Site icon Vistara News

Independence Day | ಮೋದಿ ಪರಿವಾರವಾದ ಟಾಂಗ್‌ಗೆ ರಾಹುಲ್‌ ಗಾಂಧಿ ಪ್ರತಿಕ್ರಿಯೆ ಏನು?

Rahul Gandhi

ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸ್ವಾತಂತ್ರ್ಯ ದಿನದ (Independence Day) ಭಾಷಣದ ವೇಳೆ ಪ್ರಸ್ತಾಪಿಸಿದ ಭ್ರಷ್ಟಾಚಾರ ಹಾಗೂ ಪರಿವಾರವಾದದ ಕುರಿತು ದೇಶಾದ್ಯಂತ ಚರ್ಚೆಯಾಗುತ್ತಿದೆ. ಒಂದಷ್ಟು ಜನ ಬಿಜೆಪಿಯಲ್ಲೂ ಪರಿವಾರವಾದ ಇದೆ ಎಂದು ಟೀಕಿಸಿದ್ದಾರೆ. ಇದರ ಬೆನ್ನಲ್ಲೇ, ಭ್ರಷ್ಟಾಚಾರ ಹಾಗೂ ಪರಿವಾರವಾದದ ಪ್ರಸ್ತಾಪದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಲು ಕಾಂಗ್ರೆಸ್‌ ನಾಯಕ ರಾಹುಲ್ (Rahul Gandhi) ಗಾಂಧಿ ನಿರಾಕರಿಸಿದ್ದಾರೆ.

ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ನಾಯಕ, “ನಾನು ಇಂತಹ ವಿಷಯಗಳ ಕುರಿತು ಮಾತನಾಡಲು ಇಷ್ಟಪಡುವುದಿಲ್ಲ. ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು” ಎಂದಷ್ಟೇ ಹೇಳಿದ್ದಾರೆ. ಕುಟುಂಬ ರಾಜಕಾರಣ ಹೆಚ್ಚಿರುವ ಕಾಂಗ್ರೆಸ್‌ ಸೇರಿ ಹಲವು ಪಕ್ಷಗಳ ಹೆಸರನ್ನು ಉಲ್ಲೇಖಿಸದೆ ಮೋದಿ ಟಾಂಗ್‌ ನೀಡಿದ್ದರು. ಹಾಗಾಗಿ, ಈ ಕುರಿತು ರಾಹುಲ್‌ ಗಾಂಧಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಕುತೂಹಲ ಇತ್ತು. ಆದರೆ, ಇದರ ಬಗ್ಗೆ ಮಾತನಾಡಲು ಅವರು ನಕಾರ ವ್ಯಕ್ತಪಡಿಸಿದ್ದಾರೆ.

ಕೆಂಪುಕೋಟೆ ಮೇಲಿನ ಭಾಷಣದ ವೇಳೆ ಮೋದಿ ಅವರು ಪ್ರಸ್ತಾಪಿಸಿದ ಪರಿವಾರವಾದದ ಕುರಿತು ಜಾಲತಾಣಗಳಲ್ಲಿ ಟೀಕೆಗಳೂ ವ್ಯಕ್ತವಾಗಿವೆ. ಬಿಜೆಪಿ ನಾಯಕರ ಮಕ್ಕಳು ಸಹ ಶಾಸಕ, ಸಂಸದರಾಗಿರುವುದು, ಉನ್ನತ ಹುದ್ದೆಗಳಲ್ಲಿ ಇರುವುದನ್ನು ಉಲ್ಲೇಖಿಸಿ ಸಾರ್ವಜನಿಕರು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ | Independence Day | ಕೆಂಪು ಕೋಟೆ ಮೇಲೆ ನಿಂತು ಕುಟುಂಬ ರಾಜಕಾರಣ ವಿರುದ್ಧ ಗುಡುಗಿದ ಮೋದಿ

Exit mobile version