ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ದೆಹಲಿಯಿಂದ ಅಹಮದಾಬಾದ್‌ಗೆ ತೆರಳುವಾಗ ವಿಮಾನದಲ್ಲಿ ಮಹಿಳೆಯೊಬ್ಬರಿಗೆ ಲಗೇಜ್ ಇಡಲು ನೆರವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಜನರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಹಾಗೆಯೇ, ರಾಹುಲ್ ಗಾಂಧಿ ಸಹಾಯ ಮಾಡುತ್ತಿರುವ ಫೋಟೊ ವೈರಲ್ ಆಗಿದೆ.
ರಾಹುಲ್ ಗಾಂಧಿ ಅವರು ವಿಮಾನದಲ್ಲಿ ಅಹಮದಾಬಾದ್‌ಗೆ ತೆರಳುತ್ತಿದ್ದರು. ಇದೇ ವೇಳೆ ವಿಮಾನದಲ್ಲಿ ಮಹಿಳೆಯೊಬ್ಬರು ಲಗೇಜ್ ಇಡಲು ಕಷ್ಟ ಪಡುತ್ತಿದ್ದರು. ಇದನ್ನು ನೋಡಿದ ರಾಹುಲ್, ತಾವೇ ಮಹಿಳೆಯ ಲಗೇಜ್ ಇಟ್ಟಿದ್ದಾರೆ. ಮಧ್ಯಪ್ರದೇಶ ಯುವ ಕಾಂಗ್ರೆಸ್ ನಾಯಕ ಅಮನ್ ದುಬೆ ಅವರು ಟ್ವಿಟರ್‌ನಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ.
ಹಾಗಾಗಿ, ಜನರು ರಾಹುಲ್ ಗಾಂಧಿ ಅವರ ಸರಳತೆ, ಸಹಾಯಹಸ್ತ ಚಾಚುವ ಮನೋಭಾವವನ್ನು ಕೊಂಡಾಡಿದ್ದಾರೆ. ಇನ್ನೂ ಒಂದಷ್ಟು ಜನ, “ರಾಹುಲ್ ಗಾಂಧಿ ಅವರು ವಿಮಾನದಲ್ಲಿ ಮಾಸ್ಕ್ ಧರಿಸಿಲ್ಲ” ಎಂದು ಟೀಕಿಸಿದ್ದಾರೆ. ಹಾಗೆಯೇ, ಕಾಂಗ್ರೆಸ್ ನಾಯಕ ಸಹಾಯ ಮಾಡುತ್ತಾರೆ ಎಂದರೆ, ಗಗನಸಖಿಯರು ಏನು ಮಾಡುತ್ತಿದ್ದರು ಎಂದೂ ಒಂದಷ್ಟು ಕಿಡಿಗೇಡಿಗಳು ಕೊಂಕು ನುಡಿದಿದ್ದಾರೆ.
ಇದನ್ನೂ ಓದಿ | ರಾಹುಲ್ ಗಾಂಧಿ ಭೇಟಿ ಮಾಡಿದ ನಿತೀಶ್ ಕುಮಾರ್; ಲೋಕಸಭೆ ಚುನಾವಣೆ ಪೂರ್ವ ಒಗ್ಗಟ್ಟಿನ ಮಂತ್ರ