ಶ್ರೀನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಹಲವು ತಿಂಗಳುಗಳಿಂದ ಭಾರತ್ ಜೋಡೋ ಯಾತ್ರೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವಾರು ರಾಜ್ಯಗಳನ್ನು ಕಾಲ್ನಡಿಗೆಯಲ್ಲೇ ಸುತ್ತಿರುವ ನಾಯಕ ಇದೀಗ ಗುಲ್ಮರ್ಗ್‌ನಲ್ಲಿ ತಮ್ಮ ಖಾಸಗಿ ಕ್ಷಣಗಳನ್ನು ಆನಂದಿಸುತ್ತಿದ್ದಾರೆ. ಹಿಮದ ನಡುವೆ ಸ್ಕೈಯಿಂಗ್ ಮಾಡುತ್ತಿದ್ದಾರೆ. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಇದನ್ನೂ ಓದಿ: Viral News : ಹರಿದ ಜೀನ್ಸ್ ತೊಟ್ಟಿದ್ದ ವಿದ್ಯಾರ್ಥಿನಿ ಕಾಲಿಗೇ ಟೇಪ್ ಹಚ್ಚಿದ ಟೀಚರ್! ಆ ಸ್ಟೂಡೆಂಟ್ ತಾಯಿ ಮಾಡಿದ್ದೇನು?
ರಾಹುಲ್ ಸ್ಕೈಯಿಂಗ್ ಮಾಡುತ್ತಿರುವ ವಿಡಿಯೊವನ್ನು ಟ್ವಿಟರ್ ಖಾತೆಯೊಂದರಲ್ಲಿ ಹಂಚಿಕೊಳ್ಳಲಾಗಿದೆ. “ಭಾರತ್ ಜೋಡೋ ಯಾತ್ರೆ ಯಶಸ್ವಿಯಾದ ಹಿನ್ನೆಲೆ ರಾಹುಲ್ ಖಾಸಗಿ ಸಮಯವನ್ನು ಅನುಭವಿಸುತ್ತಿದ್ದಾರೆ” ಎಂದು ವಿಡಿಯೊಗೆ ಕ್ಯಾಪ್ಶನ್ ನೀಡಲಾಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣದ ತುಂಬೆಲ್ಲ ಹರಿದಾಡಿದ್ದು, ಅನೇಕರು ವಿಡಿಯೊಗೆ ಲೈಕ್ ಒತ್ತಿದ್ದಾರೆ. ಹಲವರು ರಾಹುಲ್ ಅವರನ್ನು ಪ್ರಶಂಶಿಸಿ ಕಾಮೆಂಟ್ ಕೂಡ ಮಾಡಿದ್ದಾರೆ.
ರಾಹುಲ್ ಅವರು ಗುಲ್ಮರ್ಗ್ ಅಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲೂ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಪ್ರವಾಸಿ ತಾಣದಲ್ಲಿ ಸುತ್ತಾಡಿರುವ ಅವರು ಅಲ್ಲಿರುವ ಪ್ರವಾಸಿಗಳೊಂದಿಗೆ ಸೆಲ್ಫೀಗಳಿಗೂ ಫೋಸ್ ಕೊಟ್ಟಿದ್ದಾರೆ. ರಾಹುಲ್ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಒಟ್ಟು 3970 ಕಿ.ಮೀ.ಗಳ ಭಾರತ್ ಜೋಡೋ ಯಾತ್ರೆ ನಡೆಸಿದ್ದಾರೆ. ಕಳೆದ ತಿಂಗಳು ಕಾಶ್ಮೀರದಲ್ಲಿ ಯಾತ್ರೆ ಕೊನೆಗಂಡಿತು.