Site icon Vistara News

Parliament Budget Session: ಲೋಕಸಭೆಯಲ್ಲಿ ಅದಾನಿ ಜತೆಗಿನ ಮೋದಿ ಫೋಟೋ ಪ್ರದರ್ಶಿಸಿದ ರಾಹುಲ್ ಗಾಂಧಿ

Notice To Rahul Gandhi

ನವದೆಹಲಿ: ಬಜೆಟ್ ಅಧಿವೇಶನ ಆರಂಭವಾದ ಬಳಿಕ, ಫೆ.1ರಂದು ಬಜೆಟ್ ಮಂಡಿಸಲಾಯಿತು. ಆ ನಂತರ 6 ದಿನಗಳಿಂದ, ಅಧಿವೇಶನ ಕಲಾಪವನ್ನು ಅದಾನಿ ಷೇರು ವ್ಯವಹಾರ ಗಲಾಟೆಯೇ ನುಂಗಿತ್ತು. ಫೆ.7 ಮಂಗಳವಾರ ಬೆಳಗ್ಗೆ ಕೂಡ ಇದೇ ಕಾರಣಕ್ಕೆ ಕಲಾಪ ನಡೆಸಲು ಉಭಯ ಸದನಗಳಿಗೆ ಸಾಧ್ಯವಾಗಿರಲಿಲ್ಲ. ಆದರೆ, ಮಂಗಳವಾರ ಮಧ್ಯಾಹ್ನ, ಲೋಕಸಭೆಯಲ್ಲಿ ಕಲಾಪ ನಡೆಯಿತು(Parliament Budget Session). ಈ ವೇಳೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅದಾನಿ ವಿಷಯವನ್ನು ಮುಂದಿಟ್ಟುಕೊಂಡು ಪಿಎಂ ಮೋದಿ ಮತ್ತು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿಯವರ ಆರೋಪಕ್ಕೆ ಕೇಂದ್ರ ಕಾನೂನು ಸಚಿವ ಕಿರಣ್​ ರಿಜಿಜು ಕಟುವಾಗಿ ಪ್ರತಿಕ್ರಿಯೆ ನೀಡಿದರು. ಬಾಯಿಗೆ ಬಂದಂತೆ ಏನೇನೋ ಮಾತನಾಡಿ, ಇಲ್ಲಸಲ್ಲದ ಆರೋಪ ಮಾಡಬೇಡಿ. ನಿಮ್ಮ ಆರೋಪಗಳಿಗೆಲ್ಲ ತಕ್ಕ ಸೂಕ್ತ ಪುರಾವೆಗಳನ್ನು ಒದಗಿಸಿ ಎಂದು ಹೇಳಿದರು. ಆಗ, ಲೋಕಸಭೆಯಲ್ಲಿ ರಾಹುಲ್ ಗಾಂಧಿಯವರು ಪ್ರಧಾನಿ ಮೋದಿ-ಗೌತಮ್​ ಅದಾನಿ ಫೋಟೋ ಪ್ರದರ್ಶಿಸಿದರು. ಆದರೆ, ಸ್ಪೀಕರ್ ಓಂಬಿರ್ಲಾ ಇದಕ್ಕೆ ತಮ್ಮ ಅಸಮ್ಮತಿ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸ ಕೈಗೊಂಡಾಗಲೆಲ್ಲ ಗೌತಮ್ ಅದಾನಿ ನೇತೃತ್ವದ ಕಂಪನಿಗಳಿಗೆ ಲಾಭವಾಗಿದೆ. ಸಾಕಷ್ಟು ವ್ಯವಹಾರಿಕ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ ಎಂದು ರಾಹುಲ್ ಗಾಂಧಿ ಅವರು ಹೇಳಿದರು.

ಇದನ್ನೂ ಓದಿ: Parliament Budget Session: ಮೋದಿ-ಅದಾನಿ ನಡುವಿನ ಸಂಬಂಧ ಎಂಥದ್ದು? ಪಿಎಂಗೆ 6 ಪ್ರಶ್ನೆ ಎಸೆದ ರಾಹುಲ್ ಗಾಂಧಿ

ಪ್ರಧಾನಿ ಮೋದಿ ಅವರು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡರು. ಬಳಿಕ ಎಸ್ಐಬಿ ಬ್ಯಾಂಕ್ ಅದಾನಿ ಕಂಪನಿಗೆ ಬಿಲಿಯನ್ ಡಾಲರ್ ಸಾಲ ನೀಡಿತು. ಪ್ರಧಾನಿ ಮೋದಿ ಬಾಂಗ್ಲಾದೇಶಕ್ಕೆ ತೆರಳಿದ ಕೆಲವೇ ದಿನಗಳಲ್ಲಿ, ಅಲ್ಲಿನ ವಿದ್ಯುತ್ ಪೂರೈಕೆಯ ಒಪ್ಪಂದವನ್ನು 25 ವರ್ಷಗಳ ಕಾಲ ಅದಾನಿಗೆ ನೀಡಲಾಗುತ್ತದೆ. ಹಾಗೆಯೇ, 2022ರ ಜೂನ್ ತಿಂಗಳಲ್ಲಿ ಮೋದಿ ಅವರ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದರು. ಅಧ್ಯಕ್ಷ ರಾಜಪಕ್ಸೆ ಜತೆ ಮಾತುಕತೆ ನಡೆಸಿದರು. ಬಳಿಕ, ರಾಜಪಕ್ಸೆ ಅವರು ವಿಂಡ್ ಪವರ್ ಉತ್ಪಾದನೆಗೆ ಅದಾನಿ ಹೆಸರನ್ನು ಸೂಚಿಸಿದ್ದಾರೆಂದು ಅಲ್ಲಿನ ಅಧಿಕಾರಿಗಳೇ ಬಹಿರಂಗವಾಗಿ ಹೇಳಿದ್ದರು ಎಂದ ರಾಹುಲ್ ಗಾಂಧಿ ಅವರು, ಹೇಗೆ ಮೋದಿ ಮೂಲಕ ಅದಾನಿ ಲಾಭ ಮಾಡಿಕೊಳ್ಳುತ್ತಿದ್ದಾರೆಂದು ವಿವರಿಸಿದರು.

Exit mobile version