Site icon Vistara News

ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ; ಕೇಂಬ್ರಿಡ್ಜ್​ ವಿವಿ ಉಪನ್ಯಾಸದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ

Rahul Gandhi submits reply to Delhi Police over Bharat Jodo Yatra speech

ರಾಹುಲ್‌ ಗಾಂಧಿ.

ನವ ದೆಹಲಿ: ಭಾರತ್ ಜೋಡೋ ಯಾತ್ರೆ ಹೆಸರಿನಲ್ಲಿ 4000 ಕಿಮೀ ಹೆಚ್ಚಿನ ದೂರ ಪಾದಯಾತ್ರೆ ನಡೆಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಸದ್ಯ ಲಂಡನ್​ ಪ್ರವಾಸದಲ್ಲಿದ್ದಾರೆ. ಅವರು ಅಲ್ಲಿನ ಕೇಂಬ್ರಿಡ್ಜ್​ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಿದ್ದಾರೆ. ಈ ವೇಳೆ ಅವರು ಭಾರತ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳಿದ್ದು, ಈ ಬಗ್ಗೆ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ. ರಾಹುಲ್ ಗಾಂಧಿಯನ್ನು ಟೀಕಿಸಿದೆ.

ಕೆಂಬ್ರಿಡ್ಜ್​ ಯೂನಿವರ್ಸಿಟಿಯಲ್ಲಿ ಉಪನ್ಯಾಸ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತ್ಯಗತ್ಯವಾಗಿರುವ ಸಾಂಸ್ಥಿಕ ಚೌಕಟ್ಟನ್ನು ನಿರ್ಬಂಧಿಸಲಾಗುತ್ತಿದೆ. ಪ್ರಜಾಪ್ರಭುತ್ವದ ಮೂಲ ಸ್ವರೂಪವೇ ದಾಳಿಗೆ ಒಳಗಾಗಿದೆ’ ಎಂದು ಹೇಳಿದರು. ಅಷ್ಟೇ ಅಲ್ಲ, ‘ಇಸ್ರೇಲ್​ ಮೂಲದ ಪೆಗಾಸಸ್​ ಸ್ಪೈವೇರ್​ ಮೂಲಕ ನನ್ನ ಮತ್ತು ಇತರ ಹಲವರ ಮೇಲೆ ಕೇಂದ್ರ ಸರ್ಕಾರ ಬೇಹುಗಾರಿಕೆ ನಡೆಸುತ್ತಿದೆ. ನಮ್ಮ ಮೊಬೈಲ್​​ಗಳೆಲ್ಲ ಪೆಗಾಸಸ್​ ಕಣ್ಗಾವಲಿನಲ್ಲಿ ಇದೆ’ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: Rahul Gandhi: ಇಂಗ್ಲೆಂಡ್‌ನ ಕೇಂಬ್ರಿಡ್ಜ್ ಯುನಿವರ್ಸಿಟಿ ಬಿಸಿನೆಸ್ ಸ್ಕೂಲ್‌ಲ್ಲಿ ರಾಹುಲ್ ಗಾಂಧಿ ವಿಶೇಷ ಉಪನ್ಯಾಸ

ರಾಹುಲ್​ ಗಾಂಧಿ ಅವರು ಕೆಂಬ್ರಿಡ್ಜ್​ ಜಡ್ಜ್​ ಬಿಜಿನೆಸ್​ ಸ್ಕೂಲ್​ನಲ್ಲಿ ‘ಲರ್ನಿಂಗ್​ ಟು ಲಿಸನ್​ ಇನ್​ ದಿ 21 ಸೆಂಚುರಿ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ್ದಾರೆ. ಇದರಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ. ‘ಭಾರತದಲ್ಲಿ ಕೇಂದ್ರ ಸರ್ಕಾರ ಎಲ್ಲವನ್ನೂ ಸೆರೆಯಾಳಾಗಿಸಿಕೊಂಡಿದೆ. ಮಾಧ್ಯಮಗಳು, ನ್ಯಾಯಾಂಗ ವ್ಯವಸ್ಥೆಯನ್ನು ನಿಯಂತ್ರಿಸುತ್ತಿದೆ. ದಲಿತರು, ಅಲ್ಪಸಂಖ್ಯಾತರು, ಬುಡಕಟ್ಟು ಜನಾಂಗದವರ ಮೇಲೆ ನಿರಂತರ ದಾಳಿಯಾಗುತ್ತಿದೆ. ಯಾರೇ ಸರ್ಕಾರದ ವಿರುದ್ಧ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದರೂ ಅವರನ್ನು ಹತ್ತಿಕ್ಕಲಾಗುತ್ತಿದೆ’ ಎಂದೂ ಹೇಳಿದ್ದಾರೆ. ಹೀಗೆ ಉಪನ್ಯಾಸದ ಹೆಸರಲ್ಲಿ ಅವರು ಕೇಂದ್ರ ಸರ್ಕಾರದ ಬಗ್ಗೆ ಮಾತನಾಡಿದ್ದನ್ನು ಬಿಜೆಪಿ ಟೀಕಿಸಿದೆ.

