ಬೆಂಗಳೂರು: ರಾಮ್ ಚರಣ್ (Ram Charan) ಆರ್ ಆರ್ ಆರ್ ಸಿನಿಮಾ ನಾಟು ನಾಟು ಹಾಡಿಗಾಗಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಭಾರತಕ್ಕೆ ಮರಳುತ್ತಿದ್ದಂತೆ ಅವರ ಫ್ಯಾನ್ಸ್ ಸಂಭ್ರಮಾಚರಣೆ ಮಾಡಿದ್ದಾರೆ. ಚಿರಂಜೀವಿ ಕೂಡ ಅದ್ಧೂರಿಯಾಗಿ ಮಗನನ್ನು ಸ್ವಾಗತಿಸಿದ್ದಾರೆ. ರಾಮ್ ಚರಣ್ ಆಗಮಿಸಿದ ಬಳಿಕ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಆಸ್ಕರ್ ಗೆದ್ದು ಬಂದಿರುವ ರಾಮ್ ಚರಣ್ ಅವರನ್ನು ಕೇಂದ್ರ ಸಚಿವ ಅಮಿತ್ ಶಾ ಅಭಿನಂದನೆ ಸಲ್ಲಿಸಿದರು. ಅಮಿತ್ ಶಾ ಅವರಿಗೆ ರಾಮ್‌ಚರಣ್ ಪುಷ್ಪಗುಚ್ಛ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು.
ರಾಮ್‌ಚರಣ್ ಅವರು ಗರ್ಭಿಣಿ ಪತ್ನಿ ಉಪಾಸನಾ ಅವರೊಂದಿಗೆ ದೆಹಲಿಗೆ ಮಾರ್ಚ್ 17ರಂದು ಬಂದಿಳಿದಿದ್ದಾರೆ. ಅಲ್ಲಿ ಅವರು ಕಾನ್‌ಕ್ಲೇವ್ ಒಂದರಲ್ಲಿ ಭಾಗವಹಿಸಲಿದ್ದಾರೆ. ಹಾಗೆಯೇ ಪ್ರಧಾನಿ ಮೋದಿ ಅವರನ್ನೂ ಭೇಟಿಯಾಗಲಿದ್ದಾರೆ ಎಂದು ವರದಿಯಿದೆ. ರಾಮ್‌ಚರಣ್ ದಂಪತಿಯನ್ನು ಕಂಡೊಡನೆ ಅಭಿಮಾನಿಗಳು ಅವರನ್ನು ಸುತ್ತುವರಿದಿದ್ದು, ರಾಮ್‌ಚರಣ್ ಪತ್ನಿಯನ್ನು ಜೋಪಾನವಾಗಿ ಕಾರಿಗೆ ಹತ್ತಿಸಿ, ತಾವು ಕಾರಿಗೆ ಹತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಇದನ್ನೂ ಓದಿ: Actor Ram Charan : ದಿಲ್ಲಿ ಏರ್‌ಪೋರ್ಟ್‌ನಲ್ಲಿ ಪತ್ನಿಯೊಂದಿಗೆ ಕಾಣಿಸಿಕೊಂಡ ನಟ ರಾಮ್ ಚರಣ್, ಅಭಿಮಾನಿಗಳ ಮುತ್ತಿಗೆ
ಆಸ್ಕರ್ ಪ್ರಶಸ್ತಿ ಪಡೆದ ಬಗ್ಗೆ ಮಾತನಾಡಿರುವ ರಾಮ್ ಚರಣ್, “ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ. ರಾಜಮೌಳಿ ಸರ್, ಕೀರವಾಣಿ ಮತ್ತು ಚಂದ್ರಬೋಸ್ ಸರ್ ಅವರ ಬಗ್ಗೆ ನಮಗೆ ಹೆಮ್ಮೆಯಿದೆ. ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಹೀಗೆ ಭಾರತದ ಎಲ್ಲ ಭಾಗದ ಜನರು ಆರ್‌ಆರ್‌ಆರ್ ಸಿನಿಮಾ ನೋಡಿ ಹರಸಿದ್ದಾರೆ. ನಾಟು ನಾಟು ಹಾಡು ನಮ್ಮದಲ್ಲ ಬದಲಾಗಿ ಭಾರತೀಯರದ್ದು” ಎಂದು ಹೇಳಿದ್ದಾರೆ.
ಮಾರ್ಚ್ 17ರಂದು ಬೆಳಗ್ಗೆ, ಆರ್‌ಆರ್‌ಆರ್ ನಿರ್ದೇಶಕ ಎಸ್‌ಎಸ್ ರಾಜಮೌಳಿ ಮತ್ತು ನಾಟು ನಾಟು ಸಂಯೋಜಕ ಎಂ.ಎಂ. ಕೀರವಾಣಿ ಹೈದರಾಬಾದ್‌ಗೆ ಮರಳಿದ್ದಾರೆ. ‘ನಾಟು ನಾಟು’ ಆಸ್ಕರ್‌ನಲ್ಲಿ ‘ಒರಿಜಿನಲ್ ಸಾಂಗ್’ ವಿಭಾಗದಲ್ಲಿ ನಾಮನಿರ್ದೇಶನಗೊಂಡ ಮೊದಲ ತೆಲುಗು ಹಾಡು.