ನವ ದೆಹಲಿ: ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಶೂ ಎಸೆದ ಘಟನೆ ನಡೆದ ಬೆನ್ನಲ್ಲೇ, ರಾಜಸ್ಥಾನದ ಕ್ರೀಡಾ ಸಚಿವ ಅಶೋಕ್ ಚಂದನ ಅವರು ಮಾಜಿ ಡಿಸಿಎಂ ಸಚಿನ್ ಪೈಲಟ್ (Sachin Pilot) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಈಗಲೇ ಹೀಗೆ…. ಮುಂದೊಂದು ದಿನ, ಒಂದು ವೇಳೆ ಅವರೇನಾದರೂ ಮುಖ್ಯಂತ್ರಿಯಾದರೆ…. ಅಷ್ಟೇ” ಎಂದು ಟೀಕಿಸಿದ್ದಾರೆ.
“ಸಚಿನ್ ಪೈಲಟ್ ನನ್ನ ಮೇಲೆ ಶೂ ಎಸೆದು ಮುಖ್ಯಮಂತ್ರಿಯಾದರೆ, ಅವರನ್ನು ಶೀಘ್ರದಲ್ಲೇ ಸಿಎಂ ಮಾಡಬೇಕು. ಏಕೆಂದರೆ ಇಂದು ನನಗೆ ಜಗಳವಾಡಲು ಮನಸ್ಸಿಲ್ಲ, ನಾನು ಹೋರಾಡಲು ಬರುವ ದಿನ ಒಬ್ಬರೇ ಉಳಿಯಬೇಕಾಗುತ್ತದೆ. ನನಗೆ ಈ ರೀತಿಯಾಗುವುದು ಇಷ್ಟವಿಲ್ಲ” ಎಂದು ಸಚಿವ ಅಶೋಕ್ ಚಂದನ ಅವರು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ರಾಜಸ್ಥಾನದಲ್ಲಿ ಶೈಕ್ಷಣಿಕ ಸಂಸ್ಥೆಗಳು ಮತ್ತು ಸರ್ಕಾರದಲ್ಲಿ ಮೀಸಲಿಗೆ ಆಗ್ರಹಿಸಿ ಕರ್ನಲ್ ಕಿರೋರಿ ಸಿಂಗ್ ಬೈನ್ಸ್ಲಾ ಅವರು ಅನೇಕ ಹೋರಾಟದ ನೇತೃತ್ವವನ್ನು ವಹಿಸಿದ್ದರು. ಇತ್ತೀಚೆಗೆ ಅವರ ಚಿತಾಭಸ್ಮ ವಿಸರ್ಜನೆಯ ಸಮಾರಂಭವನ್ನು ಆಯೋಜಿಸಲಾಗಿತ್ತು. ಕಾಂಗ್ರೆಸ್ ಹಾಗೂ ಬಿಜೆಪಿಯ ನಾಯಕರು ಭಾಗವಹಿಸಿದ್ದ ಈ ಸಮಾರಂಭದಲ್ಲಿ ಶೂ ಎಸದೆ ಘಟನೆ ನಡೆದಿತ್ತು. ಈ ಕೃತ್ಯ ಸಚಿನ್ ಪೈಲಟ್ ಅವರ ಬೆಂಬಲಿಗರು ಮಾಡಿದ್ದು ಎಂದು ಆರೋಪಿಸಲಾಗುತ್ತಿದೆ.
ಇದನ್ನೂ ಓದಿ | Dalit Boy Death | ರಾಜಸ್ಥಾನ ಸರ್ಕಾರದ ವಿರುದ್ಧ ಕಾಂಗ್ರೆಸಿಗರ ಬೇಸರ; ಶಾಸಕ, ಕೌನ್ಸಿಲರ್ಗಳ ರಾಜೀನಾಮೆ