ಸಚಿವ ಅನುರಾಗ್​ ಠಾಕೂರ್ ತಿರುಗೇಟು

ಹೀಗೆ ಕೇಂಬ್ರಿಡ್ಜ್​ ಯೂನಿವರ್ಸಿಟಿಯಲ್ಲಿ ಉಪನ್ಯಾಸ ನೀಡುತ್ತ ಪೆಗಾಸಸ್​, ಪ್ರಜಾಪ್ರಭುತ್ವಕ್ಕೆ ಅಪಾಯ ಎಂಬಿತ್ಯಾದಿ ವಿಷಯಗಳ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ರಾಹುಲ್ ಗಾಂಧಿಯವರಿಗೆ ಕೇಂದ್ರ ಸಚಿವ ಅನುರಾಗ್​ ಠಾಕೂರ್​ ತಿರುಗೇಟು ಕೊಟ್ಟಿದ್ದಾರೆ. ‘ಪೆಗಾಸಸ್​ ಇರುವುದು ರಾಹುಲ್ ಗಾಂಧಿ ತಲೆಯಲ್ಲಿ. ರಾಹುಲ್ ಗಾಂಧಿಯವರು ವಿದೇಶಿ ನೆಲದಲ್ಲಿ ನಿಂತು ಸುಮ್ಮನೆ ಬಾಯಿಗೆ ಬಂದಿದ್ದನ್ನು ಹೇಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಡಿ ಭಾರತಕ್ಕೆ ಜಾಗತಿಕವಾಗಿ ಮನ್ನಣೆ-ಗೌರವ ಸಿಕ್ಕಿದೆ. ಅದನ್ನು ವಿಶ್ವದ ಹಲವು ನಾಯಕರು ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ನಿಂತು ಭಾರತದ ಬಗ್ಗೆ ಇಲ್ಲದ್ದನ್ನು ಹೇಳುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಇನ್ನು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್​ ಪೂನಾವಾಲಾ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿ ‘ಪೆಗಾಸಸ್​ ಸ್ಪೈವೇರ್ ಬಳಕೆ ಬಗ್ಗೆ ಯಾವುದೇ ಪುರಾವೆ ಇಲ್ಲ ಎಂದು ಸುಪ್ರೀಂಕೋರ್ಟ್​ ಹೇಳಿದೆ. ಪೆಗಾಸಸ್​ ಬಳಕೆ ಮಾಡಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದ್ದರೂ, ರಾಹುಲ್ ಗಾಂಧಿ ಅದರ ಬಗ್ಗೆ ಸುಳ್ಳು ಮಾಹಿತಿ ಹಬ್ಬಿಸುತ್ತಲೇ ಇದ್ದಾರೆ. ವಂಶ ರಾಜಕಾರಣಕ್ಕೆ ಹೆಸರಾದ ಇವರು ಸರಣಿ ಅಪರಾಧಿ. ರಾಹುಲ್ ಗಾಂಧಿ ತಮಗೆ ಒಬ್ಬ ವ್ಯಕ್ತಿಯ ಮೇಲೆ ಇರುವ ದ್ವೇಷವನ್ನು (ಪ್ರಧಾನಿ ಮೋದಿ), ದೇಶದ ಮೇಲಿನ ದ್ವೇಷವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಪದೇಪದೇ ಅದನ್ನು ಸಾಕ್ಷೀಕರಿಸುತ್ತಿದ್ದಾರೆ. ಅವರ ಅಜ್ಜಿ ಹಿಂದೊಮ್ಮೆ ತುರ್ತು ಪರಿಸ್ಥಿತಿ ಘೋಷಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಆ ಕುಟುಂಬದಿಂದಲೇ ಬಂದವರು ಪ್ರಜಾಪ್ರಭುತ್ವದ ಬಗ್ಗೆ ಇನ್ನೇನು ಹೇಳಲು ಸಾಧ್ಯ? ದಾಳಿಯಾಗಿದೆ ಎಂದೇ ಹೇಳಬೇಕು’ ಎಂದು ಶೆಹಜಾದ್​ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿಯ ಬದಲಾದ ಲುಕ್, ಉದ್ದನೆಯ ಗಡ್ಡಕ್ಕೆ ಕತ್ತರಿ, ಕೇಂಬ್ರಿಡ್ಜ್ ವಿವಿಯಲ್ಲಿ ಉಪನ್ಯಾಸ

ಕೇಂದ್ರ ಸರ್ಕಾರ ಬುಡಕಟ್ಟು ಜನಾಂಗದವರು, ದಲಿತರು, ಅಲ್ಪಸಂಖ್ಯಾತರನ್ನು ನಿರ್ಲಕ್ಷಿಸಿದೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಭಾರತ್​ ಜೋಡೋ ಯಾತ್ರೆಯಂಥ ಅದ್ಭುತ ಪ್ರದರ್ಶನ ನೀಡಿದ ಮೇಲೆ ಕೂಡ ಅಲ್ಪಸಂಖ್ಯಾತ, ಬುಡಕಟ್ಟು ಜನಾಂಗದವರೇ ಹೆಚ್ಚಾಗಿರುವ ಮೂರು ರಾಜ್ಯಗಳಲ್ಲಿ ಆ ಪಕ್ಷವನ್ನು ಮೂಲೆಗುಂಪು ಮಾಡಲಾಗಿದೆ. ಆ ಪಕ್ಷಕ್ಕೆ ಸ್ಪಷ್ಟ ತಿರಸ್ಕಾರ ವ್ಯಕ್ತವಾಗಿದೆ ಎಂದು ಹೇಳಿದರು.

Exit mobile version