Site icon Vistara News

Bharat Jodo Yatra | ಮೋದಿ -ಕೆಸಿಆರ್​ ವೈರಿಗಳಲ್ಲ, ಅವರಿಬ್ಬರ ಬಲೆಗೆ ಬೀಳಬೇಡಿ; ತೆಲಂಗಾಣ ಜನರಿಗೆ ರಾಹುಲ್​ ಗಾಂಧಿ ಕರೆ

Bomb Threat for Rahul Gandhi

ಹೈದರಾಬಾದ್: ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ತೆಲಂಗಾಣಕ್ಕೆ ಕಾಲಿಟ್ಟಿದೆ. ರಾಹುಲ್ ಗಾಂಧಿ ಮತ್ತು ಇತರ ನಾಯಕರು ಉತ್ಸಾಹದಿಂದ ಪಾದಯಾತ್ರೆ ನಡೆಸುತ್ತಿದ್ದಾರೆ. ಹೀಗೆ ಮಂಗಳವಾರದ ಯಾತ್ರೆ ಮಧ್ಯೆ ಸಾರ್ವಜನಿಕರನ್ನು, ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ತೆಲಂಗಾಣ ಸರ್ಕಾರ, ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕೆಸಿಆರ್ ಅವರು ಪ್ರಧಾನಿ ಮೋದಿಯವರೊಂದಿಗೆ ನೇರವಾಗಿ ಸಂಪರ್ಕದಲ್ಲಿದ್ದಾರೆ. ಅವರು ಒಳಗೊಳಗೇ ಉತ್ತಮ ಸ್ನೇಹ ಹೊಂದಿದ್ದರೂ, ಹೊರಗಿನಿಂದ ತಾವು ಬಿಜೆಪಿ ಮತ್ತು ಪ್ರಧಾನಿ ಮೋದಿಯ ವೈರಿಗಳೆಂದು ತೋರಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಹಾಗೆ, ಕೆಸಿಆರ್ ಸರ್ಕಾರ ತೆಲಂಗಾಣ ಜನರ ಹಿತಾಸಕ್ತಿ ನೋಡುತ್ತಿಲ್ಲ ಎಂದೂ ಹೇಳಿದರು.

ಬಿಜೆಪಿ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷಗಳೆರಡೂ ಒಂದೇ. ಅವುಗಳ ಕಾರ್ಯ ವೈಖರಿಯೂ ಒಂದೇ ತರಹ ಇರುತ್ತದೆ. ಆದರೆ ಜನರ ಕಣ್ಣಿಗೆ ತಾವು ವಿರುದ್ಧ ಎಂಬ ಮಂಕುಬೂದಿ ಎರಚುತ್ತಿವೆ. ಯಾವತ್ತೂ ಅವರ ಬಲೆಯಲ್ಲಿ ಬೀಳಬೇಡಿ ಎಂದು ಹೇಳಿದ ರಾಹುಲ್​ ಗಾಂಧಿ, ’ಬಿಜೆಪಿ ಸಿದ್ಧಾಂತ ವಿರೋಧಿಸುತ್ತೇವೆ. ಬಿಜೆಪಿಯೇತರ ಸರ್ಕಾರ ಬೇಕು ಎಂದೆಲ್ಲ ಕೆ.ಚಂದ್ರಶೇಖರ್​ ರಾವ್ ಹೇಳುತ್ತಾರೆ. ಆದರೆ ಕೇಂದ್ರ ಸರ್ಕಾರ ಯಾವುದೇ ಮಸೂದೆಯನ್ನು ಮಂಡಿಸಿದರೂ ಅದಕ್ಕೆ ಟಿಆರ್​ಎಸ್​​ ಬೆಂಬಲ ಸಂಪೂರ್ಣವಾಗಿ ಇದ್ದೇ ಇರುತ್ತದೆ. ಅವೆರಡರಲ್ಲೂ ಪರಸ್ಪರ ಹೊಂದಾಣಿಕೆ ಇದೆ. ಕೆಸಿಆರ್ ಅವರು ಪ್ರಧಾನಿ ಮೋದಿಯಿಂದ ನೇರವಾಗಿಯೇ ಆದೇಶಗಳನ್ನು ಪಡೆಯುತ್ತಾರೆ ಅದರಂತೆ ತೆಲಂಗಾಣದಲ್ಲಿ ಆಡಳಿತ ನಡೆಸುತ್ತಾರೆ. ಪ್ರಧಾನಿ ಮೋದಿ ಮತ್ತು ಕೆಸಿಆರ್ ಮಧ್ಯೆ ಯಾವುದೇ ವ್ಯತ್ಯಾಸ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ: Viral Video | ಭಾರತ್ ಜೋಡೋ ಯಾತ್ರೆಯಲ್ಲಿ ಒಮ್ಮೆಲೇ ಜೋರಾಗಿ ಓಡಲು ಶುರು ಮಾಡಿದ ರಾಹುಲ್ ಗಾಂಧಿ!

Exit mobile version