ರಾಯ್‌ಬರೇಲಿ: ಉತ್ತರಪ್ರದೇಶದ ರಾಯ್‌ಬರೇಲಿಯಲ್ಲಿ 6-7 ಹುಡುಗರು ಓರ್ವ ದಲಿತ ಹುಡುಗನ ವಿರುದ್ಧ ದೌರ್ಜನ್ಯ ನಡೆಸಿದ್ದು ಕಂಡುಬಂದಿದೆ. ಬೈಕಿನ ಮೇಲೆ ಕುಳಿತ ಹುಡುಗನ್ನೊಬ್ಬ ಮತ್ತೋರ್ವ ದಲಿತ ಹುಡುಗನಿಗೆ ತನ್ನ ಪಾದವನ್ನು ನೆಕ್ಕುವಂತೆ ಮಾಡಿದ ಅಮಾನವೀಯ ದೃಶ್ಯ ಎಲ್ಲೆಡೆ ವೈರಲ್ ಆಗಿದೆ. ಈ ಘಟನೆಯ ಕುರಿತು ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಪೊಲೀಸರು ಈ ರೀತಿಯ ದೌರ್ಜನ್ಯ ನಡೆಸಿದ 7 ಹುಡುಗರನ್ನು ವಶಕ್ಕೆ ಪಡಡೆದಿದ್ದಾರೆ.
ಆರೋಪಿಗಳು ದಲಿತ ಹುಡುಗನನ್ನು ʼಠಾಕುರ್ʼ ಎಂಬ ಶಬ್ಧವನ್ನು ಹೇಳಲು ಒತ್ತಾಯಿಸುವ ದೃಶ್ಯ ಒಂದು ವಿಡಿಯೋದಲ್ಲಿ ಕಾಣುತ್ತದೆ. ಮತ್ತೊಂದರಲ್ಲಿ ದಲಿತ ಹುಡುಗ ಗಾಂಜಾ ಮಾರುತ್ತಿದ್ದ ಹಾಗಾಗಿ ಆತನನ್ನು ಹೊಡೆಯಲಾಗಿತ್ತು ಎಂದು ಆರೋಪಿಗಳು ಹೇಳಿದ್ದಾರೆ. ಆದರೆ ಈ ಘಟನೆಯ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ದೊರಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಏಪ್ರಿಲ್ 10ರಂದು ರಾಯ್‌ಬರೇಲಿಯಲ್ಲಿ ಜರುಗಿದ್ದು ವಿಡಿಯೋ ವೈರಲ್ ಆಗಿತ್ತು. ಆದರೆ ಪೊಲೀಸರು ದೌರ್ಜನ್ಯಕ್ಕೊಳಗಾದ ದಲಿತ ಹುಡುಗ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ದೌರ್ಜನ್ಯಕ್ಕೆ ಒಳಗಾದ ಹುಡುಗ ಹತ್ತನೇ ತರಗತಿಯಲ್ಲಿ ಓದಿತ್ತಿದ್ದು, ತನ್ನ ತಾಯಿಯ ಜತೆ ವಾಸಿಸುತ್ತಿದ್ದ. ಈ ಹಿಂದೆ ಆರೋಪಿಗಳ ಮನೆಯಲ್ಲಿ ಕೆಲಸಕ್ಕಾಗಿ ಆ ಹುಡುಗನ ತಾಯಿ ಹೋಗುತ್ತಿದ್ದರು. ಕೆಲಸದ ವೇತನವನ್ನು ಕೇಳಲು ಹುಡುಗ ಅವರ ಬಳಿ ಹೋದಾಗ ಆತನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಆರಂಭಿಕ ವರದಿಯಾಗಿತ್ತು. ಆದರೆ ಇದನ್ನು ಆ ಹುಡುಗನ ಸಹೋದರಿ ನಿರಾಕರಿಸಿದ್ದಾರೆ. ʼಆತನ ಮೇಲೆ ಯಾಕೆ ಈ ರೀತಿಯ ದೌರ್ಜನ್ಯ ನಡೆದಿದೆ ಎಂದು ನಮಗೂ ತಿಳಿದಿಲ್ಲ. ಆರೋಪಿಗಳನ್ನು ನನ್ನ ತಮ್ಮ ಕೇಳಿದಾಗ ಅವರು ಆತನನ್ನು ಹೊಡೆದಿದ್ದಾರೆ, ಯಾವುದೇ ಉತ್ತರ ನೀಡಲಿಲ್ಲʼ ಎಂದು ದುಃಖಿಸಿದರು. ಈ ದುರ್ಘಟನೆ ಮತ್ಯಾರಿಗೂ ಆಗದಿರಲಿ ಎಂದು ಕಣ್ಣೀರಿಟ್ಟರು.
ಹೆಚ್ಚಿನ ಓದಿಗಾಗಿ: ‘ತೆಲುಗಿನ ಕ್ರೈಮ್ ಸಿನೆಮಾಗಳೇ ಪ್ರೇರಣೆ’; ನಿವೃತ್ತ ಯೋಧ ಸುರೇಶ್ ಕೊಲೆ ಆರೋಪಿಗಳು ಅರೆಸ್ಟ್