ತಿರುವನಂತಪುರಂ: ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರ ಹತ್ಯೆಯಾಗುವವರೆಗೆ ಪೈಲಟ್ ಆಗಿದ್ದ ರಾಜೀವ್ ಗಾಂಧಿ (Rajiv Gandhi) ಅವರು, ಇಂದಿರಾ ಹತ್ಯೆಯ ನಂತರ ಪ್ರಧಾನಿಯಾದರು ಎಂಬುದನ್ನು ಓದಿ ತಿಳಿದುಕೊಂಡಿದ್ದೇವೆ. ಆದರೆ, ಅವರು ಪೈಲಟ್ ಆಗಿದ್ದಾಗ ಹೇಗಿದ್ದರು? ಪೈಲಟ್ ಲೈಸೆನ್ಸ್ ಹೇಗಿತ್ತು? ಲೈಸೆನ್ಸ್ ಮೇಲೆ ಅವರ ಫೋಟೊ ಹೇಗಿತ್ತು ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಿದೆ.
ರಾಜೀವ್ ಗಾಂಧಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ರಾಜೀವ್ ಗಾಂಧಿ ಅವರ ಪೈಲಟ್ ಲೈಸೆನ್ಸ್ ಫೋಟೊವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಫೋಟೊ ಈಗ ವೈರಲ್ ಆಗಿದ್ದು, ಸಾವಿರಾರು ಜನ ಪ್ರತಿಕ್ರಿಯಿಸಿದ್ದಾರೆ.
“ರಾಜೀವ್ ಗಾಂಧಿಯವರ ೭೮ನೇ ಜನ್ಮದಿನದ ಹಿನ್ನೆಲೆಯಲ್ಲಿ ಅವರನ್ನು ಸ್ಮರಿಸುತ್ತೇನೆ. ಅವರು ದೇಶವನ್ನು ಮುನ್ನಡೆಸಿದರು. ದೇಶಕ್ಕಾಗಿ ಹಲವು ಕನಸು ಕಂಡಿದ್ದರು. ಆದರೆ, ವಿಧಿಯು ಅವರನ್ನು ನಮ್ಮಿಂದ ದೂರ ಮಾಡಿತು” ಎಂದು ಹೇಳಿದ್ದಾರೆ. ಜನ್ಮದಿನದ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಸಮಾಧಿಸ್ಥಳ ವೀರಭೂಮಿಗೆ ತೆರಳಿ ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್‌ನ ಹಲವು ನಾಯಕರು ನಮನ ಸಲ್ಲಿಸಿದರು.
ಇದನ್ನೂ ಓದಿ | Rajiv Gandhi | ಅಪ್ಪಾ, ಪ್ರತಿ ಕ್ಷಣ ನನ್ನೊಂದಿಗಿದ್ದೀರಿ, ತಂದೆಯ ಜನ್ಮದಿನದಂದು ರಾಹುಲ್ ಭಾವುಕ ನುಡಿ