Site icon Vistara News

Rahul Gandhi: ‘ಅನರ್ಹಗೊಂಡ ಸಂಸದ’ ಎಂದು ಟ್ವಿಟರ್ ಸ್ಟೇಟಸ್​ನಲ್ಲಿ ಬರೆದುಕೊಂಡ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ

Rahul Gandhi Changed his twitter Account Status As Disqualified MP

#image_title

ನವ ದೆಹಲಿ: ರಾಹುಲ್ ಗಾಂಧಿಯವರು ಲೋಕಸಭೆ ಸದಸ್ಯ ಸ್ಥಾನದಿಂದ ಅನರ್ಹಗೊಂಡ ಬೆನ್ನಲ್ಲೇ ತಮ್ಮ ಟ್ವಿಟರ್​​ನ ಪ್ರೊಫೈಲ್​​ನಲ್ಲಿ ಸ್ಟೇಟಸ್​ ಬದಲಿಸಿಕೊಂಡಿದ್ದಾರೆ. 2019ರಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ ಭರದಲ್ಲಿ ‘ಎಲ್ಲ ಕಳ್ಳರ ಉಪನಾಮಗಳೂ ಮೋದಿ ಎಂದೇ ಇರುತ್ತವಲ್ಲ, ಯಾಕೆ?’ ಎಂದು ಕೇಳಿದ್ದರು. ಈ ಮೂಲಕ ನೀರವ್​ ಮೋದಿ, ಲಲಿತ್ ಮೋದಿಯನ್ನು ಉಲ್ಲೇಖಿಸಿ, ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯಮಾಡಿದ್ದರು. ಆದರೆ ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ದೂರು ದಾಖಲಿಸಿ, ಮಾನನಷ್ಟ ಮೊಕದ್ದಮೆ ಹೂಡಿದ್ದರು. ಅದರಲ್ಲಿ ಅವರು ದೋಷಿ ಎಂದು ಸಾಬೀತಾಗಿದೆ. ರಾಹುಲ್ ಗಾಂಧಿಗೆ 2ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿ ಸೂರತ್ ಕೋರ್ಟ್ ತೀರ್ಪು ನೀಡಿದೆ. ಅದರ ಬೆನ್ನಲ್ಲೇ ಅವರನ್ನು ಸಂಸದನ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.

ಅದರ ಬೆನ್ನಲ್ಲೇ ರಾಹುಲ್ ಗಾಂಧಿ ತಮ್ಮ ಟ್ವಿಟರ್​ನಲ್ಲಿ ಪ್ರೊಫೈಲ್​ ಫೋಟೋದ ಕೆಳಗೆ ಸ್ಟೇಟಸ್​ ಬದಲಿಸಿಕೊಂಡಿದ್ದಾರೆ. ‘ಭಾರತೀಯ ಕಾಂಗ್ರೆಸ್ ಪಕ್ಷದ ಸದಸ್ಯ, ಅನರ್ಹಗೊಂಡ ಸಂಸದ (Member of the Indian National Congress | Dis’Qualified MP) ಎಂದು ಬದಲಿಸಿಕೊಂಡಿದ್ದಾರೆ. ಇಷ್ಟುದಿನ ಅಲ್ಲಿ ವಯಾನಾಡ್ ಸಂಸದ ಎಂದು ಇತ್ತು. ರಾಹುಲ್ ಗಾಂಧಿಯವರು ಒಂದು ರೀತಿ ಪ್ರತಿಭಟನಾರ್ಥವಾಗಿ ಹೀಗೆ ಸ್ಟೇಟಸ್​ ಹಾಕಿಕೊಂಡಿದ್ದಾರೆ ಎಂದೇ ಭಾವಿಸಲಾಗುತ್ತಿದೆ. ಅಷ್ಟೇ ಅಲ್ಲ, ನಾನು ಅನರ್ಹಗೊಂಡಿದ್ದೇನೆ, ಅದನ್ನು ಹೇಳಿಕೊಳ್ಳಲು ನನಗೆ ಯಾವುದೇ ಮುಜುಗರವೂ ಇಲ್ಲ ಎಂಬುದನ್ನು ಅವರು ತೋರಿಸುತ್ತಿದ್ದಾರೆ.

ರಾಹುಲ್ ಗಾಂಧಿಯವರು ತಾವು 2019ರಲ್ಲಿ ನೀಡಿದ್ದ ಹೇಳಿಕೆಗೆ ಕ್ಷಮೆ ಕೇಳಿದ್ದರೆ ಅವರಿಗೆ ಕೋರ್ಟ್​​ನಲ್ಲಿ ಶಿಕ್ಷೆಯೂ ಆಗುತ್ತಿರಲಿಲ್ಲ. ಅಷ್ಟೇ ಅಲ್ಲ, ಲೋಕಸಭೆ ಸದಸ್ಯನ ಸ್ಥಾನದಿಂದಲೂ ಅನರ್ಹ ಆಗುತ್ತಿರಲಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ರಾಹುಲ್ ಗಾಂಧಿಯವರು ತಾವು ಯಾವ ಕಾರಣಕ್ಕೂ ಯಾವುದೇ ವಿಚಾರವಾಗಿಯೂ ಕ್ಷಮೆ ಕೇಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ. ನಾನು ಮಾತನಾಡಿದರೆ ಪ್ರಧಾನಿಯವರು, ಬಿಜೆಪಿ ಪಕ್ಷ ಭಯಬೀಳುತ್ತದೆ ಎಂಬುದು ನನಗೆ ಗೊತ್ತು. ನಾನು ಕ್ಷಮೆ ಕೇಳಲು ಸಾವರ್ಕರ್​ ಅಲ್ಲ, ಗಾಂಧಿ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಹೀಗೆ ಸುದ್ದಿಗೋಷ್ಠಿ ಬೆನ್ನಲ್ಲೇ ಟ್ವಿಟರ್​​ನಲ್ಲಿ ಬಯೋ ಚೇಂಜ್​ ಮಾಡಿ, ನಾನು ಅನರ್ಹಗೊಂಡ ಸಂಸದ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಚುನಾವಣೆ ಮೇಲೆ ಕಣ್ಣಿಟ್ಟು ಹುತಾತ್ಮನಂತೆ ನಟಿಸ್ತಾ ಇರೋ ರಾಹುಲ್ ಗಾಂಧಿ: ಬಿಜೆಪಿ

Exit mobile version