಿರೇನ್‌ ಮರ್ಚಂಟ್‌ ಅವರ ಪುತ್ರಿ ರಾಧಿಕಾ ಮರ್ಚಂಟ್‌ (Radhika Merchant) ವಿವಾಹ ಪೂರ್ವ ಸಂಭ್ರಮದ ಹಿನ್ನೆಲೆಯಲ್ಲಿ ಗುಜರಾತ್‌ನ ಜಾಮ್‌ನಗರದಲ್ಲಿ ಸ್ವರ್ಗವೇ ಧರೆಗಿಳಿದಿದೆ. ಸಾವಿರಾರು ಗಣ್ಯರ ಆಗಮನದ ಮಧ್ಯೆಯೇ ಅದ್ಧೂರಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಮೂರು ದಿನಗಳ ಸಂಭ್ರಮಾಚರಣೆಯಲ್ಲಿ ಖ್ಯಾತ ಪಾಪ್‌ ಗಾಯಕಿ ರಿಹಾನಾ (Rihanna) ಅವರ ಲೈವ್‌ ಶೋ ಕೂಡ ಅದ್ಧೂರಿಯಾಗಿ ನೆರವೇರಿದೆ. ಇದೀಗ ರಾಧಿಕಾ ಮರ್ಚಂಟ್‌ ಹಾಗೂ ಅನಂತ್‌ ಅಂಬಾನಿ ಜೋಡಿಯ ಫೋಟೊ ವೈರಲ್‌ ಆಗಿದೆ. ಮಿನುಗುವ ಗುಲಾಬಿ ಬಣ್ಣದ ಟ್ಯೂಲ್ ಕಾಲಮ್ ಡ್ರೆಸ್‌ನಲ್ಲಿ (shimmery tulle column dress) ಅದ್ಭುತವಾಗಿ ಕಂಡಿದ್ದಾರೆ ರಾಧಿಕಾ ಮರ್ಚಂಟ್‌.

ರಾಧಿಕಾ ಅವರ ಎನರ್ಜಿ ಮತ್ತು ಸ್ಟೈಲಿಶ್ ಪರ್ಸನಾಲಿಟಿಗೆ ಸರಿಸಾಟಿಯಾಗಿ ಅನಂತ್ ಅಂಬಾನಿ ಬ್ಯ್ಲಾಕ್‌ ಆಂಡ್‌ ವೈಡ್‌ ಟುಕ್ಸೆಡೊವನ್ನು (black and white tuxedo) ಧರಿಸಿದ್ದರು. ಪಾರ್ಟಿಯ ಸಮಯದಲ್ಲಿ, ರಾಧಿಕಾ ಅವರು ಅತಿಥಿಗಳು ಮತ್ತು ಅವರ ಕುಟುಂಬದೊಂದಿಗೆ ಬೆರೆತಿದ್ದಾರೆ. ನೀತಾ ಮತ್ತು ಮುಖೇಶ್ ಅಂಬಾನಿಯೊಂದಿಗೆ ಇದ್ದ ಸುಂದರ ಕ್ಷಣ ಕೂಡ ವೈರಲ್‌ ಆಗಿದೆ.

ಇದನ್ನೂ ಓದಿ: Anant Ambani Radhika Merchant: ಹೀಗಿದೆ ನೋಡಿ! ಅಂಬಾನಿ ಫ್ಯಾಮಿಲಿಯ ಪ್ರಿ-ವೆಡ್ಡಿಂಗ್‌ ಕಾರ್ನಿವಲ್‌ನ ರಾಯಲ್ ಡ್ರೆಸ್‌ಕೋಡ್ಸ್!

ಮದುವೆಯ ಪೂರ್ವ ಸಂಭ್ರಮದಲ್ಲಿ ಶಾರುಖ್ ಖಾನ್, ಗೌರಿ ಖಾನ್, ಸಲ್ಮಾನ್ ಖಾನ್, ಬಿಲ್ ಗೇಟ್ಸ್, ಮಾರ್ಕ್ ಜುಕರ್‌ಬರ್ಗ್, ಸದ್ಗುರು, ಅಕ್ಷಯ್ ಕುಮಾರ್, ಮುಂತಾದ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಆಲಿಯಾ ಭಟ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ರಣಬೀರ್ ಕಪೂರ್, ನೀತು ಕಪೂರ್, ಅನನ್ಯಾ ಪಾಂಡೆ, ಜಾಹ್ನವಿ ಕಪೂರ್, ಶನಯಾ ಕಪೂರ್, ಶ್ರದ್ಧಾ ಕಪೂರ್, ಸೋನಮ್ ಕಪೂರ್ ಅಹುಜಾ, ಅನಿಲ್ ಕಪೂರ್, ಡೇವಿಡ್ ಧವನ್, ಎಂಎಸ್ ಧೋನಿ, ರೋಹಿತ್ ಶರ್ಮಾ, ಹಾರ್ದಿಕ್ ನೆಹ್ವಾಲ್, ಹಾರ್ದಿಕ್ ಪಾಂಡ್ಯ ಜಾಫ್ರಿ, ಅಮೀರ್ ಖಾನ್, ಸುಹಾನಾ ಖಾನ್, ರಿಯಾ ಕಪೂರ್, ಕರೀನಾ ಕಪೂರ್ ಖಾನ್, ಸೈಫ್ ಅಲಿ ಖಾನ್, ಸಾರಾ ಅಲಿ ಖಾನ್, ಇಬ್ರಾಹಿಂ ಅಲಿ ಖಾನ್, ಜಾನ್ ಅಬ್ರಹಾಂ, ಕರಿಷ್ಮಾ ಕಪೂರ್, ಅಟ್ಲೀ, ರಾಮ್ ಚರಣ್, ಮನೀಶ್ ಮಲ್ಹೋತ್ರಾ, ಮಾಧುರಿ ದೀಕ್ಷಿತ್ ನೇನೆ, ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಇತರರ ಇದ್ದರು.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಂಭ್ರಮಾಚರಣೆ ಮಾರ್ಚ್ 3ರವರೆಗೆ ನಡೆಯಲಿದ್ದು, ಗುಜರಾತ್‌ನ ಜಾಮ್‌ನಗರದಲ್ಲಿ ಆಯೋಜಿಸಲಾಗಿದೆ.

ಗಣ್ಯರ ದಂಡೇ ಆಗಮನ

ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್‌ ಅವರ ವಿವಾಹ ಪೂರ್ವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಾಮ್‌ನಗರಕ್ಕೆ ಗಣ್ಯರ ದಂಡೇ ಆಗಮಿಸಿದೆ. ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪುತ್ರಿ ಇವಾಂಕಾ ಟ್ರಂಪ್‌, ವೆಸ್ಟ್‌ ಇಂಡೀಸ್‌ ಕ್ರಿಕೆಟಿಗ ಡ್ವೇನ್‌ ಬ್ರಾವೋ, ಬಾಲಿವುಡ್‌ ನಟರಾದ ಅಕ್ಷಯ್‌ ಕುಮಾರ್‌, ಸುನೀಲ್‌ ಶೆಟ್ಟಿ, ಕ್ರಿಕೆಟಿಗರಾದ ಸೂರ್ಯಕುಮಾರ್‌ ಯಾದವ್‌, ಇಶಾನ್‌ ಕಿಶನ್‌ ಸೇರಿ ಸಾವಿರಾರು ಗಣ್ಯರು ಜಾಮ್‌ನಗರದಲ್ಲಿ ಬೀಡು ಬಿಟ್ಟಿದ್ದಾರೆ.

Exit mobile version